ಉಗ್ರ ಪ್ರತಾಪ ತಾಳುತ್ತಿರುವ ರೈತ ಪ್ರತಿಭಟನೆ: ಕಾರ್ಖಾನೆ ಮಾಲೀಕರಿಗೆ ಅನ್ನದಾತನ ಕೊನೆಯ ಎಚ್ಚರಿಕೆ

Ravi Talawar
ಉಗ್ರ ಪ್ರತಾಪ ತಾಳುತ್ತಿರುವ ರೈತ ಪ್ರತಿಭಟನೆ: ಕಾರ್ಖಾನೆ ಮಾಲೀಕರಿಗೆ ಅನ್ನದಾತನ ಕೊನೆಯ ಎಚ್ಚರಿಕೆ
WhatsApp Group Join Now
Telegram Group Join Now
ಗುರ್ಲಾಪೂರ(03):-ಕಾರ್ಖಾನೆ ಮಾಲೀಕರಿಗೆ ವೇದಿಕೆ ಮೂಲಕ  ಕೊನೆಯ ಎಚ್ಚರಿಕೆ ಅನ್ನದಾತನ ಐದನೇ ದಿನದ ಪ್ರತಿಭಟನೆ ಇಂದು ಕಬ್ಬಿನ ದರ ನಿಗದಿ ಆಗಲೇಬೇಕು ‌. ನಿಮ್ಮ ಮನೆ ಮುಂದೆ ರೈತರ ಬಂದು ಹಲಗೆ ಮುಖಾಂತರ ಎಚ್ಚರಿಸಬೇಕಾಗುತ್ತದೆ. ಪ್ರಭಾಕರ್ ಕೋರೆಯವರೇ ನಿಮ್ಮ ಒಡೆತನದಲ್ಲಿ ಮೂರು ಕಾರ್ಖಾನೆಗಳು ಇರುತ್ತವೆ. ಕಾರ್ಖಾನೆ ಮಾಲೀಕರ ದಿಕ್ಕು ತಪ್ಪಿಸುವ ಪ್ರಯತ್ನ ನೀವು ಮಾಡುತ್ತಿದ್ದೀರಿ. ಇದೇ ರೀತಿ ನೀವು ಮುಂದುವರೆದರೆ ನಿಮ್ಮ ಮನೆ ಮುತ್ತಿಗೆ ಹಾಕಬೇಕಾಗುತ್ತದೆ. ಜನಪ್ರತಿನಿಧಿಗಳೇ ಕಿವಿ ಇದ್ದು ಇಲ್ಲದಂಗೆ ನಾಟಕವಾಡಬೇಡಿ ನಿಮ್ಮ ಬಂಡವಾಳ ಜನಕ್ಕೆ ಗೊತ್ತಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಚುನಪ್ಪ ಪೂಜೇರಿ ಹೇಳಿದರು.
            ಅವರು ಸೋಮವಾರ ಗುರ್ಲಾಪೂರ ಕ್ರಾಸ್ ನಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ 5ನೇ ದಿನದ ಪ್ರತಿಭಟನೆಯಲ್ಲಿ ಮಾತನಾಡುತ್ತಾ ನಿನ್ನೆ ನಾವು ಜಿಲ್ಲಾಧಿಕಾರಿಗಳಿಗೆ ಗೌರವ ಕೊಟ್ಟು ನಮ್ಮ ಬೇಡಿಕೆಯ 3500ರೂ ರಲ್ಲಿ 100ರೂ ಕಡಿಮೆ ಮಾಡಿದ್ದೇವೆ. ತಕ್ಷಣದಿಂದ ದರ ಘೋಷಣೆ ಮಾಡಿ ಲಕ್ಷ್ಮಿ ಹೆಬ್ಬಾಳ್ಕರ್, ಕತ್ತಿ, ಜಾರಕಿಹೊಳಿ, ನಿರಾಣಿ, ಗುಡಗುಂಟಿಮಠಯವರೆ ಮೊಂಡೂತನ ಪ್ರದರ್ಶನ ಮಾಡಬೇಡಿ, ನಮ್ಮ ವೇದಿಕೆಗೆ ಬನ್ನಿ ದರ ಘೋಷಣೆ ಮಾಡಿ.
              ಪ್ರತಿಭಟನೆಯ ನೇತೃತ್ವ ವಹಿಸಿರುವ ಪ.ಪೂ. ಸಂತ  ಶಶಿಕಾಂತ್  ಗುರೂಜಿ ಮಾತನಾಡಿ ಕಾರ್ಖಾನೆ ಮಾಲೀಕರೆ ನನ್ನನ್ನು ಗುರಿಯಾಗಿ ಸಬೇಡಿ, ನಾನೊಬ್ಬ ಸನ್ಯಾಸಿ , ನನಗೆ ಆಸೆ ಆಮೀಷ ಯಾವುದು ಇಲ್ಲ ರೈತರ ಉದ್ಧಾರವೇ ನನ್ನ ಗುರಿ ಗುರ್ಲಾಪೂರದಲ್ಲಿ ಹತ್ತಿರುವ ರೈತ ಪ್ರತಿಭಟನೆಯ ಬೆಂಕಿ ರಾಜಕೀಯ ವ್ಯಕ್ತಿಗಳ ಅವನತಿಗೆ ಇಲ್ಲಿಂದಲೇ ಇಲ್ಲಿಂದಲೇ ಪ್ರಾರಂಭವಾಗುತ್ತಿದೆ. ಸಕ್ಕರೆ ಸಚಿವರೆ ನೀವು ತಕ್ಷಣದಿಂದ ಬರದಿದ್ದರೆ ನಾಳೆ ವಿಜಯಪುರ ಜಿಲ್ಲೆಗೆ ಬಂದ್ ಕರೆ ಕೊಡುತ್ತೇವೆ. ನೀವು ಮನೆಯಿಂದ ಹೊರಬರುವುದು ಕಠಿಣವಾಗುತ್ತದೆ.
         ಜಿಲ್ಲಾ ಉಸ್ತುವಾರಿ ಸಚಿವರೇ ಬುದ್ಧ ಬಸವ ಅಂಬೇಡ್ಕರ್ ತತ್ವ ಸಿದ್ಧಾಂತ ಹೇಳುತ್ತೀರಿ ಅವರು ನೊಂದವರ ಬಾಳಿಗೆ ಬೆಳಕಾಗಿ ಅವರ ನೋವಿಗೆ ನೆರವಾಗಿ ಲೋಕಕಲ್ಯಾಣ ಮಾಡಿದ್ದಾರೆ, ನೀವು ಏನು ಮಾಡುತ್ತಿದ್ದೀರಿ.? ರೈತ ಐದು ದಿನದಿಂದ ರಸ್ತೆಯಲ್ಲಿ ಬೆಂದು ಹೋಗುತ್ತಿದ್ದಾನೆ ಈಗಲಾದರೂ ಎಚ್ಚೆತ್ತುಕೊಳ್ಳಿ ಬನ್ನಿ ನಮ್ಮೊಂದಿಗೆ ಮಾತನಾಡಿ ಕಬ್ಬು ದರ ಘೋಷಣೆ ಮಾಡಿ ಎಂದು ಹೇಳಿದರು.
       ಮಾಜಿ ಮುಖ್ಯಮಂತ್ರಿಗಳು ಬೆಳಗಾವಿ ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ ರೈತರನ್ನು ಎದುರು ಹಾಕಿಕೊಂಡು ಯಾವ ಸರ್ಕಾರಗಳು ಉಳಿದಿಲ್ಲ ಕರ್ನಾಟಕ ಇಡೀ ರಾಜ್ಯದಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ, ಗುರ್ಲಾಪೂರ ಕ್ರಾಸ್ ದಲ್ಲಿ ರೈತ ಜಾತ್ರೆ ನಡೆಯುತ್ತಿದೆ ನಿಮ್ಮ ಹೋರಾಟ ಒಂದು ಶಕ್ತಿಯಾಗಿ ಹೊರಹೊಮ್ಮುತ್ತಿದೆ, ಇಂತಹ ಸುದ್ದಿಯನ್ನು ಪ್ರಿಂಟ್ ಮೀಡಿಯಾ ಯೂಟ್ಯೂಬ್ ನಲ್ಲಿ ಮಾತ್ರ ನೋಡುತ್ತಿದ್ದೇವೆ. ದೊಡ್ಡ ದೊಡ್ಡ ಟಿವಿ ಮಾಧ್ಯಮದವರು ಕೊಳಕು ಸುದ್ದಿಗಳನ್ನು ಪ್ರಕಟಿಸುತ್ತಿರುವಲ್ಲಿ ಮಗ್ನರಾಗಿದ್ದಾರೆ. ಈ ಆಂದೋಲನ ಅವರಿಗೆ ಕಾಣಿಸುತ್ತಿಲ್ಲ.
               ನಾನು ಮುಖ್ಯಮಂತ್ರಿ ಹಾಗೂ ಸಕ್ಕರೆ ಸಚಿವನಿದ್ದಾಗ ರೈತರನ್ನು ಹಾಗೂ ಕಾರ್ಖಾನೆ ಮಾಲೀಕರನ್ನು ಕರೆದು ಮೀಟಿಂಗ್ ಮಾಡಿ ಅವರ ಸಮಸ್ಯೆ ಹಾಗೂ ದರ ನಿರ್ಧರಿಸಿದ್ದೇನೆ. ರೈತನ ಬೇಡಿಕೆ 3500ರೂ ಯೋಗ್ಯ ಬೇಡಿಕೆ ಅವರು ಕೊಡಲೇಬೇಕು ಸಂಬಂಧಪಟ್ಟ ಎಲ್ಲರ ಜೊತೆ ಈಗ ನಾನು ನಿಮ್ಮ ಜೊತೆ ಇದ್ದು ಮಾತನಾಡುತ್ತೇನೆ. ರೈತರ ಸಮಸ್ಯೆ ಏನೇ ಇದ್ದರೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಜೊತೆ ಮಾತನಾಡಿ ಧ್ವನಿ ಎತ್ತುತ್ತೇನೆ ಎಂದು ಹೇಳಿದರು.
     ಅಥಣಿಯ ಮಾಜಿ ಶಾಸಕರಾದ ಮಹೇಶ್ ಕುಮಟಳ್ಳಿ  ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿ ಮಾತನಾಡುತ್ತಾ ನಾನು ಇಲ್ಲಿ ಮಾಜಿ ಶಾಸಕನಾಗಿ ಬಂದಿಲ್ಲ ರೈತರ ಮಗನಾಗಿ ಬಂದಿದ್ದೇನೆ ರೈತರ ನೋವು ಕಷ್ಟ ನನಗೆ ಚೆನ್ನಾಗಿ ಗೊತ್ತು ಆದ್ದರಿಂದ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ವಿನಂತಿ ಏನೆಂದರೆ ತಕ್ಷಣದಿಂದಲೇ ರೈತರ

ಬೇಡಿಕೆ ಒಂದು ಟನ್ ಕಬ್ಬಿಗೆ 3500ರೂ ಕೊಡಲೇಬೇಕು. ರೈತರ ತಾಳ್ಮೆ ಪರೀಕ್ಷಿಸಬೇಡಿ ಎಂದರು.
            ಚಿತ್ತಾಪುರದ ವೀರೇಶ  ಸಾಹುಕಾರ್ ಮಾತನಾಡಿ ಕಲ್ಬುರ್ಗಿ ರಾಯಚೂರು ಭಾಗದಿಂದ 300 ರೈತರೊಂದಿಗೆ ಹೋರಾಟಕ್ಕೆ ಬೆಂಬಲ ಕೊಡಲು ಬಂದಿದ್ದೇನೆ. ವಿಧಾನಸೌಧದ ಚಿತ್ತ ಈಗ ಗುರ್ಲಾಪೂರ ಕ್ರಾಸ್ ಮೇಲೆ ಕೇಂದ್ರೀತವಾಗಿದೆ. ಸಂಬಂಧಪಟ್ಟವರು ಮೊಂಡುತನ ಮಾಡದೆ ರೈತರ 3500ರೂ ಘೋಷಣೆ ಮಾಡಲೇಬೇಕು.
               ಜಗದೀಶ್ ಶೆಟ್ಟರ್ ಅವರ ಭಾಷಣ ಮುಗಿಯುತ್ತಿದ್ದಂತೆ ಸರಿಯಾಗಿ 03 ಗಂಟೆ 40
 ನಿಮಿಷಕ್ಕೆ ಒಬ್ಬ ರೈತ ವಿಷ ಕುಡಿದ ಘಟನೆ ನಡೆಯಿತು. ತಕ್ಷಣದಿಂದ ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾಣಿಸಲಾಯಿತು.
          ನಮಗೆ ಕಬ್ಬಿನ ಯೋಗ್ಯ ಬೆಲೆ ಸಿಕ್ಕೆ ಸಿಗುತ್ತದೆ ಇಂತಹ ಅಹಿತಕರ ಘಟನೆಗಳನ್ನು ಯಾರು ಮಾಡಬೇಡಿರಿ. ನಿಮ್ಮಲ್ಲಿ ವಿನಂತಿಯಿಂದ ಬೇಡಿಕೊಳ್ಳುತ್ತಿದ್ದೇನೆ- ಚೂನಪ್ಪ ಪೂಜಾರಿ.
WhatsApp Group Join Now
Telegram Group Join Now
Share This Article