ರೆಡ್ಡಿ ವೀರಣ್ಣ ಶಾಲೆಯಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ 

Ravi Talawar
ರೆಡ್ಡಿ ವೀರಣ್ಣ ಶಾಲೆಯಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ 
WhatsApp Group Join Now
Telegram Group Join Now
ಕಾರಟಗಿ ನವನಗರ್ : ಕಮ್ಮವರಿ ಶಿಕ್ಷಣ ಸಂಸ್ಥೆ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ  ಶಾಲೆ ಮತ್ತು ಪಿಯು ಕಾಲೇಜಿನಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮ ದಿಂದ ಆಚರಿಸಲಾಯಿತು.ರೆಡ್ಡಿ ವೀರಣ್ಣ ಶಾಲೆಯ ಕನ್ನಡ ಹಿರಿಯ ಉಪನ್ಯಾಸಕಿ ಗಂಗಮ್ಮ ಹಿರೇಮಠ ಅವರು ನಾಡ ದೇವತೆ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಯನ್ನು ಮಾಡಿ ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ
ಶ್ರೀಮನ್ ನಾರಾಯಣ ಮಾತನಾಡಿ ಕರ್ನಾಟಕ ಇದು ಬರಿ ನಾಡಲ್ಲ.ಇದೊಂದು ದೇವಾಲಯ,ಈ ದೇವಾಲಯದಲ್ಲಿ ಅನೇಕ ಆಚಾರ ವಿಚಾರಗಳಿವೆ.ನಡೆ-ನುಡಿ ಶುದ್ಧವಾಗಿದೆ,ಎಲ್ಲರೂ ಯಾವುದೇ ಬೇಧಭಾವವಿಲ್ಲದೆ ಬಹಳ ಹೆಮ್ಮೆಯಿಂದ, ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬವೆಂದರೆ ಅದುವೆ ಕನ್ನಡ ರಾಜ್ಯೋತ್ಸವವಾಗಿದೆ ಸಂಸ್ಕಾರ, ಸಂಸ್ಕೃತಿ ನಮ್ಮ ಜೀವನದುದ್ದಕ್ಕೂ ಇರುತ್ತದೆ. ಹಾಗಾಗಿ ಮಕ್ಕಳು ಉತ್ತಮ ವಿದ್ಯೆ, ಜೀವನ ಶೈಲಿ ಹಾಗೂ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಂತರ ಕನ್ನಡ ಶಿಕ್ಷಕರು ಪಂಪನಗೌಡ ಮಾತನಾಡಿ ಕನ್ನಡ ನಾಡಿನ ಭವ್ಯ ಸಂಸ್ಕೃತಿ, ಶ್ರೇಷ್ಠ ಸಾಹಿತ್ಯ ಹಾಗೂ ಸಾಹಿತಿಗಳ ಕುರಿತು ತಿಳಿಸಿ ಇಡೀ ಪ್ರಪಂಚಕ್ಕೆ ಕನ್ನಡ ನಾಡು ನೀಡಿದ ಅಮೂಲ್ಯ ಕೊಡುಗೆಯಾದ ವಚನ ಸಾಹಿತ್ಯದ ಕುರಿತು ತಿಳಿಸಿ, ನಾವೆಲ್ಲರೂ ನಮ್ಮ ನಾಡಿನ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಗೌರವಿಸುತ್ತಾ ಕನ್ನಡ ನಾಡು-ನುಡಿಯನ್ನು ಉಳಿಸಿ ಬೆಳೆಸೋಣ. ಮೈಸೂರು ರಾಜ್ಯವು ಈಗಿನ ಕರ್ನಾಟಕ ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ ಎಂದರು.
ನಂತರ ಶಾಲಾ 6 ಮತ್ತು 9ನೇ ತರಗತಿ ವಿದ್ಯಾರ್ಥಿ ಗಳಿಂದ ಕನ್ನಡ ನಾಡಿನ ಹಿರಿಮೆಯನ್ನು ಪ್ರತಿಬಿಂಬಿಸುವ ನೃತ್ಯರೂಪಕ ಕಾರ್ಯಕ್ರಮಗಳು ನೆರವೇರಿದವು.ಈ ಸಂದರ್ಭದಲ್ಲಿ ಡಾ ಮೊಹಮ್ಮದ್ ರಫೀಕ್ ಪ್ರಾಚಾರ್ಯರು, ಶ್ರೀದೇವಿ ಕೊಲ್ಲಾ ಶಾಲೆಯ ಮುಖ್ಯಸ್ಥರು, ಸಾಜಿದ ಬೇಗಂ, ಗಂಗಮ್ಮ ಹಿರೇಮಠ, ರಾಘವೇಂದ್ರ, ರತ್ನಮ್ಮ, ಸೌಮ್ಯದೇವಿ, ರೋಜಾ ಮೋಹನ್, ನಂದಿತಾ ಅಮರೇಶ್ ಬಿ, ಡ್ಯಾನ್ಸ್ ಮಾಸ್ಟರ್ ಬಿ ದೇವರಾಜ್, ಚಿತ್ರಕಲೆ ಶಿಕ್ಷಕರು ಈಶಪ್ಪ, ಶಿಕ್ಷಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು  ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article