ಭಾರತ್  ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಜಮಖಂಡಿ ವತಿಯಿಂದ ಗೀತ ಗಾಯನ ಸ್ಪರ್ಧೆ

Pratibha Boi
ಭಾರತ್  ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಜಮಖಂಡಿ ವತಿಯಿಂದ ಗೀತ ಗಾಯನ ಸ್ಪರ್ಧೆ
WhatsApp Group Join Now
Telegram Group Join Now
ಜಮಖಂಡಿ ;ವತಿಯಿಂದ ಜಮಖಂಡಿ ಮತ್ತು ರಬಕವಿ -ಬನಹಟ್ಟಿ ತಾಲೂಕುಗಳ ವ್ಯಾಪ್ತಿಯ ಕಬ್ಸ್ ಮತ್ತು ಬುಲ್ ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋವರ್ ಮತ್ತು ರೇಂಜರ್ ವಿದ್ಯಾರ್ಥಿಗಳಿಗೆ 2025- 26 ನೇ ಸಾಲಿನ ತಾಲೂಕಾ ಮಟ್ಟದ ಗೀತ ಗಾಯನ ಸ್ಪರ್ಧೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಜಮಖಂಡಿ ವತಿಯಿಂದ    ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
 ಗೀತ ಗಾಯನ ಸ್ಪರ್ಧೆಯ ಆಯೋಜಕರಾದ ಭಾರತ ಸ್ಕೌಟ್ಸ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ಜಮಖಂಡಿಯ ಕಾರ್ಯದರ್ಶಿಯವರಾದ ಶ್ರೀ ಮಹಾವೀರ ಜಮಖಂಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪರ್ಧೆಯ ಉದ್ದೇಶ ಮತ್ತು ನಿಯಮಗಳ ಕುರಿತು ತಿಳಿಸಿದರು.
 ಗೀತ ಗಾಯನ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ  ಉದ್ಘಾಟನೆಯನ್ನು ನೆರವೇರಿಸಿದ ಜಮಖಂಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎ ಕೆ ಬಸಣ್ಣವರ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಪ್ರತಿಫಲವಾಗಿ ಜೀವನದಲ್ಲಿ ಶಿಸ್ತು, ಧೈರ್ಯ ಹಾಗೂ ನಾಯಕತ್ವ ಗುಣಗಳು ಬೆಳವಣಿಗೆಯಾಗಿ  ಮುಂದೆ ದೇಶಕ್ಕೆ ಒಳ್ಳೆಯ ಪ್ರಜೆಗಳಾಗುತ್ತೀರಿ ಎಂದು ತಿಳಿಸುತ್ತಾ ತಾಲೂಕಿನ ಎಲ್ಲ ಶಾಲೆಗಳಲ್ಲಿ ಸ್ಕೌಟ್ ಮತ್ತು ಗೈಡ್ಸ್ ಘಟಕಗಳನ್ನು ಸ್ಥಾಪಿಸಿ  ತರಬೇತಿ ಹೊಂದಿದ ಶಿಕ್ಷಕರು ನಿಯಮಿತವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕೈಜೋಡಿಸಬೇಕೆಂದು ಸೂಚಿಸಿದರು.
 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಪಿ ಎಸ್ ನಂದೇಶ ದೈಹಿಕ ಶಿಕ್ಷಣ ಪರಿವೀಕ್ಷಕರು ಹಾಗೂ ಶ್ರೀ ಸುರೇಶ ಬೋಸಲೆ ಅಧ್ಯಕ್ಷರು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರು ಸಂಘ ಜಮಖಂಡಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಎಸ್ ಬಿ ಬೆಳ್ಳಿಕಟ್ಟಿ ಸ್ವಾಗತಿಸಿದರು ಶ್ರೀ ಎಸ್ ಎಸ್ ಕುಂಬಾರ್ ನಿರೂಪಿಸಿದರು ಮತ್ತು ಕೆ ಎಲ್ ಮಾಳಿರವರು ವಂದಿಸಿದರು.
WhatsApp Group Join Now
Telegram Group Join Now
Share This Article