ಸಮಾಜದ ಬದಲಾವಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ

Ravi Talawar
ಸಮಾಜದ ಬದಲಾವಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ
WhatsApp Group Join Now
Telegram Group Join Now
ಬಳ್ಳಾರಿ,ನ10. ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಬಳಿ ಇರುವ ವೆಂಕವ ಧೂತರ ಮಠದಲ್ಲಿಎರಡು ದಿನಗಳ ವ್ಯಕ್ತಿತ್ವ ವಿಕಾಸನ ಶಿಬಿರವನ್ನು  ಆಯೋಜಿಸಲಾಗಿದೆ ಸುತ್ತಮುತ್ತಲಿನ ಹಳ್ಳಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
“ಸಮಾಜದ ಬದಲಾವಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ” ವಿಷಯದ ಗೋಷ್ಠಿಯನ್ನು ಎಐಡಿಎಸ್‌ಒ ಕರ್ನಾಟಕ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರು ಅವರು ನಡೆಸಿಕೊಟ್ಟರು ಶಿಬಿರದ ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಆಲಿಸಿದ ನಂತರ ಅವರನ್ನು ಉದ್ದೇಶಿಸಿ ಮಾತನಾಡುತ್ತಾ ,ನಮ್ಮ ಸ್ವಾತಂತ್ರ‍್ಯ ಚಳುವಳಿಯ ಆಶಯವು ಕೇವಲ ಬ್ರಿಟಿಷರನ್ನು ಒದ್ದೋಡಿಸುವುದು ಮಾತ್ರವಲ್ಲದೆ ಅಸ್ಥಿತ್ವದಲ್ಲಿದ್ದಂತಹ ಜಾತಿ,ಧರ್ಮ, ಲಿಂಗ ,ಆರ್ಥಿಕತೆಯ ಹೆಸರಿನಲ್ಲಿ ನಡೆಯುವ ಶೋಷಣೆ ಮತ್ತು ಸಾಮಾಜಿಕ ಅಸಮಾನತೆಯನ್ನು ಕೊನೆಗಾಣಿಸುವುದು ಎಂದು ತಿಳಿಸಿದರು ಹಾಗೂ ಇಂದಿಗೂ ಈ ಆಶಯಗಳು ಈಡೇರಿಲ್ಲ  ಎಂಬ ವಾಸ್ತವವನ್ನು ಮನಗಾಣಿಸಿದರು.
ಎಲ್ಲಾ ಕಾಲದಲ್ಲೂ ಮಾನವ ಸಮಾಜ ನೆಮ್ಮದಿ, ಸಮಾನತೆಯ ಹುಡುಕಾಟದಲ್ಲಿತ್ತು.  ಮೇಧಾವಿಗಳು,ಸಂತರು,ಪ್ರವಾದಿಗಳು ಈ ಹುಡುಕಾಟಕ್ಕೆ ಉತ್ತರ ಕೊಡಲು ಪ್ರಯತ್ನಿಸಿದ್ದಾರೆ. ಆ ಹುಡುಕಾಟಕ್ಕೆ ಸರಿಯಾದ ದಿಕ್ಕು ತೋರಿಸಿದ್ದು ನವೆಂಬರ್ ಕ್ರಾಂತಿಯ ಮೂಲಕ ಸಮಾಜವಾದಿ ರಷ್ಯಾ.ನಮ್ಮ ದೇಶದ ಉತ್ಕೃಷ್ಟ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್  ಮತ್ತು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಸ್ಥಾಪನೆಗೆ ಸ್ಪೂರ್ತಿ ನೀಡಿದ ಸ್ವಾತಂತ್ರ‍್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಮತ್ತು ಕಾರ್ಮಿಕ ವರ್ಗದ ಮಹಾನ್ ನಾಯಕರು ಶಿವದಾಸ್ ಘೋಷ್ ಅವರು ಮಾರ್ಗದರ್ಶನ ನೀಡಿದರು. ಆ ವಿಚಾರಧಾರೆಯ ಆಧಾರದ ಮೇಲೆ ಂIಆSಔ ಇಡೀ ದೇಶ ವ್ಯಾಪಿ ಶಿಕ್ಷಣ ಸಂಸ್ಕೃತಿ ಮಾನವತೆ ಉಳಿಸಿ ಎಂಬ  ಘೋಷ ವಾಕ್ಯದೊಂದಿಗೆ ಶಿಬಿರಗಳನ್ನು ,ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಇಂದು ನಾವು ಶಿಕ್ಷಣ ಮತ್ತು ಸಂಸ್ಕೃತಿಯನ್ನು ಉಳಿಸದೇ ಹೋದಲ್ಲಿ ನಾಳೆ ಸಮಾಜದ ಬದಲಾವಣೆಯ ಬಾವುಟ ಎತ್ತಲು ಯಾವ ವಿದ್ಯಾರ್ಥಿಯು ಉಳಿದಿರುವುದಿಲ್ಲ,ಹಾಗಾಗಿ ಇಂದು ಸರ್ಕಾರಿ ಸಂಸ್ಥೆಗಳನ್ನು ಉಳಿಸುವ ಜವಾಬ್ದಾರಿ ಹಾಗೂ ವಿದ್ಯಾರ್ಥಿಗಳಲ್ಲಿ ಮಹಾನ್ ವ್ಯಕ್ತಿಗಳ ಆದರ್ಶವನ್ನು ಬಿತ್ತುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕಾರ್ಯವನ್ನು ನಾವು ಪರಿಣಾಮಕಾರಿಯಾಗಿ ಮಾಡಿದಲ್ಲಿ ಸಾಮಾಜಿಕ ಬದಲಾವಣೆಗೆ ನಾವು ಯೋಗ್ಯ ಪಾತ್ರ ವಹಿಸಿದಂತಾಗುತ್ತದೆ ಹಾಗೂ ಮುಂದಿನ ಪೀಳಿಗೆಗೆ ಸರಿಯಾದ ಉದಾಹರಣೆಯನ್ನು ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಂIಆSಔ ನಾಯಕರು, ಕಾರ್ಯಕರ್ತರು ಹಾಗೂ ಸದಸ್ಯರು ಮುನ್ನುಗ್ಗಬೇಕಿದೆ.
ಇಂದು ಸಮಾಜದಲ್ಲಿ ಕಾಡುತ್ತಿರುವ ಸಮಸ್ಯೆಗಳನ್ನು ಕೊನೆಗಾಣಿಸಲು ನೀವು ಂIಆSಔ ಬಲಪಡಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾರ್ಯದರ್ಶಿಗಳಾದ ಕಂಬಳಿ ಮಂಜುನಾಥ್ ಅವರು ಶಿಬಿರದ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಅಧ್ಯಕ್ಷರಾದ ಈರಣ್ಣ, ಜಿಲ್ಲಾ ಉಪಾಧ್ಯಕ್ಷರಾದ ಶಾಂತಿ, ಸದಸ್ಯರಾದ ಸಮೀರ್ , ತಿಪ್ಪೇಸ್ವಾಮಿ, ಕಾಂತೇಶ, ಸುಹಾಸ್ , ರಂಜಿತ್,ಅರ್ಜುನ್ , ಹರೀಶ್,ಸುಮಿತ್ರಾ ಅಂಕಿತಾ, ಶಿವ, ವಿನೋದ್, ಮಂಜುನಾಥ್, ಪ್ರವೀಣ್  ಸೇರಿದಂತೆ ಶಿಬಿರಾರ್ಥಿಗಳು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article