ರಾಮದುರ್ಗ: ತಾಲೂಕಾ ಪ್ರದೇಶ ಕುರುಬರ ಸಂಘ ಹಾಗೂ ಹಾಲುಮತ ಮಹಾಸಭಾ ಮತ್ತು ಕುರುಬ ನೌಕರರ ಸಂಘ ತಾಲೂಕಾ ಘಟಕದ ನೇತೃತ್ವದಲ್ಲಿ ನ.೮ ರಂದು ಪಟ್ಟಣದ ಪ್ರಗತಿ ಸಭಾಭವನದಲ್ಲಿ ಶ್ರೀ ಭಕ್ತ ಕನಕದಾಸರ ೫೩೮ ನೇ ಜಯಂತೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಪಡಿಯಪ್ಪ ಕ್ವಾರಿ ಹೇಳಿದರು.
ಪಟ್ಟಣದ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ. ೮ ರಂದು ಬೆಳಿಗ್ಗೆ ೯ ಗಂಟೆಗೆ ಪಟ್ಟಣದ ಹೊರವಲಯದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕನದಾಸರ ಮೆರವಣೆಗೆ ಆರಂಭಗೊಂಡು ಪಟ್ಟಣದ ವಿವಿಧ ಗಲ್ಲಿಗಳಲ್ಲಿ ಸಂಚರಿಸಿ ನಂತರ ಪ್ರಗತಿ ಸಭಾ ವೇದಿಕೆಗೆ ತೆರಳಲಿದೆ. ನಂತರ ಮಧ್ಯಾಹ್ನ ೧೨ ಗಂಟೆಗೆ ಜಯಂತೋತ್ಸವ ಸಮಾರಂಭ ನೇರವೆರಲಿದೆ ಎಂದು ತಿಳಿಸಿದರು.
ಜಯಂತೋತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ಯಾದವಾಡ ಶ್ರೀ ಮಾಳಿಂಗರಾಯ ಆಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಕಟಕೋಳದ ಶ್ರೀ ಸಿದ್ದರಾಯ ಅಜ್ಜನವರು, ಜಾಲಿಕಟ್ಟಿಯ ಶ್ರೀ ಕೃಷ್ಣಾನಂದ ಸ್ವಾಮೀಜಿ, ಹಳೇತೊರಗಲ್ಲದ ಶ್ರೀ ಕರಿಸಿದ್ದೇಶ್ವರ ಪಟ್ಟದ ಶ್ರೀ ಹನಮಂತ ಅಜ್ಜನವರು ವಹಿಸುವರು.
ಕುರುಬ ಸಮಾಜದ ತಾಲೂಕಾಧ್ಯಕ್ಷ ಪಡಿಯಪ್ಪ ಕ್ವಾರಿ ಅಧ್ಯಕ್ಷತೆ ವಹಿಸುವರು. ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಜಯಂತೋತ್ಸವ ಸಮಾರಂಭ ಉದ್ಘಾಟಿಸುವರು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ| ನಾಗಲಕ್ಷ್ಮೀ ಚೌಧರಿ ಜ್ಯೋತಿ ಬೆಳಗಿಸುವರು. ಸಾಹಿತಿ ಡಾ| ವೈ.ಎಂ. ಯಾಕೊಳಿ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ, ಅತಿಥಿಗಳಾಗಿ ಕ.ಪ್ರ.ಕು.ಸಂ ನಿರ್ದೇಶಕ ಅಶೋಕ ಮೆಟಗುಡ್ಡ, ಸಮಾಜದ ಮುಖಂಡರಾದ ಸೋಮಶೇಖರ ಶಿದ್ಲಿಂಗಪ್ಪನವರ, ಮಲ್ಲಪ್ಪ ಸೋಮಗೊಂಡ, ವಿಠ್ಠಲ ಜಟಗನ್ನವರ, ಎಚ್.ಬಿ. ಕಿತ್ತೂರ, ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ನಿರ್ದೇಶಕ ಈರಣ್ಣ ಕಾಮಣ್ಣವರ ಸೇರಿದಂತೆ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಕಾರಣ ತಾಲೂಕಿನ ಕುರುಬ ಸೇರಿದಂತೆ ಸಮುದಾಯದ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಅಶೋಕ ಮೆಟಗುಡ್ಡ, ಮಲ್ಲಪ್ಪ ಸೋಮಗೊಂಡ, ವಿಠ್ಠಲ ಜಟಗನ್ನವರ, ಸೋಮಶೇಖರ ಶಿದ್ಲಿಂಗಪ್ಪನವರ, ಕೆ.ಎಲ್. ಕ್ವಾರಿ, ಎಂ.ಡಿ. ಮಟ್ಟಿನ, ಪಿ.ಕೆ. ಮೆಟ್ಟಿನ, ಸಿದ್ದಣ್ಣ ಮಕೈನ್ನವರ, ಎನ್.ಎಫ್. ಚಂದರಗಿ, ಬಾಳನಗೌಡ ಬಾಗೋಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇಂದು ಶ್ರೀ ಭಕ್ತ ಕನಕದಾಸರ ೫೩೮ ನೇ ಜಯಂತೋತ್ಸವ


