ಆಯುರ್ವೇದ ಮಹತ್ವ ಅರಿತರೆ ಮನೆಮದ್ದು ಸುಲಭ : ಡಾ|| ರಶ್ಮಿ ಪೂಜಾರಿ

Ravi Talawar
ಆಯುರ್ವೇದ ಮಹತ್ವ ಅರಿತರೆ ಮನೆಮದ್ದು ಸುಲಭ : ಡಾ|| ರಶ್ಮಿ ಪೂಜಾರಿ
WhatsApp Group Join Now
Telegram Group Join Now

ರನ್ನ ಬೆಳಗಲಿ: ಏ.6.: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸದಾಶಿವ ನಗರ ರನ್ನ ಬೆಳಗಲಿಯ ಶಾಲಾ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಬಾಗಲಕೋಟೆ, ಜಿಲ್ಲಾ ಆಯುಷ್ ಇಲಾಖೆ, ಆಯುಷ್ ಸೇವಾ ಗ್ರಾಮ ರನ್ನ ಬೆಳಗಲಿ ಆಶ್ರಯದಲ್ಲಿ &quoಣ;ಉಚಿತ ಚಿಕಿತ್ಸಾ ಶಿಬಿರ ಮತ್ತು ಬೇಸಿಗೆಕಾಲದ ಉಪಯುಕ್ತ ಆಯುರ್ವೇದ ದಿನಚರಿ&quoಣ; ಕಾರ್ಯಕ್ರಮ ಜರಗಿತು

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವುದರ ಜೊತೆಗೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ|| ರಶ್ಮಿ ಪೂಜಾರಿ ವಿಶ್ವಕ್ಕೆ ಮಾದರಿಯಾದ ದೇಶ ಭಾರತ. ಭಾರತೀಯ ಆಹಾರ ಪದ್ಧತಿಗಳು ಆಯುರ್ವೇದದ ಮಹತ್ವವನ್ನು ಹೊಂದಿವೆ. ಆದ್ದರಿಂದ ಆಯುರ್ವೇದದ ಸಂಪೂರ್ಣ ಜ್ಞಾನವನ್ನು ಅರಿತರೆ ಮನೆ ಮದ್ದನ್ನು ಸುಲಭವಾಗಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹೊರಗಡೆ ಸಿಗುವ ಜಂಕ್ ಫುಡ್ ಗಳಿಂದ ನಾವು ದೂರವಿರಬೇಕು, ಅತಿಯಾದ ಖಾರ, ಎಣ್ಣೆ ಪದಾರ್ಥಗಳನ್ನು ಸೇವನೆಯನ್ನು ಕಡಿಮೆ ಮಾಡಬೇಕು. ದಿನೇ ದಿನೇ ಹೆಚ್ಚುತ್ತಿರುವ ಬಿಸಿಲಿನ ತಾಪಮಾನ ದಿಂದ ಶರೀರದಲ್ಲಿ ಅನೇಕ ಕಾಯಿಲೆಗಳು ಉಲ್ಬನಗೊಳುವುದು ಸಹಜ ಆದ್ದರಿಂದ ತಂಪು ಪಾನೀಯಗಳಿಗೆ ಮರೆಹೋಗದೆ ಮಣ್ಣಿನ ಮಡಿಕೆಯಲ್ಲಿ ನೀರನ್ನು ಬಳಸಬೇಕು, ಶುದ್ಧವಾದ ನೀರನ್ನು ಕುಡಿಯಬೇಕು, ಸಾಧ್ಯವಾದಷ್ಟು ಮುಂಜಾನೆಯ ಮತ್ತು ಸಾಯಂಕಾಲ ಕೆಲಸ ಕಾರ್ಯದಲ್ಲಿ ಪಾಲ್ಗೊಂಡು ಮಧ್ಯಾಹ್ನ ಅವಧಿ ಬಿಸಿಲಲ್ಲಿ ಹೋಗದೆ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು. ಪ್ಲಾಸ್ಟಿಕ್ ಮುಕ್ತ ಜೀವನ ನಡೆಸಲು ಕೈಜೋಡಿಸಬೇಕು. ಪ್ರತಿ ಮನೆ ಅಂಗಳದಲ್ಲಿ ಮನೆ ಮದ್ದುಗೆ ಉಪಯುಕ್ತವಾದ ಸಸ್ಯಗಳನ್ನು ಬೆಳೆಸಬೇಕು, ಮತ್ತು ಮಕ್ಕಳಂತೆ ಪೋಷಣೆ ಮಾಡಬೇಕು. ಯಾವುದೇ ರೋಗ ಇದ್ದರೂ ಕೂಡ ತಕ್ಷಣ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಟ್ಟು ವೈದ್ಯರ ಸಲಹೆ ಪಡೆಯಬೇಕು. ವೈದ್ಯರಿಗೆ ಭೇಟಿಯಾಗದೆ ನೇರವಾಗಿ ಮಾತ್ರೆಯನ್ನು ತೆಗೆದುಕೊಂಡರೆ
ಅನೇಕ ಕಾಯಿಲೆಗಳು ಮತ್ತೆ ಹೆಚ್ಚಾಗಲೂ ಕಾರಣವಾಗುತ್ತವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ|| ಪಿ. ಎಮ್. ಜಾಹಾಗಿರದಾರ ಹಿರಿಯ ವೈದ್ಯಾಧಿಕಾರಿಗಳು ಉಪಸ್ಥಿತರಿದ ಎಲ್ಲಾ ಸಾರ್ವಜನಿಕರಿಗೆ ಆಯುಷ್ಯ ಇಲಾಖೆಯಿಂದ ಕೊಡ ಮಾಡುವ ಔಷಧಿಗಳನ್ನು ಉಚಿತವಾಗಿ ನೀಡುವುದರ ಜೊತೆಗೆ ಯಾವ ಯಾವ ರೋಗಗಳಿಗೆ ಯಾವ ಔಷಧಿಗಳನ್ನು ಯಾವ ರೀತಿ
ತೆಗೆದುಕೊಳ್ಳಬೇಕು ಮತ್ತು ಆಹಾರ ಪಂತ್ಯಗಳ ಬಗ್ಗೆ ಮತ್ತು ಪ್ರತಿನಿತ್ಯ ಯೋಗವನ್ನು ಮಾಡುವುದ ರಿಂದ ನಮ್ಮ ಜೀವನ ಶೈಲಿಯನ್ನು ಸುಂದರಗೊಳಿಸಲು ಸಾಧ್ಯವಾಗುತ್ತದೆ. ಯೋಗ ಮತ್ತು ಆಯುರ್ವೇದ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ ಆದ್ದರಿಂದ ಯೋಗವನ್ನು ಮಾಡವುದರ ಜೊತೆಗೆ ಆಯುರ್ವೇದ ಉಪಚಾರವನ್ನು ಪಡೆದುಕೊಂಡರೆ ಆರೋಗ್ಯಕ್ಕೆ ಯಾವ  ತೊಂದರೆ ಬರಲಾರದು ಎಂದು ತಿಳಿಸಿದರು.

ಅತಿಥಿಗಳಾಗಿ ಆಗಮಿಸಿದ ಡಾ. ಮಂಜುಳಾ ಕಲ್ಯಾಣಿ ಶಿಕ್ಷಕಿಯರು ಪ್ರಸ್ತುತ ಒತ್ತಡ ಜೀವನದಲ್ಲಿ ಯೋಗಕ್ಕೆ ಸಮಯವನ್ನು ನೀಡೋಣ ಯೋಗದಿಂದ ಆರೋಗ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಈಗಾಗಲೇ ಆಯುಷ್ಯ ಇಲಾಖೆ ಅನೇಕ ಆಯುಷ್ ಗ್ರಾಮಗಳನ್ನು ತೆರೆಯುವುದರ ಜೊತೆಗೆ ಉಚಿತವಾಗಿ ಮತ್ತು ಯೋಗ ,ಆಯುರ್ವೇದ ಮಾಹಿತಿ ನೀಡುತ್ತಾ ಸಾರ್ವಜನಿಕರಿಗೆ ಆರೋಗ್ಯ ಭಾಗ್ಯವನ್ನು ನೀಡುತ್ತಿದೆ. ಈ ಒಂದು ಉಚಿತ ಆರೋಗ್ಯ ತಪಾಸನೆ ಶಿಬಿರದಲ್ಲಿ
ಪಾಲ್ಗೊಂಡ ಎಲ್ಲಾ ಸಾರ್ವಜನಿಕರು ಧನ್ಯರು ಇಲ್ಲಿ ತಾವು ತಿಳಿದುಕೊಂಡ ಎಲ್ಲ ವಿಚಾರಗಳನ್ನು ಮತ್ತು ಪಡೆದುಕೊಂಡ ಆರೋಗ್ಯ ಸಲಹೆಯನ್ನು ನೆರೆಹೊರೆಯ ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಡಾ|| ಆನಂದ ಕುಲಕರ್ಣಿ ಆಯುರ್ವೇದ ವೈದ್ಯರು ರನ್ನ ಬೆಳಗಲಿ, ಡಾ|| ಶೋಭಾ ಭಿಕ್ಷಾವತಿಮಠ ತಾಲೂಕ ಆಯುಷ್ ಘಟಕ ಮುಧೋಳ, ಮುಖ್ಯೋಪಾಧ್ಯರಾದ ಬಿ.ಆರ್. ಗಂಗರೆಡ್ಡಿ ಕಾರ್ಯಕ್ರಮದ ಕುರಿತು ಮಾತನಾಡಿದರು. ಡಾ|| ಕೆ.ಡಿ. ತಿಳಿಗೊಳ ಸ್ವಾಗತಿಸಿ, ನಿರೂಪಿಸಿದರು. ಡಾ|| ಆರ್.ಬಿ. ಅನ್ಸಾರಿ ಕಾರ್ಯಕ್ರಮಕ್ಕೆ ವಂದಿಸಿದರು. ಆಯುರ್ವೇದ ಕಲಿಕಾ ವೈದ್ಯರು, ಆಶಾ ಕಾರ್ಯಕರ್ತೆಯರು ಮತ್ತು ಸದಾಶಿವನಗರದ ಸಾರ್ವಜನಿಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article