ಕಾರ್ಖಾನೆ ಮಾಲೀಕರ ವಿರುದ್ಧ ಕಿಡಿ ಕಾರಿದ ಪ್ರಮೋದ್ ಮುತಾಲಿಕ್ 

Pratibha Boi
ಕಾರ್ಖಾನೆ ಮಾಲೀಕರ ವಿರುದ್ಧ ಕಿಡಿ ಕಾರಿದ ಪ್ರಮೋದ್ ಮುತಾಲಿಕ್ 
WhatsApp Group Join Now
Telegram Group Join Now
ಗುರ್ಲಾಪುರ್  : ರೈತರು ಬೀದಿಯಲ್ಲಿ ಕುಂಡ್ರವಂತೆ ಮಾಡಿದ್ದು ಸರ್ಕಾರದ ಅಪರಾಧ, ರೈತರು ಇಡೀ ದೇಶಕ್ಕೆ ಅನ್ನ ನೀಡುವಂತಹ ಅನ್ನದಾತನನ್ನು ಹೋರಾಟ ಮಾಡುವಂತೆ ಮಾಡಿದ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ನನ್ನ ಧಿಕ್ಕಾರ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಗುರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ಏಳನೇ ದಿನದ ರೈತರ ಹೋರಾಟದ ವೇದಿಕೆಯಲ್ಲಿ ಮಾತನಾಡಿದವರು, ಕಬ್ಬಿಗೆ 3500 ರೂ, ನೀಡಬೇಕೆಂದು ರೈತರು ನಿರಂತರವಾಗಿ ಹಗಲು ರಾತ್ರಿ ಹೋರಾಟ ಮಾಡುತ್ತಿದ್ದಾರೆ ಆ ಹೋರಾಟಕ್ಕೆ ಶ್ರೀರಾಮ ಸೇನೆ ಬೆಂಬಲವನ್ನು ಸೂಚಿಸುತ್ತದೆ ಎಂದು ಹೇಳಿದರು.
ರಾಜಕಾರಣಿಗಳಿಗೆ ರೈತರ ಮತ ಬೇಕು ಆದರೆ ರೈತರ ಕಷ್ಟ ಬೇಡ್ವಾ ಎಂದು ರಾಜಕಾರಣಿಗಳ ವಿರುದ್ಧ ಹರಿಹಾಯ್ದರು, ರೈತರು ಸುಮ್ಮನೆ 3500 ರೂ, ದರ ನಿಗದಿ ಮಾಡಿ ಅಂತ ಹೇಳುತ್ತಿಲ್ಲ ಕಬ್ಬು ಬೆಳಗ್ಗೆ ಆಗುವ ಖರ್ಚಿನ ಲೆಕ್ಕಾಚಾರ ಹಾಕಿ ಅವರಿಗೆ ಆಗುತ್ತಿರುವ ಕಷ್ಟಗಳನ್ನು ಅರಿತು ಇವತ್ತು ಬೀದಿಗಿಳಿದು ಹೋರಾಟ ಮಾಡುವಂತಹ ಪರಿಸ್ಥಿತಿ ಉದ್ಭವವಾಗಿದ್ದು, ಹೋರಾಟಕ್ಕೂ ಕೂಡ ಮನೆಯದ ಕಾರ್ಖಾನೆ ಮಾಲೀಕರು ಮೀನಾವೇಶ ಹಾಕುತ್ತಿರುವುದರಿಂದ ಕಾರ್ಖಾನೆ ಮಾಲೀಕರ ವಿರುದ್ಧ ಕಿಡಿ ಕಾರಿದರು.
WhatsApp Group Join Now
Telegram Group Join Now
Share This Article