ಅಥಣಿ: ಒಂದು ಒಕ್ಷ ರೂಪಾಯಿ ಲಂಚಕ್ಕೆ ಸಿಪಿಐ ಸಂತೋಷ ಹಳ್ಳೂರ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಭತರ ರೇಡ್ಡಿ ಅವರ ನೇತೃತ್ವದ ತಂಡದಿಂದ ನಿಖರ ಮಾಹಿತಿ ಹಾಗೂ ದೂರು ದಾಖಲಾದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ. ಲೋಕಾಯುಕ್ತದಲ್ಲಿ ಅಥಣಿ ಸಿಪಿಐ ಸಂತೋಷ್ ಹಳ್ಳೂರ ಮೇಲೆ ಎಫ್ ಐ ಆರ್ ದಾಖಲಾಗಿತ್ತು. ಕೇಸ್ ದಾಖಲಿಸಿಕೊಂಡು ಅಥಣಿ ಠಾಣೆ ಮೇಲೆ ಲೋಕಾಯುಕ್ತರ ದಾಳಿ ನಡೆಸಲಾಗಿದೆ, ಮನೆ ಮತ್ತು ಕಛೇರಿಯಲ್ಲಿ ಪರಿಶೀಲನೆ ನಡೆಸಿದ್ದು, ಮೀರಸಾಬ್ ಮುಜಾವರ್ ಎಂಬುವವರಿಂದ ದೂರು ದಾಖಲು ಮಾಡಲಾಗಿತ್ತು. ಅಥಣಿ ನಿವಾಸಿ ಅನುಪಕುಮಾರ್ ನಾಯರ್‌ಗೆ ಮೀರಸಾಬ್ 20 ಲಕ್ಷ ನೀಡಿದ್ದರು. ಎರಡು ಸೈಟ್ ಕೊಡಿಸುವುದಾಗಿ ಹೇಳಿ ಅನುಪಕುಮಾರ ಹಣ ಪಡೆದಿದ್ದರು. ಸೈಟ್ ನೀಡದಿದ್ದಾಗ ಹಣ ವಾಪಾಸ್ ಕೊಡಿಸುವಂತೆ ಠಾಣೆ ಮೆಟ್ಟಿಲೇರಿದ್ದರು ಮೀರಸಾಬ, ಎಲ್ಲ ಹಣವನ್ನು ಮೀರಸಾಬ ಅವರಿಗೆ ಮರಳಿ ಕೋಡಿಸುವಲ್ಲಿ ಸಿಪಿಐ ಸಂತೋಷ ಹಳ್ಳೂರ ಸಹಾಯ ಮಾಡಿದ್ದರು. ಹಣ ವಾಪಾಸ್ ಕೊಡಿಸಿದ್ದಕ್ಕೆ 1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಅಥಣಿ ಸಿಪಿಐ ಸಂತೋಷ ಹಳ್ಳೂರ ಎಂದು ಆರೋಪಿಸಲಾಗಿದೆ. ಸಿಪಿಐ ಸಂತೋಷ ಹಳ್ಳೂರ ಮತ್ತು ಮೀರಸಾಬ್ ಹಣದ ವಿಚಾರ ಮಾತಾಡಿದ ಆಡಿಯೋ ಆಧರಿಸಿ ದೂರು ದಾಖಲು ಮಾಡಿಕೊಂಡಿದ್ದ ಲೋಕಾಯುಕ್ತ ಪೋಲಿಸರು, ತನಿಖೆ ಹಿನ್ನಲೆಯಲ್ಲಿ ಇಂದು ಅಥಣಿ ಪೊಲೀಸ್ ಠಾಣೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸಿಪಿಐ ಸಂತೋಷ ಹಳ್ಳೂರ ಅವರನ್ನು ತೀವ್ರ ವಿಚಾರಣೆ ನಡೆಸಿದ್ದು, ತನಿಖೆ ಮುಂದುವರೆದಿದೆ, ತನಿಖೆಯಿಂದ ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ


