ಗುರ್ಲಾಪೂರ(30):- ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರಿಂದ ಅ.30 ರಂದು ಗುರ್ಲಾಪುರ ಕ್ರಾಸ್ ರಸ್ತೆ ಬಂದ್ ಮಾಡಿ ಬೃಹತ್ ಪ್ರತಿಭಟನೆಯನ್ನು ಮುಂ.10 ರಿಂದ ನಡೆಸಲಾಗುತ್ತಿದೆ. ಉತ್ತರ ಕರ್ನಾಟಕದಿಂದ ಪ್ರತಿ ಜಿಲ್ಲೆಯಿಂದ ಬೃಹತ್ ಪ್ರಮಾಣದಲ್ಲಿ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
            ರೈತರು, ರೈತ ಮುಖಂಡರು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಪ್ರಧಾನ ಮಂತ್ರಿ ಮುಖ್ಯಮಂತ್ರಿ ಸಕ್ಕರೆ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ದಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
         ಜಿಲ್ಲೆಯಲ್ಲಿ 18 ಎಂಎಲ್ಎಗಳು , ಎಂಪಿಗಳು, ಎಂಎಲ್‌ಸಿಗಳು ,ಸಕ್ಕರೆ ಫ್ಯಾಕ್ಟರಿ ಮಾಲಕರು ಯಾರು ಸಹ ಪ್ರತಿಭಟನೆಯ ಸ್ಥಳಕ್ಕೆ ಬರೆದಿರುವುದು ರೈತರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.
          ರೈತ ಸಂಘದ ರಾಜ್ಯಾಧ್ಯಕ್ಷರಾದ ಚುನಪ್ಪ ಪೂಜಾರಿ ಶಶಿಕಾಂತ್ ಗುರೂಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರೈತರು ಕಬ್ಬಿನ ಬೆಲೆ 3500 ರೂ ಘೋಷಿಸುವವರೆಗೂ ಪ್ರತಿಭಟನೆ ಮುಂದುವರೆಯುವುದು ಎಂದು ಹೇಳಿದರು.
         ನಮ್ಮ ಪ್ರತಿಭಟನೆಗೆ ಮನೆಯದಿದ್ದರೆ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
           ಪ್ರತಿಭಟನೆಯಲ್ಲಿ ಬಸವಕಲ್ಯಾಣದ ಬಸವ ಪ್ರಭು ಸ್ವಾಮಿಗಳು, ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರತಾಪ್ ರಾವ್ ಪಾಟೀಲ್, ಶಿವರಾಜ್ ಪಾಟೀಲ್, ಅರಭಾವಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಲಖನ್ ಸವಸುದ್ದಿ, ಮೂಡಲಗಿ ನ್ಯಾಯವಾದಿಗಳ ಸಂಘ, ರಾಯಬಾಗ ನ್ಯಾಯವಾದಿಗಳ ಸಂಘ, ಮಾಜಿ ಸೈನಿಕರು, ಮಾಜಿ ಸಚಿವರಾದ ಶಶಿಕಾಂತ ನಾಯಕ್, ಕಿಶೋರ್ ನಂದಿ , ಪಿಎಂ ದರೂರ್, ಅನೇಕರು ಹಾಗೂ ವಿಜಯಪುರ, ಬಾಗಲಕೋಟ, ಧಾರವಾಡ, ದಾಂಡೇಲಿ ಇನ್ನು ಅನೇಕ ಜಿಲ್ಲೆಯ ಸುಮಾರು 10 ಸಾವಿರ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
       ಪ್ರತಿಭಟನೆ ಸ್ಥಳಕ್ಕೆ ಸಂಬಂಧಪಟ್ಟ ಯಾರೂ ಬರದೇ ಇರುವುದರಿಂದ ಅಹೋರಾತ್ರಿ ಪ್ರತಿಭಟನೆ ಮುಂದುವರೆಯಲಾಗುವುದು.
        ರೈತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸುಮಾರು 150 ಪೊಲೀಸರು, 2 ಕೆ.ಎಸ್.ಆರ್.ಪಿ ವಾಹನ, ಪಿಎಸ್ಐ ಸಿಪಿಐ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ರೈತರು ಶಾಂತ ರೀತಿಯಿಂದ ಪ್ರತಿಭಟನೆ ನಡೆಸಿದ್ದಾರೆ.
       ಸಾಯಂಕಾಲ 7:00ಗೆ  ಬೆಳಗಾವಿ ಎಡಿಷನಲ್ ಎಸ್ ಪಿ  ,  ಎಸಿ ಪ್ರತಿಭಟನೆ ಸ್ಥಳಕ್ಕೆ ಬಂದು ನಾಳೆ ಜಿಲ್ಲಾಧಿಕಾರಿಗಳ ಜೊತೆಗೆ ಸಮಾಲೋಚಿಸಿ ತೀರ್ಮಾನ ಹೇಳಲಾಗುವುದು ಎಂದು ಹೇಳಿದರು. ಇದಕ್ಕೆ ಸಮಾಧಾನವಾಗದ ರೈತರು ಜಿಲ್ಲಾ ಉಸ್ತುವಾರಿ ಸಚಿವರು, ಸಕ್ಕರೆ ಸಚಿವರು ಹಾಗೂ ಸಂಬಂಧಪಟ್ಟವರು ಬರುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಹೇಳಿದರು.

 
		 
		 
		
