ಅಥಣಿ:ಮೂಡಲಗಿಯ ಶ್ರೀ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಬಾಲಕ/ ಬಾಲಕಿಯರ ” ಹ್ಯಾಂಡ್ ಬಾಲ್ ” ಕ್ರೀಡಾಕೂಟದಲ್ಲಿ ಜೆ.ಎ.ಪದವಿ ಪೂರ್ವ ಮಹಾವಿದ್ಯಾಲಯದ ಅಥಣಿ ಬಾಲಕ ಮತ್ತು ಬಾಲಕಿಯರ ಎರಡು ತಂಡಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿವೆ.ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ ರಾಮ ಕುಲಕರ್ಣಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ, ಸಂದೀಪ್ ಸಂಗೋರಾಮ,ಕಾರ್ಯದರ್ಶಿ ಎಸ್.ವ್ಹಿ.ಜೋಶಿ, ಎಲ್ಲ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಾಲೇಜು ಪ್ರಾಚಾರ್ಯರರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಂದೀಪ್ ಸಂಗೋರಾಮ, ಪ್ರಕಾಶ ನರಗಟ್ಟಿ,ಕ್ರೀಡಾ ಸಂಯೋಜಕ ಚನಗೊಂಡ ಪ್ರಾಚಾರ್ಯರರ ಎಮ್.ಪಿ.ಮೇತ್ರಿ. ಹಿರಿಯ ಉಪನ್ಯಾಸಕರಾದ ಎನ್.ಚಂದ್ರಶೇಖರ, ಎಸ್.ಆರ್.ಪಾಟೀಲ, ಬಿ.ಎಸ್ ಲೋಕುರ ದೈಹಿಕ ಉಪನ್ಯಾಸಕರ ಪ್ರಮೋದ್ ಪವಾರದೇಸಾಯಿ ಮೊದಲಾದವರ ಉಪಸ್ಥಿತರಿದ್ದರು


