ಎಲ್ಲ ರೀತಿಯ ಸಹಕಾರ ನೀಡಿದ ಶ್ರಮಧಾನಿಗಳ ಶ್ರಮ ಸಾರ್ಥಕ : ಚುನಪ್ಪ ಪೂಜೇರಿ 

Ravi Talawar
ಎಲ್ಲ ರೀತಿಯ ಸಹಕಾರ ನೀಡಿದ ಶ್ರಮಧಾನಿಗಳ ಶ್ರಮ ಸಾರ್ಥಕ : ಚುನಪ್ಪ ಪೂಜೇರಿ 
WhatsApp Group Join Now
Telegram Group Join Now
ಗುರ್ಲಾಪೂರ(08):- ಗುರ್ಲಾಪೂರದ ಕಬ್ಬು ಬೆಳೆಗಾರರ ಹೋರಾಟದ ಹಿಂದಿನ ಶ್ರಮದಾನಿಗಳು ಗ್ರಾಮದ ಸಮಸ್ತ ರೈತ ಬಾಂಧವರು. ರೈತ ಸಂಘದ ಕೆಲವು ನಾಯಕರು ಗುರ್ಲಾಪೂರಕ್ಕೆ ಬಂದು ಶ್ರೀ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ರೈತ ಸಂಘದ ಅಧ್ಯಕ್ಷ ಚುನಪ್ಪ ಪೂಜೇರಿ

ಹಾಗೂ ಸದಸ್ಯರು ಬಂದು ಪೂರ್ವಭಾವಿ ಸಭೆ ನಡೆಸಿ ನಾವು ಗುರ್ಲಾಪೂರ ಕ್ರಾಸ್ ನಲ್ಲಿ ರೈತರ ಬೇಡಿಕೆ 3500 ರೂ ಕಾರ್ಖಾನೆ ಮಾಲೀಕರು ಹಾಗೂ ಸರ್ಕಾರದ ಗಮನ ಸೆಳೆಯುದರಿಂದ ಗುರ್ಲಾಪೂರ ಬಂದ್ ಗೆ ಕರೆ ಕೊಡುತ್ತಿದ್ದೇವೆ. ಗ್ರಾಮದ ರೈತ  ಬಾಂಧವರು ನಮಗೆ ಸಹಕಾರ ಕೊಡಬೇಕು ಹಾಗೂ ಅನ್ನದಾನವನ್ನು ತಾವೇ ಮಾಡಬೇಕು  ಎಂದು ಹೇಳಿದಾಗ ಗ್ರಾಮಸ್ಥರು ಒಪ್ಪಿಗೆ ಕೊಟ್ಟು ಪ್ರಾರಂಭದ ದಿನ ಹೊತ್ತಿದ ಒಲೆ ಇನ್ನೂ ಆರಿಲ್ಲ.
               ಪ್ರತಿದಿನ 2 ರಿಂದ 4 ಲಕ್ಷ ತನಕ ಜನ ಸೇರುತ್ತಿದ್ದೂ  ಊಟ ಮಾಡುತ್ತಿದ್ದಾರೆ. ನಾಡಿನ ಸಮಸ್ತ ರೈತ ಬಾಂಧವರು, ಮಠಾದಿಶರು, ದಾನಿಗಳು ಪರಿಹಾರ ರೂಪದಲ್ಲಿ ಧನ ಸಹಾಯ ಹಾಗೂ ರೊಟ್ಟಿ, ಅಕ್ಕಿ ಬೆಲ್ಲ, ಬೇಳೆ, ತಂಪು ನೀರು, ಮೊಸರು, ಮಜ್ಜಿಗೆ, ಪಂಚ ಪಾಕ್ವಾನ ಅಡುಗೆಗಳು  ಹರಿದು ಬರುತ್ತಿವೆ.
         ಇದರ ಹಿಂದಿನ ರೂವಾರಿಗಳು  ಗುರ್ಲಾಪೂರ ಗ್ರಾಮದ ಮುಖಂಡರಾದ ದುಂಡಪ್ಪ ಮುಗಳಖೋಡ,  ಕೆ ಆರ್ ದೇವರಮನಿ, ಚನ್ನಪ್ಪ ಮುಗಳಖೋಡ ಆರ್ ಬಿ  ನೇಮಗೌಡರ, ಎಂ ಎಂ ಮುಗಳಖೋಡ, ಯಲ್ಲಪ್ಪ ಸುಳ್ಳನವರ್, ಮಹಾದೇವ ಕುಲಗೋಡ, ಈರಯ್ಯ ಜಡಿ, ಶಿವಬಸು ಮುಗಳಖೋಡ,ವಿ ಬಿ ಮುಗಳಖೋಡ, ಎಸ್ ಜಿ ಹಂಚಿನಾಳ,ರೇವಪ್ಪ ಸತ್ತಿಗೇರಿ, ಸದಾಶಿವ ನೇಮಗೌಡರ,ಇಟನಾಳ  ಗ್ರಾಮದ ಕಲ್ಯಾಣಿ ಮಗದುಮ್, ಗೋವಿಂದ ಪೂಜಾರಿ, ಮಾಧು ಮಗದುಮ್, ಬಾಳಪ್ಪ ಬ್ಯಾಕೋಡ, ಮಹಾದೇವ ರಂಗಾಪುರ, ಹಾಗೂ ಗುರ್ಲಾಪುರ ಮತ್ತು  ಇಟನಾಳ  ಗ್ರಾಮಸ್ಥರು, ಹಿರಿಯರ ಇನ್ನೂ ಅನೇಕ ಸಮಾಧಾನಿಗಳು  ಅಡಗಿದ್ದಾರೆ.
WhatsApp Group Join Now
Telegram Group Join Now
Share This Article