ಹರಿಯಾಣ,ನವೆಂಬರ್ 06: 2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಲಕ್ಷಾಂತರ ನಕಲಿ ಮತಗಳು ಚಲಾವಣೆಯಾಗಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಬ್ರೆಜಿಲ್ ಮಾಡೆಲ್ ಫೋಟೊವೊಂದನ್ನು ತೋರಿಸಿ ಮತದಾರರ ಪಟ್ಟಿಯಲ್ಲಿ ಈಕೆ 22 ಬಾರಿ ಕಾಣಿಸಿಕೊಂಡಿದ್ದಾರೆಂದು ಆರೋಪಿಸಿದ್ದರು. ಈಗ ಆ ಮಾಡೆಲ್ ವಿಡಿಯೋವೊಂದನ್ನು ಮಾಡಿದ್ದು, ಆಕೆಗೂ ಭಾರತದ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಫೋಟೋದಲ್ಲಿರುವ ಮಹಿಳೆಯನ್ನು ಲಾರಿಸ್ಸಾ ಎಂದು ಗುರುತಿಸಲಾಗಿದೆ. ಅವರು ವೀಡಿಯೊ ಬಿಡುಗಡೆ ಮಾಡಿ, ಈ ಚಿತ್ರವು ಅವರ ಮಾಡೆಲಿಂಗ್ ದಿನಗಳದ್ದಾಗಿದ್ದು, ಅದು ಸ್ಟಾಕ್ ಫೋಟೋ ಎಂದು ಸ್ಪಷ್ಟಪಡಿಸಿದ್ದಾರೆ.ನಗೆ ಭಾರತೀಯ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಫೋಟೋವನ್ನು ಸ್ಟಾಕ್ ಇಮೇಜ್ ಪ್ಲಾಟ್‌ಫಾರ್ಮ್‌ನಿಂದ ಪಡೆಯಲಾಗಿದೆ. ನಾನು ಎಂದಿಗೂ ಭಾರತಕ್ಕೆ ಹೋಗೇ ಇಲ್ಲ. ನಾನು ಬ್ರೆಜಿಲ್ ಮಾಡೆಲ್, ಕೇಶ ವಿನ್ಯಾಸಗಿ ಮತ್ತು ಭಾರತದ ಜನರನ್ನು ಪ್ರೀತಿಸುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ವಾಸಿಸುವ ಈ ಮಹಿಳೆಯ ಹೆಸರು ಲಾರಿಸ್ಸಾ. ಭಾರತದಲ್ಲಿ ಅವರ ಬಗ್ಗೆ ನಡೆದ ಚರ್ಚೆ ಅವರಿಗೆ ಎಂಟನೇ ಅದ್ಭುತಕ್ಕಿಂತ ಕಡಿಮೆಯಿಲ್ಲ.
ನಮಸ್ಕಾರ ಭಾರತ, ಭಾರತೀಯ ಪತ್ರಕರ್ತರಿಗಾಗಿ ಒಂದು ವಿಡಿಯೋ ಮಾಡಲು ನನ್ನನ್ನು ಕೇಳಲಾಯಿತು. ಅದಕ್ಕಾಗಿಯೇ ನಾನು ಈ ವಿಡಿಯೋ ಮಾಡುತ್ತಿದ್ದೇನೆ. ನನಗೆ ಭಾರತೀಯ ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ. ನಾನು ಭಾರತಕ್ಕೆ ಎಂದಿಗೂ ಹೋಗಿಲ್ಲ. ನಾನು ಬ್ರೆಜಿಲಿಯನ್ ಮಾಡೆಲ್ ಆಗಿದ್ದೆ ಮತ್ತು ನಾನು ಡಿಜಿಟಲ್ ಪ್ರಭಾವಿಯೂ ಆಗಿದ್ದೇನೆ. ನಾನು ಭಾರತದ ಜನರನ್ನು ಪ್ರೀತಿಸುತ್ತೇನೆ. ತುಂಬಾ ಧನ್ಯವಾದಗಳು, ನಮಸ್ತೆ ಎಂದು ಹೇಳಿದ್ದಾರೆ.


