‘ಅಪರೇಷನ್ ಲಂಡನ್ ಕೆಫೆ’ ಚಿತ್ರದ ಮೊದಲ ಹಾಡು ‘ರೈ ರೈ ರೈ ಈ ಪ್ರೀತಿ ಶ್ಯಾನೆ ಮಜವಾಗುತೈತಿ, ಮನಸಾಗ ಎಲಿಯಡಿಕಿ ಆಗಿಯಾಕತೈತಿ’ ಬಿಡುಗಡೆಯಾಗಿದೆ.
ಲಂಗದಾವಣಿ ತೊಟ್ಟ ಅಪ್ಪಟ ಬಜಾರಿ ಬಾಯಿ ಬಡಕಿ ಹಳ್ಳಿ ಹುಡುಗಿಯಾಗಿ
ಮೇಘಾ ಶೆಟ್ಟಿ ಹಿಂದೆಂದಿಗಿಂತಲೂ ಲವಲವಿಕೆಯಿಂದ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಮತ್ತು ಸಿನಿಪ್ರಿಯರಿಗೆ ಎಲಿಯಡಿಕಿಯ ರಸಗವಳ ಬಡಿಸಿದ್ದಾರೆ.
ನಕ್ಸಲೈಟ್ ಗೆಟಪ್ಪಿನಲ್ಲಿ ಮೀಸೆ ತಿರುವುತ್ತಾ ಖದರ್ರಾಗಿ ಕಾಣಿಸುತ್ತಾರೆ ನಾಯಕ ಕವೀಶ್ ಶೆಟ್ಟಿ. ಮೇಘಾ ಶೆಟ್ಟಿ ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ ಮರಾಠಿ ಚಿತ್ರರಂಗಕ್ಕೂ ಲಗ್ಗೆಯಿಡಲಿದ್ದಾರೆ. ಕನ್ನಡ ಮತ್ತು ಮರಾಠಿ ಎರಡೂ ಭಾಷೆಯಲ್ಲಿ ನೇರವಾಗಿ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿಸಿ ಈ ಹಾಡಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಛಾಯಾಗ್ರಾಹಕ ಆರ್. ಡಿ. ನಾಗಾರ್ಜುನ್ ಸೆರೆ ಹಿಡಿದಿದ್ದಾರೆ.
ವಿನಾದ್ ಮ್ಯೂಸಿಕ್ ಲೇಬಲ್ನ ಅಡಿಯಲ್ಲಿ ಮೂರೂ ಭಾಷೆಯಲ್ಲಿ ಬಿಡುಗಡೆಗೊಂಡ ಈ ಹಾಡಿಗೆ ಸಂಗೀತ ನಿರ್ದೇಶಕ ಮಾಡಿದ್ದಾರೆ ಪ್ರಾಂಶು ಝಾ.
ಹಾಡಿದ್ದಾರೆ ಗಾಯಕಿ ಐಶ್ವರ್ಯ ರಂಗರಾಜನ್.
ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಈ ಚಿತ್ರವನ್ನು ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ.
ಕನ್ನಡ, ಮರಾಠಿ ಮತ್ತು ಹಿಂದಿ ಮೂರೂ ಭಾಷೆಗಳಲ್ಲಿ ಈ ಚಿತ್ರ ಇದೇ 28ಕ್ಕೆ ಬೆಳ್ಳಿತೆರೆಯ ಮೇಲೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ.


