ಬಳ್ಳಾರಿ. ನ. 03 : ನಗರದ ಪೋಲಾ ಹೋಟೆಲ್ ಆವರಣದಲ್ಲಿ ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿ ಬೆಂಗಳೂರು ಹಾಗೂ ಜಿ ಟಿವಿ ಸಂಯುಕ್ತವಾಗಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಟಿ ಹೆಚ್ ಎಂ ಬಸವರಾಜ್ ರವರಿಗೆ “ಕಲಾ ರತ್ನ” ಪ್ರಶಸ್ತಿ ಪ್ರಧಾನ ಮಾಡಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆ ಎಸ್ ಮುರಳಿದಾರ್ ರಾಷ್ಟ್ರೀಯ ನಿರ್ದೇಶಕರು ಎನ್‌ಸಿಸಿಬಿ ಬೆಂಗಳೂರು ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಕೆಇ ಚಿದಾನಂದಪ್ಪ, ಉದ್ಯಮಿ ಪೋಲಾ ಪ್ರವೀಣ್ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಬುಡ ಅಧ್ಯಕ್ಷರಾದ ಹುಮಯೂನ್ ಖಾನ್ ಡಾ. ಕೆ ಹನುಮಂತಪ್ಪ, ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ವಿ ಎಚ್ ಹುಲುಗಪ್ಪ, ಕೆ ಚನ್ನನಗೌಡ್, ಜಿಕೆ ಸ್ವಾಮಿ, ರಾಜಣ್ಣ, ಗಾದೆಪ್ಪ ಬಿಜೆಪಿಯ ಪುಷ್ಪ, ಚಾಂದಿನಿ ಮುಂತಾದವರು ಉಪಸ್ಥಿತರಿದ್ದರು.


