ರನ್ನ ಬೆಳಗಲಿ:ನ. ೦೫., ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ, ಬಾಗಲಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಮುಧೋಳ.ಸಮೂಹ ಸಂಪನ್ಮೂಲ ಕೇಂದ್ರ ಮತ್ತು ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಮುಗಳಖೋಡ ಇವರ ಸಹಯೋಗದಲ್ಲಿ ಕ್ಲಸ್ಟರ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಸನ್ ೨೦೨೫ -೨೬ ನೇ ಸಾಲಿನ “ಪ್ರತಿಭಾ ಕಾರಂಜಿ” ಹಾಗೂ “ಕಲಿಕೋತ್ಸವ” ಕಾರ್ಯಕ್ರಮವು ಸೋಮವಾರ ದಂದು ಜರುಗಿತು.
ಎ ಆರ್ ಛಬ್ಬಿ ಕ್ಷೇತ್ರ ಸಮನ್ವಯಾಧಿಕಾರಿಯು ಪ್ರತಿಭೆಗಳನ್ನು ಗುರುತಿಸಿ ಬೆಳೆಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮವಾಗಿದೆ.ಪ್ರತಿ ಮಗುವಿನಲ್ಲಿ ಕೂಡಾ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಪಾಲಕರು, ಶಿಕ್ಷಕರು ಆ ಪ್ರತಿಭೆಗಳನ್ನು ಗುರುತಿಸುವ ವೇದಿಕೆ ಈ ಪ್ರತಿಭಾ ಕಾರಂಜಿಯ ಮುಖ್ಯ ಉದ್ದೇಶ. ಪ್ರಸ್ತುತ ದಿನಗಳಲ್ಲಿ ಎಲ್ಲಾ ಪ್ರತಿಭೆಗಳಿಗೆ ಪ್ರತ್ಯೇಕವಾದಂತಹ ಕ್ಷೇತ್ರಗಳಿವೆ ಆಯಾ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪೂರಕ ವಾತಾವರಣ ಬೆಳೆಸುವಲು, ನಾವು ಜೊತೆಗೂಡಿ. ಪ್ರತಿಭೆಗಳ ಪೋ?ಣೆ ಮಾಡುವ ಸಂಕಲ್ಪ ಮಾಡಬೇಕು. ಶೈಕ್ಷಣಿಕ ಸಾಧನೆಗೆ ಕೊಡುವ? ಪ್ರಾಮುಖ್ಯತೆಯನ್ನು, ವಿದ್ಯಾರ್ಥಿಗಳ ಪ್ರತಿಭಾ ಕಲೆಗಳಿಗೆ ನೀಡೋಣ ಎಂದು ತಿಳಿಸಿದರು.
ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಹಾದೇವಿ ಮರೇಗುದ್ದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು,
ಎಸ್ ಡಿ ಎಮ್ ಸಿ ಅಧ್ಯಕ್ಷ ಮಾಳಪ್ಪ ಮಂಟೂರ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಕೋರಿದರು, ತಾಲೂಕ ಕಸಾಪ ಅಧ್ಯಕ್ಷ ಆನಂದ ಪೂಜಾರಿ, ಸಿ ಆರ್ ಪಿ ಬಸವರಾಜ ಬಳ್ಳಾರಿ,
ಬಸವರಾಜ ಜಮಖಂಡಿ,ಪಿ ಎಮ್ ಹಲಗಿ,ಎ ಬಿ ಬಿಜಾಪೂರ, ಡಿ ಆರ್ ಖ್ಯಾಡಿ,ಆರ್ ಎ ಲಾಡಖಾನ,ಭಾಗ್ಯಶ್ರೀ ಒಡೆಯರ,ಪರಮಾನಂದ ಸುಣಗಾರ,ಗ್ರಾ. ಪಂ ಸದಸ್ಯ ಸುರೇಶ ಹುಂಡೇಕಾರ,ಮಲ್ಲಪ್ಪ ಬಿಸನಕೊಪ್ಪ,ಹಣಮಂತ ಕೌಜಲಗಿ ವೇದಿಕೆ ಮೇಲೆ ಉಪಸ್ಥರದ್ದರು.ಮುಖ್ಯ ಶಿಕ್ಷಕ
ನಾಗರಾಜ ಬಟಾಟೆಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು,ಶಿಕ್ಷಕ ಶ್ರೀನಿವಾಸ ಭಜಂತ್ರಿ ನಿರೂಪಿಸಿದರು,ಶಿಕ್ಷಕಿ ವಿಜಯಶ್ರೀ ಹೊಸಮನಿ ವಂದಿಸಿದರು. ವಿವಿಧ ಶಾಲೆಗಳ ಶಿಕ್ಷಕ,ಶಿಕ್ಷಕಿಯರು,ವಿದ್ಯಾರ್ಥಿಗಳು ಗ್ರಾಮದ ಪ್ರಮುಖರು, ವಿವಿಧ ಸಂಘಟನೆಗಳ ನಿರ್ದೇಶಕರು ಭಾಗವಹಿಸಿದ್ದರು.


