ಎಸ್‌ಸಿ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಿ 

Pratibha Boi
ಎಸ್‌ಸಿ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಿ 
WhatsApp Group Join Now
Telegram Group Join Now
ಬಳ್ಳಾರಿ,ನ.೦೭: ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಾಗಿನಿAದ ಈವರೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪರಿಶಿಷ್ಟ ಜಾತಿ ಸಮುದಾಯದ ಎಡಗೈ ಸಮುದಾಯಕ್ಕೆ ಮಹಾನಗರದ ಮೇಯರ್ ಆಗುವ ಅವಕಾಶ ಸಿಕ್ಕಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷದ ನಾಯಕರು ಮನಸ್ಸುಮಾಡಿ ಎಡಗೈ ಸಮುದಾಯದ ಪಾಲಿಕೆ ಸದಸ್ಯರು ರವರನ್ನು ಮಹಾನಗರ ಪಾಲಿಕೆಯ ಮೇಯರ್ ಗಿರಿ ಹಿಡಿಯುವಂತೆ ಆಗಬೇಕು ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ ಹೆಗಡೆ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಮೇಯರ್ ಮತ್ತು ಉಪ ಮೇಯರ್ ಪಟ್ಟ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದೆ. ಈಗಾಗಲೇ ಸಾಮಾನ್ಯ ಅಭ್ಯರ್ಥಿಗಳು ಅನೇಕ ಬಾರಿ ಮೇಯರ್, ಉಪ ಮೇಯರ್ ಆಗಿದ್ದಾರೆ. ಇದನ್ನು ಮನಗಂಡು ಪಕ್ಷದ ನಾಯಕರು ಹೊಸ ಭಾಷ್ಯ ಬರೆಯಬೇಕು. ಎಸ್,ಸಿ. ಎಡಗೈ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಬೇಕು.
ಮಹಾನಗರ ಪಾಲಿಕೆ ವ್ಯಾಪ್ತಿಯ ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಿ ಸುಮಾರು ೮೦ ಸಾವಿರ ಮತದಾರರಿದ್ದಾರೆ. ಈ ಮತಗಳು ಬಹುತೇಕ ಕಾಂಗ್ರೆಸ್ ಪಕ್ಷದ ಖಾಯಂ ಮತಗಳಾಗಿವೆ. ಕಳೆದ ವಿಧಾನ ಸಭಾ ಚುನಾವಣೆ ವೇಳೆ ನಮ್ಮ ಸಮುದಾಯವು ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಂತಿದ್ದರಿAದಲೇ ಇಂದು ನಾವು ಎರಡೂ ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದೇವೆ. ಎಡಗೈ ಸಮುದಾಯ ಸದಾ ಕಾಂಗ್ರೆಸ್ ಪರ ಇದ್ದಾರೆ. ಅವರ ಕೊಡುಗೆಗೆ ಪ್ರತಿಫಲ ನೀಡಲು ನಮ್ಮ ನಾಯಕರು ಇಂದು ಮನಸ್ಸು ಮಾಡಬೇಕಿದೆ. ಬಹು ದೊಡ್ಡ ಸಮುದಾಯವಾದ ಎಡಗೈ ಸಮುದಾಯದವರಿಗೆ ಪಾಲಿಕೆಯ ಮೇಯರ್ ಪಟ್ಟಕ್ಕೆ ಆಯ್ಕೆ ಮಾಡಿ, ಅವರಿಗೆ ಉಡುಗೊರೆ ನೀಡಬೇಕು.
ಬಳ್ಳಾರಿ ನಗರ ಶಾಸಕ ಶ್ರೀ ನಾರಾ ಭರತ್ ರೆಡ್ಡಿ, ಗ್ರಾಮಾಂತರ ಶಾಸಕ ಶ್ರೀ. ಬಿ. ನಾಗೇಂದ್ರ, ಜಿಲ್ಲಾ ಉಸ್ತುವಾರಿ ಸಚಿವರು, ಪಕ್ಷದ ರಾಜ್ಯ ಸಭಾ ಸದಸ್ಯ ಶ್ರೀ ನಾಸಿರ್ ಹುಸೇನ್ ರವರು, ಬಳ್ಳಾರಿ ಜಿಲ್ಲಾ ಲೋಕಸಭಾ ಸದಸ್ಯರು ಶ್ರೀ ತುಕಾರಾಂ ರವರು ಮತ್ತು ಪಕ್ಷದ ಮುಖಂಡರು ಮನಸ್ಸು ಮಾಡಿ ಎಡಗೈ ಸಮುದಾಯದ ನಾಯಕರಿಗೆ ಮೇಯರ್ ಪಟ್ಟ ನೀಡಬೇಕು.ಮುಂದೆ ಬರುವ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಇದು ಸಹಕಾರಿ ಆಗಲಿದೆ.
ಅವಳಿ ಜಿಲ್ಲೆಯಲ್ಲಿ ಎಡಗೈ ಸಮುದಾಯ ಬಹಳ ದೊಡ್ಡ ಸಂಖ್ಯೆಯಲ್ಲಿ ಇದೆ. ಇದನ್ನು ಸಹ ನಾಯಕರು ಮನಗಾಣಬೇಕು.
ಈ ಪತ್ರಿಕಾಗೋಷ್ಠಿಯಲ್ಲಿ ಎರುಕುಲ ಸ್ವಾಮಿ, ಹುಸೇನಪ್ಪ , ವೀರೇಂದ್ರ ಕುಮಾರ್  ಟಿ.ಆನಂದ್, ಗೌತಮ್,ಬುಜ್ಜಿ, ಪೃಥ್ವಿ ರವಿಕುಮಾರ್, ವೀರೇಶ್ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article