ಕಾಗವಾಡ: ತಾಲ್ಲೂಕಿನ ಮೋಳೆ ಗ್ರಾಮದಲ್ಲಿ ಪ್ರತಿ ಟನ್ ಕಬ್ಬಿಗೆ 3500 ದರ ಘೋಷಣೆ ಮಾಡುವಂತೆ ಒತ್ತಾಯಿಸಿ ರೈತರು ಉಗಾರ-ಅಥಣಿ ಮುಖ್ಯ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡ ಭರತೇಶ ಪಡನಾಡ ಬೆಳಗಾವಿ ಜಿಲ್ಲೆಯಲ್ಲಿ 30 ಸಕ್ಕರೆ ಕಾರ್ಖಾನೆಗಳು ಇದ್ದು ಅದರಲ್ಲಿ ಎಲ್ಲ ಕಾರ್ಖಾನೆಗಳು ರಾಜಕೀಯ ಪಕ್ಷದ ನಾಯಕರ ಒಡೆತನದಲ್ಲಿ ಇವೆ ಕಳೆದ ಆರು ದಿನಗಳಿಂದ ಗುರ್ಲಾಪೂರ ಕ್ರಾಸನಲ್ಲಿ ರೈತರು ರಸ್ತೆ ಮೇಲೆ ಅಹೋ ರಾತ್ರಿ ಪ್ರತಿಭಟನೆ ಮಾಡುತ್ತಿದ್ದಾರೆ ಅಲ್ಲಿಗೆ ಒಬ್ಬ ಆಡಳಿತ ಪಕ್ಷದ ಶಾಸಕ ಸಚಿವ ಬಂದು ಸಮಸ್ಯೆ ಆಲಿಸುತ್ತಿಲ್ಲಾ ರೈತರು ಕಷ್ಟ ಪಟ್ಟು ಕಬ್ಬು ಬೆಳೆದು ಕಾರ್ಖಾನೆಗಳಿಗೆ ಕಳುಹಿಸಿದರು ಒಂದು ದ್ವಿಚಕ್ರ ವಾಹನ ತಗೆದುಕೊಳ್ಳಲು ಆಗುವುದಿಲ್ಲಾ ಅದೆ ಸಕ್ಕರೆ ಕಾರ್ಖಾನೆ ಮಾಲೀಕರು ಒಂದು ಕಾರ್ಖಾನೆಯಿಂದ ಇಂದು ಐದು ಕಾರ್ಖಾನೆ ಮಾಡಿದ್ದಾರೆ ಇದು ರೈತರನ್ನು ಒಡೆದು ಆಳು ಮಾರ್ಗವಾಗಿದೆ ಇದನ್ನು ರೈತರು ಅರ್ಥಮಾಡಿಕೊಂಡು ಒಗ್ಗಟ್ಟಿನಿಂದ ಕಬ್ಬು ಕಟಾವು ಮಾಡದೆ ತಾಳ್ಮೆಯಿಂದ ಇರಬೇಕು ಮತ್ತು ಪ್ರತಿ ಟನ್ ಗೆ 3500 ದರ ನೀಡುವವರಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲಾ ಎಂದು ಎಚ್ಚರಿಕೆ ನೀಡಿದರು.
ರೈತ ಪೋಪಟ್ ಬಣಜೋಡ ಮಾತನಾಡಿ ಇಲ್ಲಿನ ಮಾಜಿ ಶಾಸಕರು ಹಾಗೂ ಹಾಲಿ ಶಾಸಕರಿಗೆ ಯಾರು ಕೂಡಾ ರೈತ ನಾಯಕ ಅನ್ನಿಸಿಕೊಳ್ಳಲು ಅರ್ಹರಲ್ಲಾ ಇವರು ಪ್ರತಿಯೊಂದು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಮಯ ಇರುತ್ತದೆ ಆದರೆ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡುವಂತೆ ರಸ್ತೆಗೆ ಇಳಿದರು ಯಾವ ಒಬ್ಬ ರಾಜಕೀಯ ನಾಯಕರು ಸ್ಥಳಕ್ಕೆ ಬರುವುದಿಲ್ಲಾ ಇಂತಹ ನಾಯಕರಿಗೆ ನಾವು ರೈತ ನಾಯಕ ಎಂದು ಕರೆಯಲಾಗುತ್ತದೆ ಇದು ದುರಂತ ನಮ್ಮ ಬೇಡಿಕೆ ಈಡೇರಿಕೆಗೆ ಆಗುವವರಗೆ ನಾವು ನಮ್ಮ ಪ್ರತಿಭಟನೆ ಹಿಂದೆ ಸರಿಯುವುದಿಲ್ಲಾ ಎಂದು ಹೇಳಿದರು.
ಬಾಹುಬಲಿ ಟೋಪಗಿ ಮಾತನಾಡಿ ರೈತರು ತಮ್ಮ ಕಬ್ಬುಗಳನ್ನು ಕಟಾವು ಮಾಡದೆ ಎಲ್ಲರೂ ಹೋರಾಟದಲ್ಲಿ ಭಾಗವಹಿಸಬೇಕು ನಾಳೆ ಬೆಳಿಗ್ಗೆ ಸುತ್ತಮುತ್ತಲಿನ ಗ್ರಾಮಗಳ ರೈತರು ಬೆಲೆ ನಿಗದಿ ಪಡಿಸುವಂತೆ ಒತ್ತಾಯಿಸಿ ಜೇವರ್ಗಿ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ಬಂದ ಮಾಡಿ ಪ್ರತಿಭಟನೆ ಮಾಡಲಾಗುವುದು ಎಲ್ಲ ರೈತರು ನಾಳೆ ಮಂಗಸೂಳಿ ಗ್ರಾಮಕ್ಕೆ ಬರುವಂತೆ ಕರೆ ನೀಡಿದರು. ಪ್ರತಿಭಟನೆಯಲ್ಲಿ ಮಹಾದೇವ ತುಗಶೆಟ್ಟಿ,ರವಿ ಬಣಜೋಡ,ಮಾಯಪ್ಪ ಮುಂಜೆ,ಸಿದ್ದು ಹವಳೆ,ಗಣಪತಿ ಬಣಜೋಡ ಮತನಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ವರ್ತಕರು ಸ್ವಯಂ ಘೋಷಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿ ಬೆಂಬಲ ಸೂಚಿಸಿದರು.
ಈ ವೇಳೆ ರೈತ ಮುಖಂಡರಾದ ಸಿದ್ದಪ್ಪ ಕನಾಳೆ,ಅಶೋಕ ಹುಗ್ಗಿ,ಹಣಮಂತ,ಸಿದ್ದು ಹವಳೆ,ದುಂಡಪ್ಪ ತುಗಶೆಟ್ಟಿ,ಮಾಯಪ್ಪ ಮುಂಜೆ,ಗಣಪತಿ ಬಣಜೋಡ,ರವಿ ಬಣಜೋಡ,ಶ್ರೀಶೈಲ ಜಂಗಲಗಿ,ವಿಠ್ಠಲ ಕೋಳೆಕರ,ಆದಿನಾಥ ಯಂರಡೋಲಿ,ರಾಜು ಚೋರಮೂಲೆ,ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.


