ಸವದತ್ತಿ : “ಯೋಜನಾ ಬದ್ಧವಾಗಿ ಪರಿಪೂರ್ಣ ನಾಗರಿಕರನ್ನಾಗಿ ರೂಪಿಸುವಲ್ಲಿ ಶಿಕ್ಷಣವು ಅತ್ಯಮೂಲ್ಯವಾಗಿದ್ದು, ಜಗತ್ತಿನ ಪ್ರತಿಯೊಂದು ನಾಗರಿಕ ಸಮಾಜ ಸಧೃಡಗೊಳಿಸಲು ಶಿಕ್ಷಣ ಅತೀ ಮಹತ್ವದ ಪಾತ್ರ ವಹಿಸುತ್ತದೆ, ಈ ದಿಶೆಯಲ್ಲಿ ಸ್ವತಂತ್ರ ಹೋರಾಟಗಾರ ಹಾಗೂ ದೇಶದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಅಜಾದರ ಕೊಡುಗೆ ಅನನ್ಯವಾಗಿದೆ, ಆದುದರಿಂದ ಇವರ ಜನ್ಮದಿನವನ್ನು ಪ್ರತಿ ವರ್ಷ ನವ್ಹಂಬರ 11 ರಂದು ರಾಷ್ಟ್ರೀಯ ಶಿಕ್ಷಣ ದಿನ ಎಂದು ಆಚರಿಸಲಾಗುತ್ತದೆ” ಎಂದು ಶಿಕ್ಷಕ ಹಾಗೂ ನೌಕರ ಸಂಘದ ಕಾರ್ಯದರ್ಶಿ ಎನ್.ಎನ್.ಕಬ್ಬೂರ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪಟ್ಟಣದ ಸ.ಕಿ.ಪ್ರಾ ಕನ್ನಡ ಶಾಲೆ ನಂ-6 ರಲ್ಲಿ “ರಾಷ್ಟ್ರೀಯ ಶಿಕ್ಷಣ ದಿನ” ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಬುಲ್ ಕಲಾಂರ ಶೈಕ್ಷಣಿಕ ಚಿಂತನೆಗಳನ್ನು ಇಂದು ನಾವೆಲ್ಲರು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ನಂತರ ಮೌಲಾನಾ ಅಬುಲ್ ಕಲಾಂ ಅಜಾದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ಆರಂಭಿಕ ಜೀವನ, ವಿದ್ಯಾಭ್ಯಾಸ, ಸ್ವಾತಂತ್ರ್ಯ ಹೋರಾಟದ ಕ್ಷಣಗಳು, ಶೈಕ್ಷಣಿಕ ಕ್ರಾಂತಿಗಳು ಹೀಗೆ ವಿವಿಧ ಮಜಲುಗಳನ್ನು ಮಕ್ಕಳಿಗೆ ತಿಳಿಸಲಾಯಿತು, ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಎಮ್.ಆರ್.ಪಂಡಿ, ಅನ್ನಪೂರ್ಣ ಕಾಜಗಾರ, ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿಯವರು, ಪಾಲಕ ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.


