ಬೆಳಗಾವಿ: ಕನ್ನಡ ಅನ್ನೋದು ಕೇವಲ ಭಾಷೆಯಲ್ಲ, ಅದು ಕರ್ನಾಟಕದ ಅಸ್ಮಿತೆ. ಕನ್ನಡಿಗರ ಕುರುಹು, ಹೀಗಿರುವಾಗ ರಾಜ್ಯದಲ್ಲಿ ನಮ್ಮ ಕನ್ನಡ ಭಾಷೆ ಉಳಿಯಬೇಕು ಎನ್ನುವುದನ್ನು ಅರಿಯಬೇಕು. ಕನ್ನಡ ಸರಳ ಮತ್ತು ಸುಂದರ ಭಾಷೆ. ಸಾವಿರಾರು ವರ್ಷದಷ್ಟುಇತಿಹಾಸ ಇರುವ ಭಾಷೆಯನ್ನು ಉಳಿಸಿ- ಬೆಳೆಸುವ ಕಾರ್ಯವಾಗಬೇಕು ಎಂದು ಸುರೇಶ್ ಯಾದವ್ ಫೌಂಡೇಶನ ಅಧ್ಯಕ್ಷ ಸುರೇಶ್ ಯಾದವ್ ಅವರು ಹೇಳಿದರು
ನಗರದ ರಾಮತೀರ್ಥನಗರ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸುರೇಶ್ ಯಾದವ್ ಫೌಂಡೇಶನ್ ಹಾಗೂ ರಾಮ್ ತೀರ್ಥ್ ನಗರ್ ರಹವಾಸಿಗಳ ಸಂಯೋಗದೊಂದಿಗೆ ಆಯೋಜಿಸಲಾದ ಕನ್ನಡ ಉತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ನಿಮಿತ್ಯವಾಗಿ ಶಿವರಾಜ್ ಮೆಡೋಲಿಯಸ್ ಬೆಳಗಾವಿ ಇವರ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕನ್ನಡ ಭಾಷೆ ನಮ್ಮ ಹೆಮ್ಮೆ” ಎಂಬುದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಗುರುತಿನ ಸಂಕೇತವಾಗಿದೆ ಎಂದು ಹೇಳುತ್ತದೆ. ಭಾಷೆಯು ನಮ್ಮ ಭಾವನೆಗಳು, ಆಲೋಚನೆಗಳು ಮತ್ತು ಸಂಸ್ಕೃತಿಯನ್ನು ವ್ಯಕ್ತಪಡಿಸಲು ಸಹಾಯವಾಗಿದೆ. ಕನ್ನಡಲ್ಲಿ ಅದೆಷ್ಟು ಪುರಾತನ ಇತಿಹಾಸ, ಕಥೆಗಳು, ಕಾವ್ಯಗಳನ್ನು ಮುಂದಿನ ತಲೆಮಾರಿಗೆ ಪ್ರಸ್ತುತ ಎಂದು ಹೇಳಿದರು.
ಎಸಿಪಿ ಸದಾಶಿವ್ ಕಟ್ಟಿಮನಿ ಅವರು ಮಾತನಾಡಿ, ಕನ್ನಡ ಭಾಷೆಯಲ್ಲಿ ಪ್ರೀತಿ, ಸ್ನೇಹ, ಜೀವ , ಉಸಿರು ತುಂಬಿದೆ. ಹೀಗಾಗಿ ಅದನ್ನು ಸಾಂಸ್ಕೃತ ಕಾರ್ಯಕ್ರಮಗಳ ಆಯೋಜನೆ ಮೂಲಕ ಇನ್ನಷ್ಟು ಗಟ್ಟಿಗೊಳಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿತ್ಯ ಮನೆ ಮನೆಗಳಲ್ಲಿಕನ್ನಡ ಭಾಷೆಯಲ್ಲೇ ಮಾತನಾಡಬೇಕು. ಕನ್ನಡ ಭಾಷೆಯನ್ನು ಯಾರು ಮರೆಯಬಾರದು. ಅದರ ಅಳಿವು ಉಳಿವು ನಮ್ಮೆಲ್ಲರ ಕೈಯಲ್ಲಿದೆ. ಇದನ್ನು ಮುಂದಿನ ಪೀಳಿಗೆಗೆ ತಿಳಿಸುವಂತಹ ಕೆಲಸ ನಿತ್ಯ ಮಾಡಬೇಕು ಎಂದರು.
ಅಧ್ಯಕ್ಷತೆಯನ್ನು ಸುರೇಶ್ ಯಾದವ್ ಫೌಂಡೇಶನ್ ದ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಯಾದವ್ ವಹಿಸಿದರು. ಅತಿಥಿಗಳಾಗಿ ಎಸಿಪಿ ಸದಾಶಿವ್ ಕಟ್ಟಿಮನಿ.ಡಿವೈಎಸ್ಪಿ ವೀರೇಶ್ ದೊಡ್ಡಮನಿ, ಬೆಳಗಾವಿ ಜಿಲ್ಲಾ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಮಹೇಶ್ ಸೀಗೆಹಳ್ಳಿ, ಆಕಾಶ್ ಬೇವಿನಕಟ್ಟಿ, ಅಶೋಕ್ ಜೈನ, ಮುಕ್ತಾರ್ ಪಠಾನ್, ವಿಶಾಲ್ ಕೆರೂರ್ , ಸಂತೋಷ್ ಮಿರಾಕಲ್ , ಕೆಂಪಣ್ಣ ಜಿನ್ರಾಳ , ತುಕಾರಾಂ ಹೂಜರತ್ತಿ , ನಿಂಗಪ್ಪ ಬಾಳಪ್ಪ ಹಂಜಿ , ಕುಮಟೇಕರ್ ತೋರಗಲ್, ರಾಮ್ ತೀರ್ಥ್ ನಗರ್ ಸರ್ವ ಸದಸ್ಯರು ಹಾಗು ಇತರರು ಇದ್ದರು.


