ಗುರ್ಲಾಪೂರ ೦೫ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಬೃಹತ್ ಪ್ರತಿಭಟನೆಯ ಸಂಧಾನಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ ರಾಜ್ಯ ಕಾನೂನು ಸಚಿವರಾದ ಎಚ್.ಕೆ. ಪಾಟೀಲ ಸಂಜೆ ಆಗಮಿಸಿದರು
ರೈತ ಸಂಘದ ರಾಜ್ಯಾಧ್ಯಕ್ಷರಾದ ಚೂನಪ್ಪ ಪೂಜೇರಿಯವರು ರೈತರಿಗೆ ಆಗುತ್ತಿರುವ ಕಾರ್ಖಾನೆಯ ಮಾಲೀಕರಿಂದ ಆಗುತ್ತಿರುವ ಅನ್ಯಾಯ ಹಾಗೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಂದಲೂ ರೈತರಿಗೆ ಅನ್ಯಾಯವಾಗುತ್ತಿದೆ. ಎಪ್.ಆರ್.ಪಿ ದರ ಘೋಷಣೆ ಆಗಲಿ ಕಾರ್ಖಾನೆ ಮಾಲೀಕರಿಂದ ಬಿಲ್ ವಿಳಂಬ ಇನ್ನೂ ಹಲವಾರು ಸಮಸ್ಯೆಗಳನ್ನು ಹೇಳಿದರು ಹಾಗೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಪ್ರತಿ ಟನ್ನಿಗೆ ತಲಾ ೧೦೦೦/- ಕೊಡಬೇಕೆಂದು ಸಚೀವರ ಗಮನ ಸೆಳೆದರು.
ಇದಕ್ಕೆ ಸಚೀವರು ಮಾತನಾಡಿ ಸನ್ಮಾನ್ಯ ಮುಖ್ಯಮಂತ್ರಿಗಳು ಗುರ್ಲಾಪೂರ್ ಕ್ರಾಸ್‌ನಲ್ಲಿ ರೈತರ ಹೋರಾಟ ತೀವ್ರವಾಗಿರುವುದು ಆದ್ದರಿಂದ ತಾವು ಹೋಗಿ ಅದರ ಸಮಸ್ಯೆ ಆಲಿಸಿ ಎಂದು ತಿಳಿಸಿರುತ್ತಾರೆ. ಆದ ಕಾರಣದಿಂದ ನಾನು ಒಂದೆ ಸಮಸ್ಯೆ ಇರುವುದೆಂದು ಭಾವಿಸಿದ್ದೆ ಇಲ್ಲಿಗೆ ಬಂದ ಮೇಲೆ ಸಮಸ್ಯೆಗಳು ಬಹಳ ಇರುವುದರಿಂದ ನನ್ನೊಬ್ಬನಿಂದ ಇದಕ್ಕೆ ಪರಿಹಾರ ಆಗುವುದಿಲ್ಲ ಆದ ಕಾರಣ ನಾವು ೧೦ ಅಥವಾ ೫೦ ಜನರ ನಿಯೋಗ ಬೆಂಗಳೂರಿಗೆ ಕರೆ ತಂದು ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಇಲ್ಲವಾದರೆ ನಾನು ತಕ್ಷಣದಿಂದಲೇ ಪೋನ್ ಮುಂಖಾಂತರ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಇಲ್ಲವಾದರೆ ನಾಳೆ ಸಂಜೆ ಒಳಗಾಗಿ ಮುಖ್ಯಮಂತ್ರಿಗಳ ಜೊತೆ ಮೊದಲು ರೈತರ ಸಮಸ್ಯೆಯ ಸಭೆ ಮಾಡಿ ನಂತರ ಕಾರ್ಖಾನೆ ಮಾಲೀಕರ ಜೊತೆ ನಿಮಗೆ ತಿರ್ಮಾನ ತಿಳಿಸುತ್ತೇವೆ. ನಮಗೆ ಎರಡು ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದರು.

ರೈತ ಮುಖಂಡ ಶಶಿಕಾಂತ ಗುರೂಜಿ ಮಾತನಾಡಿ ನಾವು ಎಲ್ಲಿಗೂ ಬರುವುದಿಲ್ಲ ನಾವು ಬಂದರೆ ನಮ್ಮ ಪ್ರತಿಭಟನೆಗೆ ತಪ್ಪು ಸಂದೇಶ ಹೊಗುತ್ತದೆ. ನಮಗೆ ಜಿಲ್ಲಾಧಿಕಾರಿಗಳ ಮೇಲೆ ಸಂಪೂರ್ಣ ವಿಶ್ವಾಸ ಕಾರ್ಖಾನೆ ಮಾಲೀಕರ ಜೊತೆ ಮಾತನಾಡಿ ನಾಳೆ ಸಂಜೆಯೊಳಗಾಗಿ ತಮ್ಮ ತೀರ್ಮಾನ ತಿಳಿಸಿ ಎಂದರೂ.
ಹೋರಾಟಗಾರರು ಒಕ್ಕೊರರಿಂದ ತೀರ್ಮಾನ ಪ್ರತಿಭಟನೆ ಸ್ಥಳದಲ್ಲಿಯೆ ಆಗಬೇಕು ಸಬಂಧ ಪಟ್ಟವರು ಇಲ್ಲೀಯೆ ಬರಬೇಕೆಂದು ಪಟ್ಟುಹಿಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಮೊಹಮ್ಮದರೋಷನ, ಎಸ್.ಪಿ. ಭೀಮಾಶಂಕರ ಗುಳ್ಳೇದ, ಹುಣಶಿಕಟ್ಟಿ-ಹಡಗಿನಾಳದ ಮುತ್ತೇಶ್ವರ ಮಹಾಸ್ವಾಮಿಗಳು ಹಾಗೂ ಹುಲಜಂತಿ ಮಾಳಿಂಗರಾಯನ ಮಹಾಸ್ವಾಮಿಗಳು, ಕಾಂಗ್ರೇಸ್ ಮುಖಂಡ ಲಕ್ಕಣ್ಣಾ ಸವಸುದ್ದಿ, ಡಾ|| ಮಹಾಂತೇಶ ಕಡಾಡಿ, ರೈತ ಮುಖಂಡ ಸುಭಾಸ ಶಿರಬೂರು, ಶ್ರೀಶೈಲ ಅಂಗಡಿ, ಕೆಂಪಣ್ಣಾ ಅಂಗಡಿ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.


