ಬೆಂಗಳೂರು,ಏ.06: ಕೇಂದ್ರ ಕುಟುಂಬ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರು I.N.D.I.A ಬ್ಲಾಕ್ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ದಕ್ಷಿಣ ಭಾರತದ ಕೆಲ ಭಾಗಗಳಲ್ಲಿ ನಡೆಯುತ್ತಿರುವ ರ್ಯಾಲಿಗಳಲ್ಲಿ ಸ್ಮೃತಿ ಇರಾನಿ ಭಾಗವಹಿಸುತ್ತಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸಿದ ಸ್ಮೃತಿ ಇರಾನಿ ನಗರದಲ್ಲಿ ಶುಕ್ರವಾರ ಉದ್ಯಮಿಗಳ ಜತೆ ಸಂವಾದ ಸಭೆಯಲ್ಲಿ ಮಾತನಾಡಿದರು. ಈ ವೇಳೆ I.N.D.I.A ಬ್ಲಾಕ್ ಬಗ್ಗೆ ವ್ಯಂಗ್ಯವಾಡಿದ ಅವರು ದೆಹಲಿಯಲ್ಲಿ ತಬ್ಬಿಕೊಳ್ಳುತ್ತಿದ್ದಾರೆ, ಕೇರಳದಲ್ಲಿ ಭಿಕ್ಷೆ ಬೇಡತ್ತಾರೆ ಮತ್ತು ಕರ್ನಾಟಕದಲ್ಲಿ ದಬ್ಬಾಳಿಕೆ ದರೋಡೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ವಯನಾಡಿನಲ್ಲಿ (ಕಾಂಗ್ರೆಸ್ ನಾಯಕ) ರಾಹುಲ್ ಗಾಂಧಿ ಇತ್ತೀಚಿನ ನಾಮ ಪತ್ರ ಸಲ್ಲಿಸುವ ವೇಳೆ ಕೆಲವು ಸಮಸ್ಯೆಗಳು ಎಂದುರಾಗಿವೆ. ರಾಹುಲ್ ಗಾಂಧಿ ದಕ್ಷಿಣ ಭಾರತದಿಂದ ಸ್ಪರ್ಧಿಸುತ್ತಿರುವುದಕ್ಕೆ ಎಡಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಉತ್ತರ ಪ್ರದೇಶದಿಂದ ಏಕೆ ಸ್ಪರ್ಧಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಆದರೆ, ಅದೇ ಎಡಪಕ್ಷದ ಸದಸ್ಯರು ದೆಹಲಿಗೆ ಹೋದಾಗ ಅವರನ್ನು ತಬ್ಬಿಕೊಳ್ಳುತ್ತಿರುವುದು ಕಂಡುಬರುತ್ತದೆ. ಈಗ ದೆಹಲಿಯಲ್ಲಿ ಅಪ್ಪಿಕೊಳ್ಳುವುದು, ಕೇರಳದಲ್ಲಿ ಭಿಕ್ಷೆ ಬೇಡುವುದು, ಕರ್ನಾಟಕದಲ್ಲಿ ದದಬ್ಬಾಳಿಕೆ ನಡೆಸುತ್ತಿದ್ದಾರೆ ಇದನ್ನೆಲ್ಲ ಪ್ರೋತ್ಸಾಹಿಸಬಾರದು ಮತ್ತು ಮತದಾರರು ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಸಚಿವರು ನಗರದಲ್ಲಿ ವಿದ್ಯಾರ್ಥಿಗಳು, ಮಾಧ್ಯಮ ಪ್ರತಿನಿಧಿಗಳು ಮತ್ತು ನಾಗರಿಕ ಕಾರ್ಯಕರ್ತರ ಗುಂಪುಗಳೊಂದಿಗೆ ಹಲವಾರು ಸಂವಾದಗಳನ್ನು ಯೋಜಿಸಲಾಗಿತ್ತು, ಉದ್ಯಮಿಗಳೊಂದಿಗಿನ ಸಂವಾದ ಮಾತ್ರ ಕಾರ್ಯರೂಪಕ್ಕೆ ಬಂದಿತು. ಚುನಾವಣಾಧಿಕಾರಿಗಳು ಕೆಲವು ಅನುಮತಿ ನೀಡದ ಕಾರಣ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಅವರ ತಂಡದ ಸದಸ್ಯರು ಹೇಳಿದರು.
ಸಂಜೆ ನಡೆದ ಸಭೆಯಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರು ಗಂಭೀರ ರಾಜಕೀಯ ವಿಷಯಗಳತ್ತ ಗಮನ ಹರಿಸಬೇಕು ಮತ್ತು ದೈನಂದಿನ ಧಾರಾವಾಹಿ ನೋಡುವುದನ್ನು ಬಿಟ್ಟು ಗಂಭೀರ ವಿಷಯಗಳತ್ತ ಗಮನಹರಿಸಬೇಕು ಎಂದು ನಾನು ವಿನಂತಿಸುತ್ತೇನೆ. ದೈನಂದಿನ ಧಾರಾವಾಹಿ ವಾಸ್ತವದಿಂದ ದೂರವಿದೆ. ರಾಜಕೀಯವನ್ನು ಗಂಭೀರವಾಗಿ ಪರಿಗಣಿಸುವ ಮಹಿಳೆಯರು ಮಾತ್ರ ಸಾಮಾಜಿಕ ಮತ್ತು ರಾಜಕೀಯವಾಗಿ ಮೇಲೆ ಏರಲು ಸಾಧ್ಯವಾಗುತ್ತದೆ. ಮತದಾನ ಮಾಡುವುದು ಮತ್ತು ನೀವು ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸುವುದು ಬಹಳ ಪ್ರಾಮುಖ್ಯತೆಯ ವಿಷಯವಾಗಿದೆ ಮತ್ತು “ಟಿವಿ ಧಾರಾವಾಹಿಗಳ ನಾಟಕ” ಅಲ್ಲ ಎಂದು ಅವರು ಹೇಳಿದರು.
ಶುಕ್ರವಾರ ಬಿಡುಗಡೆಯಾದ ತಮ್ಮ ಪ್ರಣಾಳಿಕೆಯ ಬಗ್ಗೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 370 ನೇ ವಿಧಿಯನ್ನು ಮರುಸ್ಥಾಪಿಸಲು ಯೋಜಿಸುತ್ತಿದ್ದಾರೆ ಎಂದು ಆರೋಪಿಸಿದರು. ಯುಎಪಿಎ ಕಾಯ್ದೆಯಡಿ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಅನ್ನು ಸರ್ಕಾರ ನಿಷೇಧಿಸಿದ್ದರೂ, ರಾಹುಲ್ ಗಾಂಧಿ ಅವರು ಸಂಘಟನೆಯಿಂದ ಬೆಂಬಲ ಪಡೆಯುತ್ತಿದ್ದಾರೆ ಎಂದು ಸ್ಮೃತಿ ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಭಯೋತ್ಪಾದಕ ಸಂಘಟನೆಗಳ ಬೆಂಬಲವನ್ನು ಪಡೆಯಬೇಕಾದ ಕಾಂಗ್ರೆಸ್ನ ಸ್ಥಿತಿ ಇದೇ ಆಗಿದೆ ಎಂದು ಅವರು ಹೇಳಿದರು.