ಬಳ್ಳಾರಿ, ನ.06: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಬಿಡಿಸಿಸಿಐ)ಯ ನೂತನ ಉಪಾಧ್ಯಕ್ಷರಾಗಿ ಪಿ.ಪಾಲಣ್ಣ ಅವರು ಬುಧವಾರ ಆಯ್ಕೆಯಾಗಿದ್ದಾರೆ. ಬುಧವಾರ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆ ಜಿಲ್ಲೆ ಕೇಂದ್ರ ಕಚೇರಿಯಲ್ಲಿ ನಡೆಯಿತು. ಹಾಲಿ ಅಧ್ಯಕ್ಷರಾಗಿದ್ದ ಯಶವಂತರಾಜ ನಾಗಿರೆಡ್ಡಿ ಅವರು ಸಂಸ್ಥೆಯ ಭವಿಷ್ಯ, ಹೊಸ ನಾಯಕರಿಗೆ ಅವಕಾಶ ನೀಡುವ ಉದ್ದೇಶದಿಂದ ತಮ್ಮ ಸ್ಥಾನದಿಂದ ರಾಜೀನಾಮೆ ಘೋಷಿಸಿದರು. ನಂತರ ಸಭೆಯಲ್ಲಿ ಏಕಮತದಿಂದ ನೂತನ ಅಧ್ಯಕ್ಷರಾಗಿ ಅವ್ವರು ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ಪಿ.ಪಾಲಣ್ಣ ಅವರನ್ನು ಆಯ್ಕೆ ಮಾಡಲಾಯಿತು.
ವಜ್ರಮಹೋತ್ಸವ ಹಂತದಲ್ಲಿರುವ ಸಂಸ್ಥೆಯು ಜಿಲ್ಲೆಯ ಉದ್ಯಮಶೀಲತೆಗೆ ಮಹತ್ತರ ಕೊಡುಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಹೊಸ ನಾಯಕತ್ವದಿಂದ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಹೊಸ ದಿಕ್ಕು ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಗೌರವ ಕಾರ್ಯದರ್ಶಿಗಳಾಗಿ ಕೆ.ಸಿ. ಸುರೇಶಬಾಬು, ಉಪಾಧ್ಯಕ್ಷರಾಗಿ ಸೊಂತ ಗಿರಿಧರ್, ಜಂಟಿ ಕಾರ್ಯದರ್ಶಿಗಳಾಗಿ ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ ಮತ್ತು ವಿ. ರಾಮಚಂದ್ರ ಅವರು ಮುಂದುವರಿದರು.
ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಸಿ. ಶ್ರೀನಿವಾಸರಾವ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಎಸ್. ಸತ್ಯನಾರಾಯಣ, ಜೆ. ರಾಜೇಶ್, ನೇಕಾರ ನಾಗರಾಜ್, ತಾಟಕೂರಿ ಶ್ರೀನಿವಾಸರಾವ್, ಪಿ. ಗಿರೀಶ್, ಎಸ್. ಜಿತೇಂದ್ರ ಪ್ರಸಾದ್, ಯು. ಗೋವಿಂದರೆಡ್ಡಿ, ಎಚ್. ರಾಜೇಶ್ ಕುಮಾರ್, ಎಸ್.ಪಿ. ವೆಂಕಟೇಶ್, ವಿ.ಕೆ.ಎಲ್. ದೀಪಕ್, ಆರ್. ನಾಗರಾಜ್, ಪಿ. ವೇಣುಗೋಪಾಲ್ ಗುಪ್ತ, ಜಿ. ರಾಘವೇಂದ್ರ ರೆಡ್ಡಿ, ಬಿ. ನಾಗರಾಜ್ ಹಾಗೂ ಕೆ. ಗೋಪಾಲರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


