ಕೆಸಿಸಿಐ : ಯಶವಂತರಾಜ್ ನಾಗಿರೆಡ್ಡಿ ಜಿಲ್ಲಾ‌ ಸಮನ್ವಯ ಸಮಿತಿಯ ಚೇರ್ಮೆನ್ 

Ravi Talawar
ಕೆಸಿಸಿಐ : ಯಶವಂತರಾಜ್ ನಾಗಿರೆಡ್ಡಿ ಜಿಲ್ಲಾ‌ ಸಮನ್ವಯ ಸಮಿತಿಯ ಚೇರ್ಮೆನ್ 
WhatsApp Group Join Now
Telegram Group Join Now
ಹುಬ್ಬಳ್ಳಿ, ನ. 11: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಜಿಲ್ಲಾ‌ ಸಮನ್ವಯ ಸಮಿತಿಯ ಚೇರ್ಮೆನ್ ಆಗಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ ಅವರು ನೇಮಕಗೊಂಡಿದ್ದಾರೆ.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಉದಯ ರೇವಣಕರ ಅವರು ಈ‌ ಮಾಹಿತಿ ನೀಡಿದ್ದು,‌ ಇವರ ಅಧಿಕಾರವಧಿಯು
30.9.2026ರ ವರೆಗೆ ಇರುತ್ತದೆ ಎಂದು ಅವರು‌ ತಿಳಿಸಿದ್ದಾರೆ.
ಯಶವಂತರಾಜ್ ನಾಗಿರೆಡ್ಡಿ ಅವರು, ‘ಸಂಸ್ಥೆಯ ಅಭಿವೃದ್ಧಿಗೆ ಹಾಗೂ ಉದ್ಯಮಿಗಳ ಹಿತಕ್ಕಾಗಿ ಶ್ರಮಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ  ಅಧ್ಯಕ್ಷರಾದ ಅವ್ವಾರು ಮಂಜುನಾಥ ಹಾಗೂ ಗೌರವ ಕಾರ್ಯದರ್ಶಿಗಳಾದ ಕೆ.ಸಿ.ಸುರೇಶಬಾಬು,  ಪದಾಧಿಕಾರಿಗಳು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
WhatsApp Group Join Now
Telegram Group Join Now
Share This Article