ವಿಜಯನಗರ : ಜೆಎಸ್‌ಡಬ್ಲೂಫೌಂಡೇಶನ್ನ ಉಪಕ್ರಮವಾದ ಹಂಪಿ ಆರ್ಟ್ ಲ್ಯಾಬ್ಸ್ “ಬ್ಲೂ ಫ್ಯೂಚರ್ಸ್: ರೀ ಇಮ್ಯಾಜಿನಿಂಗ್ ಇಂಡಿಗೋ” ಎಂಬ ಪ್ರದರ್ಶನದ ಮೂಲಕ ಜೀವಂತಗೊAಡಿದೆ. ಇದು ಸಂಸ್ಥೆಯ ಮೊದಲ ಸ್ವಗೃಹ ಪ್ರದರ್ಶನವಾಗಿದ್ದು, ಕೌಶಲ್ಯ, ಕಲ್ಪನೆ ಮತ್ತು ಪರಿಸರದಗಡಿ ಮೀರುವ ಕೃತಿಗಳನ್ನು ರಚಿಸಿರುವ ಭಾರತದ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರನ್ನು ಒಂದೇ ವೇದಿಕೆಗೆ ತರುತ್ತದೆ.
ಜೆಎಸ್‌ಡಬ್ಲೂ ಫೌಂಡೇಶನ್ನ ಅಧ್ಯಕ್ಷೆ ಸಂಗೀತಾಜಿAದಾಲ್ ಅವರ ಕಲ್ಪನೆಯಿಂದರೂಪುಗೊAಡ ಈ ಪ್ರದರ್ಶನವು, ಪ್ರಾಚೀನ ಬಣ್ಣ ಹಾಕುವ ಸಂಪ್ರದಾಯಗಳಿAದ ಕುಡಿದ್ದು ಕಲೆ, ವಿನ್ಯಾಸ ಮತ್ತು ಸುಸ್ಥಿರತೆಯಲ್ಲಿ ಸಮಕಾಲೀನ ಜಾಗತಿಕ ಅಭಿವ್ಯಕ್ತಿಗಳವರೆಗಿನ ಇಂಡಿಗೋದಕಲಾತ್ಮಕ, ಐತಿಹಾಸಿಕ ಮತ್ತು ಪರಿಸರ ಆಯಾಮಗಳನ್ನು ಪರಿಶೋಧಿಸುತ್ತದೆ.
ಈ ಪ್ರದರ್ಶನದಲ್ಲಿ ಭಾಗವಹಿಸಿರುವ ಕಲಾವಿದರಲ್ಲಿ—ದೈನಂದಿನವಸ್ತುಗಳನ್ನುಶಿಲ್ಪಕಲೆಯಾಗಿ ರೂಪಾಂತರಿಸುವುದರಲ್ಲಿಖ್ಯಾತಿಪಡೆದಿರುವಮುAಬೈನ ಶಿಲ್ಪಿ ಮನೀಶ ನೈ; ಪ್ಯಾರಿಸ್ ಮತ್ತು ಮಾಲಿ ಮೂಲದಜೀವಸಹಜ ಬಣ್ಣಿಸುವ ವಿಧಾನಗಳಿಗೆ ಪ್ರಸಿದ್ಧರಾದ ಇಂಡಿಗೋ ಮಾಸ್ಟರ್‌ಅಬೂಬಕರ್ ಫೋಫಾನಾ; ಪಾರಂಪರಿಕಇAಡಿಗೋ ಕೃಷಿ ಮತ್ತು ಬಣ್ಣಿಸುವ ಕಲೆಗಳನ್ನು ಪುನರುಜ್ಜೀವನಗೊಳಿಸುತ್ತಿರುವ ಜಪಾನ್ನ ಪ್ರಸಿದ್ಧ ಸಮೂಹ ಸ್ಟುಡಿಯೋ ಬುಐಯ್ಸೊ; ಹಾಗೂ ವಸ್ತುಗಳ ಪರಿವರ್ತನೆ ಮತ್ತುಗ್ರಹಿಕೆಯಕುರಿತು ಪ್ರಯೋಗಾತ್ಮಕ ಶೈಲಿಯಲ್ಲಿ ಕೆಲಸ ಮಾಡುವಅಳ್ವಾರ್ ಬಾಲಸುಬ್ರಹ್ಮಣ್ಯಂ ಸೇರಿದ್ದಾರೆ.
ಪ್ರದರ್ಶನವನ್ನು ಉದ್ಘಾಟಿಸುತ್ತಾ, ಜೆಎಸ್‌ಡಬ್ಲೂ ಫೌಂಡೇಶನ್ನ ಅಧ್ಯಕ್ಷೆ ಸಂಗೀತಾಜಿAದಾಲ್ ಮಾತನಾಡುತ್ತಾ, “ಬ್ಲೂ ಫ್ಯೂಚರ್ಸ್ ಹಂಪಿ ಆರ್ಟ್ ಲ್ಯಾಬ್ಸ್ನದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ – ಸಂಪ್ರದಾಯ ಮತ್ತು ನಾವೀನ್ಯತೆಗಳ ನಡುವೆ ಹೊಸ ಸಂಭಾಷಣೆಗಳನ್ನು ಪೋಷಿಸುವುದು. ಭಾರತದ ಮಣ್ಣು ಮತ್ತು ಕಥೆಗಳಿಂದ ಹುಟ್ಟಿದ ಬಣ್ಣವಾದಇಂಡಿಗೊ ಸುಸ್ಥಿರತೆ, ಸೃಜನಶೀಲತೆ ಮತ್ತುಜಾಗತಿಕ ಸಂವಾದದ ಸಂಕೇತವಾಗುತ್ತದೆ. ಈ ಪ್ರದರ್ಶನದೊಂದಿಗೆ, ಕಲೆ ಸಮುದಾಯಗಳನ್ನು ಸಂಪರ್ಕಿಸುವ, ಬದಲಾವಣೆಗೆ ಪ್ರೇರಣೆ ನೀಡುವ ಮತ್ತು ಹೆಚ್ಚು ಕಾಲ್ಪನಿಕ ಭವಿಷ್ಯವನ್ನುರೂಪಿಸುವ ಶಕ್ತಿಯನ್ನು ಹೊಂದಿದೆ ಎಂಬ ಜೆಎಸ್ಡಬ್ಲ್ಯೂ ಫೌಂಡೇಶನ್ನ ನಂಬಿಕೆಯನ್ನು ನಾವು ಪುನರುಚ್ಚರಿಸುತ್ತೇವೆ” ಎಂದು ಹೇಳಿದರು.
“ಸಂದರ್ಶಕರುಇAಡಿಗೋವನ್ನು ಕೇವಲ ಸ್ಥಿರ ಕಲಾಕೃತಿಯಾಗಿಅಲ್ಲ, ಜೀವಂತ, ವಿಕಸನಗೊಳ್ಳುತ್ತಿರುವ ಕಥೆಯಾಗಿಅನುಭವಿಸುವ ಸ್ಥಳವನ್ನು ಸೃಷ್ಟಿಸುವುದು ನಮ್ಮಉದ್ದೇಶವಾಗಿತ್ತು” ಎಂದು ಪ್ರದರ್ಶನವನ್ನು ಆಯೋಜಿಸಿದ ಹಂಪಿ ಆರ್ಟ್ ಲ್ಯಾಬ್ಸ್ನ ರೆಸಿಡೆನ್ಸಿ ನಿರ್ದೇಶಕಿ ಶ್ರೀಮತಿ ಮೀರಾಕುರಮ್ ಹೇಳಿದರು. ಪ್ರಯೋಗಾಲಯಗಳು, ಸ್ಥಾಪನೆಗಳು ಮತ್ತು ಸಂವೇದನಾ ಪರಿಸರಗಳ ಮೂಲಕ, ಭೂಮಿ ಮತ್ತು ಶ್ರಮದಿಂದಕಲಾತ್ಮಕಅಭಿವ್ಯಕ್ತಿಗೆಇAಡಿಗೋದ ಪ್ರಯಾಣವನ್ನು ವೀಕ್ಷಿಸಲು ನಾವು ಪ್ರೇಕ್ಷಕರನ್ನುಆಹ್ವಾನಿಸುತ್ತೇವೆ. ಪ್ರದರ್ಶನವು ಈ ಅಸಾಧಾರಣ ಬಣ್ಣದ ಪ್ರಾಚೀನ ಬೇರುಗಳು ಮತ್ತು ಸಮಕಾಲೀನ ಪ್ರಸ್ತುತತೆಎರಡರಿಂದಲೂ ಸಂದರ್ಶಕರನ್ನು ಪ್ರೇರೇಪಿಸುತ್ತದೆಎಂಬುದು ನನ್ನಆಶಯ.” ಎಂದರು.


