ಸಭೆ ಕರೆಯದಿದ್ದರೆ ಉಗ್ರ ಪ್ರತಿಭಟನೆ

Ravi Talawar
ಸಭೆ ಕರೆಯದಿದ್ದರೆ ಉಗ್ರ ಪ್ರತಿಭಟನೆ
WhatsApp Group Join Now
Telegram Group Join Now
ಬಳ್ಳಾರಿ: ನ.05ರಂದು ಡಿಸಿಎಂ   ಡಿ.ಕೆ.ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಬೇಸಿಗೆ ಬೆಳೆಯ ಕುರಿತು ತುಂಗಭದ್ರ ಜಲಾಶಯದ ನೀರಾವರಿ ಸಲಹ ಸಮಿತಿ ಸಭೆಯನ್ನು ಬೆಂಗಳೂರಿನ ವಿಧಾನಸೌದದಲ್ಲಿ ಕರೆಯಲಾಗಿತ್ತು. ಆದರೆ ನ.04ರಂದು ಮಧ್ಯಾಹ್ನ ಸಭೆಯನ್ನು ಮುಂದುಡಲಾಗಿದೆ. ಶೀಘ್ರವೇ ಸಭೆ ಕರೆಯುತ್ತೇವೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ ಎಂದು ತುಂಗಭದ್ರ ರೈತ ಸಂಘದ ಜಿಲ್ಲಾದ್ಯಕ್ಷ ಪುರುಷೋತ್ತಮಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೀಘ್ರವೇ ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆದು ಬೇಸಿಗೆ ಬೆಳೆಗೆ ನೀರು ಕೊಡುವ ತೀರ್ಮಾನ ಕೈಗೊಳ್ಳಬೇಕು. ತಡ ಮಾಡಿದರೆ ಸಿರಿಗೇರಿ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ, ತೆಕ್ಕಲಕೋಟೆ, ಸಿರುಗುಪ್ಪ, ಕುರುಗೋಡು, ಮೋಕಾ ಹಾಗೂ ಬಳ್ಳಾರಿಯಲ್ಲಿ ರೈತರಿಂದ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
WhatsApp Group Join Now
Telegram Group Join Now
Share This Article