ಯರಗಟ್ಟಿ : ತಾಲೂಕಾ ಆಡಳಿತ ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ೫೩೮ನೇ ದಾಸ ಶ್ರೇ? ಕನಕದಾಸರ ಜಯಂತಿಯನ್ನು ಅತಿ ವಿಜ್ರಂಭಣೆಯಿಂದ ಆಚರಿಸಲಾಯಿತು.ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪು?ರ್ಚನೆ ನೆರವೇರಿಸಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘಟನೆಯವರು, ಹಾಲುಮತ ಸಮಾಜದ ಬಾಂಧವರು, ಊರಿನ ಮುಖಂಡರು, ಪೊಲೀಸ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಬಾಗಿಯಾಗಿದ್ದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಹೇಸ್ಕಾಂ ಅಧಿಕಾರಿ ಮಹಾಂತೇಶ ಯರಗಟ್ಟಿ, ಪಿಎ??? ಎಲ್ ಬಿ ಮಾಳಿ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಪಟ್ಟಣ ಪಂಚಾಯಿತಿ ಸದಸ್ಯರಾದ ಹನಮಂತ ಹಾರೂಗೊಪ್ಪ, ನಿಖಿಲ ಪಾಟೀಲ, ಗ್ಯಾರೆಂಟಿ ಯೋಜನೆ ಅಧ್ಯಕ್ಷ ಗೋಪಾಲ ದಳವಾಯಿ, ಮಂಜುನಾಥ ತಡಸಲೂರ, ಶಿವಾನಂದ ಕರಿಗೋಣ್ಣವರ, ಮಹಾದೇವ ಮುರಗೋಡ, ಮುದಕಪ್ಪ ತಡಸಲೂರ, ಸಿದ್ದು ಮಾಳಕ್ಕನ್ನವರ, ಶ್ರೀಕಾಂತ ಕಿಲಾರಿ, ಫಕ್ಕೀರಪ್ಪ ಕಿಲಾರಿ, ಗಂಗಪ್ಪ ಮೀಶಿ, ಬೀರಪ್ಪ ಕುರಿ, ಹನಮಂತ ಪೂಜೇರ, ವಿಠ್ಠಲ ತೋರಣಗಟ್ಟಿ, ಇತರರು ಹಾಜರಿದ್ದರು.


