ಸಜ್ಜಿ ಯಲ್ಲಮ್ಮ ದೇವಸ್ಥಾನದ ಜೀರ್ಣೋದ್ದಾರ ಕಟ್ಟಡದ  ನೂತನ ಕಳಸಾರೋಹಣ ಸಂಪನ್ನ

Pratibha Boi
ಸಜ್ಜಿ ಯಲ್ಲಮ್ಮ ದೇವಸ್ಥಾನದ ಜೀರ್ಣೋದ್ದಾರ ಕಟ್ಟಡದ  ನೂತನ ಕಳಸಾರೋಹಣ ಸಂಪನ್ನ
WhatsApp Group Join Now
Telegram Group Join Now
ಅಥಣಿ: ಸಜ್ಜಿ ಯಲ್ಲಮ್ಮ ದೇವಸ್ಥಾನ ಅತ್ಯಂತ ಪ್ರಸಿದ್ಧವಾದ ಹಾಗೂ ಧಾರ್ಮಿಕ ನಂಬಿಕೆ ವಿಚಾರದಲ್ಲಿ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಆಂಧ್ರಪ್ರದೇಶ ತಮಿಳುನಾಡು ರಾಜ್ಯಗಳಿಂದ ಲಕ್ಷಾಂತರ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು ಕೃತಾರ್ಥರಾಗಿದ್ದಾರೆ. ಇಂತಹ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ನಮ್ಮ ಅಲ್ಪ ಸೇವೆ ಸಲ್ಲಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದು ಮಾಜಿ ಪುರಸಭೆ ಅಧ್ಯಕ್ಷ ದಿಲೀಪ ಲೋಣಾರೆ ಹೇಳಿದರು
ಅಥಣಿ ಪಟ್ಟಣದ ಹೊರವಲಯದಲ್ಲಿರುವ
ಸಜ್ಜಿ ಯಲ್ಲಮ್ಮ ದೇವಸ್ಥಾನದ ಜೀರ್ಣೋದ್ದಾರ ಕಟ್ಟಡದ  ನೂತನ ಕಳಸಾರೋಹಣ ಸಮಾರಂಭ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಮಾಜಿ ಪುರಸಭೆಯ ಅಧ್ಯಕ್ಷ ದಿಲೀಪ ಲೊಣಾರೆ ಅವರು ಅತ್ಯಂತ ಪ್ರಸಿದ್ಧವಾದ ಸಜ್ಜಿ ಯಲ್ಲಮ್ಮ ದೇವಸ್ಥಾನ ಕಟ್ಟಡ ಜೀರ್ಣೋದ್ಧಾರಕ್ಕಾಗಿ ತನು ಮನ ಧನಸಾಯದ ಮೂಲಕ ಅತ್ಯಂತ ಸುಂದರವಾಗಿ ಅಭಿವೃದ್ಧಿಪಡಿಸಿರುವುದು ಇಲ್ಲಿಗೆ ಬರುವ ಭಕ್ತರಿಗೆ ಸಹಕಾರಿಯಾಗಲಿದೆ. ದೇವಸ್ಥಾನದ ಹಲವು ಕಾರ್ಯಗಳು ನಡೆಯಬೇಕಾಗಿದ್ದು ಉಳ್ಳವರು ಹಾಗೂ ಸ್ಥಿತಿವಂತರು ದೇವಸ್ಥಾನದ ಅಭಿವೃದ್ಧಿಗಾಗಿ ತಮ್ಮ ತನು ಮನದ ಸಹಾಯವನ್ನು ಮಾಡಬೇಕು ಎಂದು ಮನವಿ ಮಾಡಿದರು
ಈ ವೇಳೆ ಸಜ್ಜಿ ಎಲ್ಲಮ್ಮ ದೇವಸ್ಥಾನದ ದೇವಸ್ಥಾನ ಕಮಿಟಿಯ ಸದಸ್ಯರು, ಕುಂಭ ಹೊತ್ತ ಮಹಿಳೆಯರು, ಹಾಗೂ ಸಾವಿರಾರು ಜನ ದೇವಿಯ ಭಕ್ತಾದಿಗಳು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article