ಗುರ್ಲಾಪೂರ : ಪ್ರತಿ ವರ್ಷ ಎಲ್ಲ ವಸ್ತುಗಳು, ಕೃಷಿಗೆ ಬೇಕಾದ ಸಲಕರಣೆಗಳ ಬೆಲೆ ಏರಿಕೆಯಾಗುತ್ತಿದ್ದು, ಆದರೆ ರೈತರು ಪ್ರತಿ ವರ್ಷ ತಾನು ಬೆಳೆದ ಬೆಳೆಗೆ ಉತ್ತಮ ದರ ಕೇಳುವ ಅಧಿಕಾರ ಇಲ್ಲವಾ ಎಂದು ಸರ್ಕಾರದ ವಿರುದ್ಧ ಕನ್ನೆರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಗುಡುಗಿದರು.
ಗುರ್ಲಾಪೂರ ಕ್ರಾಸ್ ದಲ್ಲಿ ನಡೆಯುತ್ತಿರುವ 8ನೇ ದಿನದ ರೈತರು ಹೋರಾಟದ ವೇದಿಕೆಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ರಾತ್ರೋ ರಾತ್ರಿ ಕೋರ್ಟ್ ಬಾಗಿಲು ತೆರೆದು ಕೇಸ್ ನಡೆಸಿ ನ್ಯಾಯ ಒದಗಿಸುತ್ತೀರಿ ಆದರೆ ಬಿಸಿಲು ಮಳೆ ಎನ್ನದೆ ಸತತವಾಗಿ ಅಹೋರಾತ್ರಿ ಹೋರಾಟ ಮಾಡುತ್ತಿರುವ ರೈತರಿಗೆ ಯಾಕೆ ನ್ಯಾಯ ಕೊಡಿಸುತ್ತಿಲ್ಲ ಎಂದು ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದರು.
ಹಗಲು ರಾತ್ರಿ ಎನ್ನದೆ ಕಬ್ಬಿನ ಬೆಳೆಗೆ ನೀರು ಹಾಯಿಸಲು ತನ್ನ ಆರೋಗ್ಯವನ್ನು ಲೆಕ್ಕಿಸದೆ ಹೋಗುತ್ತಾನೆ. ಅಂತಹ ಸಂದರ್ಭದಲ್ಲಿ ಹಾವು ಕಡಿತ, ರಸ್ತೆ ಅಪಘಾತಗಳು, ವಿದ್ಯುತ್ ತಂತಿ ಸ್ಪರ್ಶದಿಂದ ಸಾಕಷ್ಟು ರೈತರು ಮೃತಪಟ್ಟಿರುವ ಸಂಗತಿಗಳು ಇದ್ದರೂ ಸಹ ಯಾರೊಬ್ಬ ರೈತರು ಸಹ ಹೆದರಿ ಭೂತಾಯಿ ಮಡಿಲಲ್ಲಿ ಕಾಯಕ ಮಾಡುವುದನ್ನು ಬಿಟ್ಟಿಲ್ಲ ಅಂತಹ ಅನ್ನದಾತನಿಗೆ ನ್ಯಾಯ ಸಿಗಲೇಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ರೈತರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಗಲಿರು ದುಡಿದರು ಸಹ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಿಲ್ಲ, ಇದೇ ರೀತಿ ರೈತರು ಬೆಳೆದ ಬೆಳೆಗೆ ಸೂಕ್ತದರ ಸಿಗದೆ ಸಾಲದ ಸುಳಿಯಲ್ಲಿ ಸಿಗುವಂತಾಗಿದೆ ರೈತರ ಪರಿಸ್ಥಿತಿ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಈ ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸಿ, ರೈತರ ಬೇಡಿಕೆಯಾಗಿರುವ ಕಬ್ಬಿಣದ ನಿಗದಿ ಮಾಡಬೇಕೆಂದರು.
ಇಡೀ ವಿಶ್ವದಲ್ಲೇ ಯಾವುದೇ ವಸ್ತುಗಳನ್ನಾಗಲಿ ಸೃಷ್ಟಿಸುವ ಶಕ್ತಿ ಮಾನವನಿಗಿದೆ ಆದರೆ ಅನ್ನವನ್ನು ಸೃಷ್ಟಿಸುವ ಶಕ್ತಿ ರೈತನಿಂದ ಮಾತ್ರ ಸಾಧ್ಯ ಹಾಗಾಗಿ ರೈತರನ್ನು ಹತ್ತಿಕುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಬಾರದೆಂದರು. ಈ ರೈತರ ಆಂದೋಲನದಲ್ಲಿ ಹಿಂಸೆಗೆ ಆತ್ಮದ ಕೊಡಬಾರದು, ಕಾನೂನಿನ ಚೌಕಟ್ಟಿನಲ್ಲಿ ಆಂದೋಲನವು ದೀರ್ಘ ಕಾಲದವರೆಗೂ ಹೋದರು ಸಹ ತಾರ್ತಿಕ ಅಂತ್ಯ ಕಾಣುವವರೆಗೂ ಆಂದೋಲನವನ್ನು ನಡೆಸಬೇಕೆಂದು ರೈತರಿಗೆ ಸಲಹೆ ನೀಡಿದರು.
ಧರ್ಮ ಕ್ಷೇತ್ರಗಳು ನಿಂತಿದ್ದು ರೈತರ ಮೇಲೆ ಆದ್ದರಿಂದ ನಾವುಗಳು ನಿಮ್ಮ ಹೋರಾಟದ ಜೊತೆ ನಾವು ಇರುತ್ತೇವೆ. ಆವೇಶದ ಸಭೆಯಾಗದೆ ಶಾಂತಿಯುತವಾಗಿರಬೇಕು. ಸರ್ಕಾರ ಯಾರ್ಯಾರಿಗೂ ಭಾಗ್ಯಗಳನ್ನು ನೀಡಿದ್ದೀರಿ ಹಾಗೆ ರೈತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೂ ಒಂದು ಭಾಗ್ಯ ನೀಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೊಸ ಯರಗುಂದ್ರಿಯ ಸಿದ್ದಪ್ರಭು ಶಿವಾಚಾರ್ಯ ಸ್ವಾಮೀಜಿ, ಮಣ್ಣಿಕೇರಿಯ ವಿಜಯಮಾಂತ ಶ್ರೀಗಳು, ಶಿರೋಳದ ಶಂಕರಾರೊಡ ಸ್ವಾಮೀಜಿ, ಅಡಿಗಿನಾಳದ ಮುತ್ತೇಶ್ವರ ಶ್ರೀಗಳು, ಬೆಳಗಲಿಯ ಸದಾಶಿವ್ ಗುರೂಜಿ, ನಿಪ್ಪಾಣಿಯ ಪ್ರಾಣಲಿಂಗೇಶ್ವರ ಸ್ವಾಮೀಜಿ, ಹುಬ್ಬಳ್ಳಿಯ ಶಿವ ಶಂಕರಾಚಾರ್ಯ ಸ್ವಾಮೀಜಿ ಪರಸಾನಂದ ಸ್ವಾಮೀಜಿ ಹಾಗೂ ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಸಿ ಸೇರಿದಂತೆ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.


