ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪಿಯು ಉಪನ್ಯಾಸಕರು ಮನವಿ

Ravi Talawar
ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪಿಯು ಉಪನ್ಯಾಸಕರು ಮನವಿ
WhatsApp Group Join Now
Telegram Group Join Now
ಬಳ್ಳಾರಿ:08. ಪದವಿ ಪೂರ್ವ ಶಿಕ್ಷಣ ಎಂಬುದು ಪದವಿಯ ಹೊಸ್ತಿಲಲ್ಲಿರುವ ಶಿಕ್ಷಣ. ನಮ್ಮ ರಾಜ್ಯದ ಪದವಿ ಪೂರ್ವ ಶಿಕ್ಷಣ ದೇಶದಲ್ಲೇ ಮಾದರಿಯಾಗಿ ನಡೆಯುತ್ತಿದ್ದೆ.ಆದರೆ ಇತ್ತೀಚಿನ ಕೆಲವು ಆದೇಶಗಳಿಂದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಚಾರ್ಯರು, ಉಪನ್ಯಾಸಕರು ಮತ್ತು  ಬೋಧಕೇತರ ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ||ರಾಜಣ್ಣ ತಿಳಿಸಿದರು.
ನಗರದಲ್ಲಿ ೧೨ ಬೇಡಿಕೆ ಈಡೇರಿಕೆಗಾಗಿ ಹೋರಾಟ ಮಾಡಿದ ಉಪನ್ಯಾಸಕರ ಮತ್ತು ಪ್ರಾಚಾರ್ಯರ ಸಂಘದ ನೂರಾರು ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ದೇಶಕ್ಕೆ ಮಾದರಿಯಾಗಿ ಕೆಲಸಮಾಡುತ್ತಿದ್ದ ಪರೀಕ್ಷಾ ಮಂಡಳಿಯನ್ನು ಶಾಲಾಶಿಕ್ಷಣದ ಅಡಿಯಲ್ಲಿ ಪ್ರೌಢಶಾಲಾ ಪರೀಕ್ಷಾ ಮಂಡಳಿಯೊAದಿಗೆ ವಿಲೀನ ಮಾಡಿದೆ,ಇದರಿಂದಾಗಿ ಪ.ಪೂ.ಶಿಕ್ಷಣ ಇಲಾಖೆಯ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ.ಜೊತೆಗೆ ಪದವಿ ಪೂರ್ವ ಶಿಕ್ಷಣಕ್ಕೆ ಸಂಬAಧವೇ ಇಲ್ಲದ ಮತ್ತು ಇಲ್ಲಿನ ಶೈಕ್ಷಣಿಕ ಸ್ಥಿತಿ ಗತಿಗಳ ಪರಿಚಯವೇ ಇಲ್ಲದ ಡಯಟ್ ನ ಉಪನ್ಯಾಸಕರನ್ನು ಪದವಿ ಪೂರ್ವ ಕಾಲೇಜುಗಳಿಗೆ ದತ್ತಾಂಶ ಕ್ರೋಢೀಕರಿಸುವ ನೆಪದಲ್ಲಿ ಕಾಲೇಜುಗಳನ್ನು ಪರಿಶೀಲನೆಮಾಡಲು ಕಳಿಸುತ್ತಿರುವುದು ಪದವಿ ಪೂರ್ವ ಶಿಕ್ಷಣದ ದುರಂತವೇ ಸರಿ ಎಂದರು.
ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ಈಗಾಗಲೇ ಸಾಕಷ್ಡು ಕಾರ್ಯಭಾರ ಇದ್ದರೂ ಪ್ರೌಢಶಾಲೆಯ ೯ನೇ ಮತ್ತು ೧೦ನೇ ತರಗತಿಯ ಮಕ್ಕಳಿಗೆ ಬೋಧನೆ ಮಾಡುವ ಜವಾಬ್ದಾರಿ ಹೊರಿಸುವ ಆದೇಶ ಮಾಡಲಿರುವ ಕಡತವನ್ನು ಮಾನ್ಯ ಶಾಲಾ ಶಿಕ್ಷಣ ಸಚಿವರು ಮಾನ್ಯಮಾಡದೆ ತಿರಸ್ಕರಿಸ ಬೇಕೆಂದು ಕೋರುತ್ತೇವೆ ಎಂದರು.
ಪ್ರಾಚಾರ್ಯರ ಸಂಘದ ಜಿಲ್ಲಾ ಅಧÀ್ಯಕ್ಷ  ಸಣ್ಣ ಶಿವರಾಮ  ಮಾತನಾಡಿ, ೨೦೨೪-೨೫ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನದ ನಂತರ ನೀಡಬೇಕಿದ್ದ ಹಣ. ₹೧೩.೫ ಕೋಟಿ ಹಣ ಕೂಡಲೇ ಬಿಡುಗಡೆ ಮಾಡಬೇಕು,ನಮ್ಮ ಇಲಾಖೆಯಲ್ಲಿ ಖಾಲಿ ಇರುವ  ಸರ್ಕಾರಿ ಮತ್ತು ಅನುದಾನಿತ ಕಾಲೇಜು ಗಳಲ್ಲಿನ ಪ್ರಾಚಾರ್ಯರ,ಉಪನ್ಯಾಸಕರ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿ ಕಾಲಕಾಲಕ್ಕೆ ನಡೆಯುವಂತೆ ಮನವಿ ಮಾಡಿದರು.ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಸಂಪೂರ್ಣ ಅಧಿಕಾರವನ್ನು ಪ್ರಾಂಶುಪಾಲರಿಗೆ ನೀಡಬೇಕು, ಮಕ್ಕಳ ಮತ್ತು ಉಪನ್ಯಾಸಕರ ನಡುವಿನ ಅನುಪಾತ ತಜ್ಞರ ಅಭಿಪ್ರಾಯದಂತೆ ಜಾರಿಗೆ ತರಬೇಕು.ಮಾತ್ರವಲ್ಲ ೨೦೦೬ರ ನಂತರ ನೇಮಕಗೊಂಡ ನೌಕರರಿಗೆ ಹಳೇ ಪಿಂಚಣಿ ಸೌಲಭ್ಯ ಜಾರಿಗೊಳಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಪದವಿ ಪೂರ್ವ ಕಾಲೇಜು ಗಳ ಪ್ರಾಚಾರ್ಯರ ರ ಸಂಘ ದ ಅಧ್ಯಕ್ಷ ಡಾ.ಸಣ್ಣ ಶಿವರಾಮ್, ಕಾರ್ಯ ಅಧ್ಯಕ್ಷ ಶ್ರೀಶೈಲ. ಉಪಾಧÀ್ಯಕ್ಷ  ಸುಲೇಖಾ.ಬಿ. ಕಾರ್ಯದರ್ಶಿ ನಾಗೇಶ್ವರ್ ರಾವ್. ಡಾ ಗೋವಿಂದ ರಾಜ್. ಸುಂಕಪ್ಪ. ಪದಾಧಿಕಾರಿಗಳು. ಜಿಲ್ಲಾ ಉಪನ್ಯಾಸಕ ಸಂಘ ದ ಅಧ್ಯಕ್ಷರು ಡಾ. ಎಂ. ರಾಜಣ್ಣ. ಪ್ರ. ಕಾರ್ಯ ದರ್ಶಿ ಪಂಚಾಕ್ಷರಪ್ಪ. ಖಜಾಂಚಿ ಡಾ ಲೋಕೇಶ್. ತಾಲೂಕು ಅಧ್ಯಕ್ಷರಾದ ಬಿ.ಪಿ. ಕಲ್ಲಪ್ಪ. ಶ್ಯಾಮಣ್ಣ. ನೌಕರರ ಸಂಘದ ಸದಸ್ಯರಾದ  ಟಿ.ಆಂಜನೇಯಲು. ಲಿಂಗರಾಜ್.ಬೋಧಕೇತರ ಸಿಬ್ಬಂದಿ ಗಳ ಅದ್ಯಕ್ಷ ಮದ್ದಿಕೇರಪ್ಪ, ನಾಗರಾಜ್ ಎನ್ ಸಿ, ಜಿಲ್ಲೆ ಯ ಎಲ್ಲಾ ಉಪನ್ಯಾಸಕರು  ಪ್ರಾಚಾರ್ಯರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article