ನೇಸರಗಿ. ಕಿತ್ತೂರು ಮತಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ಒದಗಿಸಲು 2 ವರ್ಷ 6 ತಿಂಗಳಿನಿಂದ ಕೆಲಸ ಮಾಡುತ್ತಿದ್ದು ಗ್ರಾಮೀಣ ರಸ್ತೆ, ಚರಂಡಿ, ಗ್ರಾಮಗಳ ಒಳಗಿನ ಸಿ ಸಿ ರಸ್ತೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ಶಾಲೆ, ಕಾಲೇಜು, ಅಂಗನವಾಡಿ ಉನ್ನತಿಕರಣಕ್ಕೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುತ್ತಿದ್ದು ಉಳಿದ ಕೆಲಸ ಕಾರ್ಯಗಳನ್ನು ಹಂತ ಹಂತವಾಗಿ ಮಾಡಲು ನನ್ನ ಮೊದಲ ಆದ್ಯತೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ನೇಸರಗಿ ಗ್ರಾಮದ 5 ವಾರ್ಡಿನ ಸಿ ಸಿ ರಸ್ತೆ ನಿರ್ಮಾಣಕ್ಕೆ ಎಸ್ ಸಿ ಪಿ ಟಿ ಎಸ್ ಪಿ -5054 ಅನುಧಾನದ 20 ಲಕ್ಷ ರೂಪಾಯಿಗಳ ಕಾಮಗಾರಿ ಭೂಮಿಪೂಜೆ ಮತ್ತು ಸಮೀಪದ ಸುತಗಟ್ಟಿ ಗ್ರಾಮದ ಶಾಲೆಯ ಪೂಜಾ ಸಮಾರಂಭ, ಹಿರೇಮಠದ 5 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಸಮುದಾಯ ಭವನದ ಪೂಜಾ ಸಮಾರಂಭ, ನಾಗನೂರ ಗ್ರಾಮದ ಅಂಗನವಾಡಿ ಹತ್ತಿರ 7 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ, ಅದೇ ಗ್ರಾಮದ ಎಸ್ ಸಿ ಕಾಲನಿಯಲ್ಲಿ 15 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಸಿ ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ, ಲಕ್ಕುಂಡಿ ಗ್ರಾಮದಲ್ಲಿ ಎಸ್ ಸಿ ಕಾಲನಿಯಲ್ಲಿ 16 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಸಿ ಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಲಕ್ಕುಂಡಿ ಗ್ರಾಮದಲ್ಲಿ 5 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಎಲ್ಲ ಗ್ರಾಮಗಳ ಬೇಡಿಕೆಗೆ ತಕ್ಕಂತೆ ಸರ್ವ ಜನಾಂಗದ ಕೆಲಸ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಯುವ ಮುಖಂಡ ಸಚಿನ ಪಾಟೀಲ, ನೇಸರಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಗ್ರಾಂ ಪಂ ಅಧ್ಯಕ್ಷ ವೀರಭದ್ರ ಚೋಭಾರಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೋಮಣ್ಣವರ, ಮಾಜಿ ಎ ಪಿ ಎಮ್ ಸಿ ಅಧ್ಯಕ್ಷ ಬರಮಣ್ಣ ಸತ್ತೇನ್ನವರ, ಶಿವಾನಂದ ಕುಂಕುರ, ಬಾಳಪ್ಪ ಮಾಳಗಿ, ಚನಗೌಡ ಪಾಟೀಲ,ಭೂಸೇನಾ ನಿಗಮದ ಇ ಇ ಸಚಿನ ಬಸರಕೋಡ, ಮಲ್ಲಿಕಾರ್ಜುನ ಕಲ್ಲೋಳಿ,ಮಂಜುನಾಥ ಹುಲಮನಿ, ಶಿವನಪ್ಪ ಮದೇನ್ನವರ, ಡಿ ಎಸ್ ಎಸ್ ಅಧ್ಯಕ್ಷ ರಮೇಶ ರಾಯಪ್ಪಗೋಳ, ಬಸವರಾಜ ಚಿಕ್ಕನಗೌಡ್ರ, ಸುರೇಶ ಅಗಸಿಮನಿ,ಯಮನಪ್ಪ ಪೂಜೇರಿ, ಮೇಕಲಮರಡಿ ಗ್ರಾ ಪಂ ಉಪಾಧ್ಯಕ್ಷ ಕಾಶಿಮ್ ಜಮಾದಾರ,ನಿಂಗಪ್ಪ ತಳವಾರ,ಸುಜಾತ ತುಬಾಕಿ, ಸುಜಾತ ಪಾಟೀಲ ವಾಸು ಹಮ್ಮಣ್ಣವರ, ಪ್ರಕಾಶ ತೋಟಗಿ, ಬಾಳೇಶ ಪೂಜೇರಿ, ಬಾಳಪ್ಪ ಕುಂಟಗಿ, ವಿನಾಯಕ ಮಾಸ್ತಮರ್ಡಿ, ಮುಗುಟಸಾಬ್ ಮನಿಯಾರ,ಶ್ರೀಮತಿ ಉಷಾ ನವಲಗಟ್ಟಿ ಸೇರಿದಂತೆ ನೇಸರಗಿ, ಸುತಗಟ್ಟಿ, ನಾಗನೂರ, ಲಕ್ಕುಂಡಿ ಗ್ರಾಮಗಳ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಸೇರಿದಂತೆ ಅನೇಕರು ಭಾಗವಹಿಸಿದ್ದರು.


