ರಾಯಬಾಗ :ತಾಲೂಕಿನ ಬಾವನಸೌಂದತ್ತಿ ಗ್ರಾಮದ ವಿಶ್ವಕರ್ಮ ಸಮಾಜ ಸಂಘದ ವತಿಯಿಂದ ಸೃಷ್ಟಿಕರ್ತ ಭಗವಾನ ಶ್ರೀ ವಿಶ್ವಕರ್ಮ ಪಂಚಲೋಹ ಉತ್ಸವ ಮೂರ್ತಿಯ ಮೆರವಣಿಗೆ ಕಾರ್ಯಕ್ರಮಕ್ಕೆ ಇಂದು ತಾಲೂಕಿನ ಬಾವನಸೌಂದತ್ತಿ ಗ್ರಾಮ ಮದಲ್ಲಿ ಓಂಕಾರ ಆಶ್ರಮ ಮಠದ ಶ್ರೀ ಶಿವಶಂಕರ ಮಹಾಸ್ವಾಮಿಜಿ ಹಾಗೂ ಗಣ್ಯರಿಂದ ಅದ್ದೂರಿ ಚಾಲನೆ ನೀಡಲಾಯಿತು.
ಗ್ರಾಮದ ಬಸ್ ನಿಲ್ದಾನದಿಂದ ಮೆರವಣಿಗೆ ಆರಂಭಗೊಂಡು ಕುಂಬಾರಗಲ್ಲಿ, ಜೈನ್ ಬಸದಿ, ಬಸವ ವೃತ್ತ, ಅಂಬೇಡ್ಕರ ಹಾಗೂ ಮಹಾತ್ಮ ಫುಲೆ ವೃತ್ತದಿಂದ ಮೆರವಣಿಗೆ ವಿವಿಧ ವಾದ್ಯಗಳ ಮೂಲಕ ಹಾಗೂ ನೂರಾರು ಮಹಿಳೆಯರಿಂದ ಕುಂಭದೊಂದಿಗೆ ಸಾಗಿ ಕಾಳಿಕಾ ನಗರಕ್ಕೆ ಮುಕ್ತಾಯಗೊಂಡಿತು.
ನಂತರ ಅರ್ಚಕರಾದ ಅರ್ಜುನ್ ಆಚಾರ್ಯ ಅವರ ಸಮ್ಮುಖದಲ್ಲಿ ಕುಂಬ ಹೊತ್ತ ಮಹಿಳೆಯರಿಂದ ವಿಶ್ವಕರ್ಮ ಪಂಚಲೋಹ ಉತ್ಸವ ಮೂರ್ತಿಗೆ ಜಲಾಭಿಷೇಕ ಮಾಡಿದರು. ಬೆಳಗಿನ ಜಾವ ಗ್ರಾಮದ ಮುಖಂಡರಾದ ಈರಗೌಡ ಪಾಟೀಲ ಅವರಿಂದ ಧ್ವಜಾರೋಹಣ ನೆರವೇರಿತು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಕುಶಲಕರ್ಮಿ ವಿಭಾಗದ ಜಿಲ್ಲಾ ಅಧ್ಯಕ್ಷ ಕಲ್ಲಪ್ಪ ಬಡಿಗೇರ, ಗ್ರಾಪಂ ಸದಸ್ಯ ದೂಳಗೌಡ ಪಾಟೀಲ, ವಿಶ್ವ ಕರ್ಮ ಸಮಾಜದ ಸಂಘ ಅಧ್ಯಕ್ಷ ಕುಮಾರ ಬಡಿಗೇರ, ಅಜೀತ ಕಾಮಗೌಂಡ, ಅಣ್ಣಪ್ಪ ಬಡಿಗೇರ, ಮಹಾದೇವ ಬಡಿಗೇರ, ಬಾಬು ಬಡಿಗೇರ ಸುರೇಶ ಸುತಾರ, ಮಲ್ಲಪ್ಪ ಬಡಿಗೇರ, ಲಕ್ಷ್ಮಣ ಸುತಾರ, ಅಣ್ಣಾಸಾಬ್ ಬಡಿಗೇರ ಸೇರಿದಂತೆ ಸಮಾಜದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.


