ವಿಧ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

Pratibha Boi
ವಿಧ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
WhatsApp Group Join Now
Telegram Group Join Now

ಯರಗಟ್ಟಿ : ಪಟ್ಟಣದ ಸರಕಾರಿ ಸಿ. ಎಂ. ಮಾಮನಿ ಕಾಲೇಜಿನಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ಉಪ ವಿಭಾಗಾದ ಮುರಗೋಡ ಪೊಲೀಸ್ ಠಾಣೆ ಇವರ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ದಿವಸ ಅಂಗವಾಗಿ ಏರ್ಪಡಿಸಿದ್ದ ವಿಧ್ಯಾರ್ಥಿಗಳ ಪ್ರಬಂಧ ಸ್ಪರ್ಧೆ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದ ಸಿಪಿಐ ಆಯ್ ಎಂ ಮಠಪತಿ.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆಯ್. ಎಂ. ಮಠಪತಿ ಅವರು ರಾಷ್ಟ್ರೀಯ ಏಕತಾ ದಿವಸವನ್ನು ಪ್ರತಿ ವರ್ಷ ಅಕ್ಟೋಬರ್ ೩೧ ರಂದು ಆಚರಿಸಲಾಗುತ್ತದೆ, ಇದು ಭಾರತದ ಉಕ್ಕಿನ ಮನುಷ್ಯನೆಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾಗಿದೆ.ಭಾರತ ಸರ್ಕಾರವು ೨೦೧೪ ರಲ್ಲಿ ಈ ದಿನವನ್ನು ಪರಿಚಯಿಸಿತು. ಈ ದಿನವು ಭಾರತದ ರಾಜಕೀಯ ಏಕೀಕರಣದಲ್ಲಿ ಅವರ ಮಹತ್ವದ ಪಾತ್ರವನ್ನು ಗೌರವಿಸುತ್ತದೆ, ವಿಶೇಷವಾಗಿ ಹಲವಾರು ರಾಜಪ್ರಭುತ್ವದ ರಾಜ್ಯಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸುವಲ್ಲಿ ಅವರು ವಹಿಸಿದ ಪಾತ್ರವನ್ನು ನೆನಪಿಸುತ್ತದೆ.ರಾಷ್ಟ್ರೀಯ ಏಕತೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಜನರಲ್ಲಿ ದೇಶಭಕ್ತಿಯ ಭಾವನೆಯನ್ನು ಬೆಳೆಸುವುದು ಈ ದಿನದ ಉದ್ದೇಶವಾಗಿದೆ ಎಂದು ಹೇಳಿದರು.ನಂತರ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಜಯವಾಗಲಿಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭ ಜರುಗಿತು.

ಈ ವೇಳೆ ಪಿಎ??? ಎಲ್ ಬಿ ಮಾಳಿ, ಎಎ??? ವಾಯ್ ಎಂ ಕಡಕೋಳ, ಪಿಸಿ ಎಂ. ಬಿ. ಸಣ್ಣನಾಯ್ಕರ, ಪ್ರಾಚಾರ್ಯರರಾದ ರಾಯನಗೌಡ ಮರಿಗೌಡರ, ಐಕ್ಯೂಎಸ್ ಸಂಚಾಲಕಾದ ಡಾ. ಸುನಂದಾ ಮಾದರ, ಸಹಾಯಕ ಪ್ರಾಧ್ಯಾಪಕರಾದ ಶಿದ್ಲಿಂಗಪ್ಪ ಗಾಳಿ, ವಿಜಯಲಕ್ಷ್ಮಿ ಬದ್ದಿ, ಚಿಕ್ಕ ಹನಮಯ್ಯ, ಅರ್ಶನ ಕಾಶಾನಟ್ಟಿ, ಶಂಕರ ಲಗಳಿ, ಸಂತೋಷ ಖನ್ನಿನಾಯ್ಕರ, ಯಲ್ಲಪ್ಪ ಭರಮಣ್ಣವರ, ಡಾ. ಮರಿಗೌಡ ಚೋಬಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article