ವಿಶ್ವ ಆರೈಕೆದಾರರ ದಿನಾಚರಣೆ 

Ravi Talawar
ವಿಶ್ವ ಆರೈಕೆದಾರರ ದಿನಾಚರಣೆ 
WhatsApp Group Join Now
Telegram Group Join Now
ಬಳ್ಳಾರಿ ಅ ,29. ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಬಳ್ಳಾರಿ, ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಳ್ಳಾರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬಳ್ಳಾರಿ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಬಳ್ಳಾರಿ ಹಾಗೂ ಅನುಗ್ರಹ ವಿಕಲಚೇತನ ಮಕ್ಕಳ ಶಾಲೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ  ದಿನಾಂಕ ೨೯-೧೦-೨೦೨೫ ರಂದು ವಿಶ್ವ ಆರೈಕೆದಾರರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಕಾನೂನು ಸೇವಾ ಪ್ರಾಧಿಕಾರ ಬಳ್ಳಾರಿ ರಾಜೇಶ್ ಹೊಸಮನೆಯವರು.
ಬಳ್ಳಾರಿ ಧರ್ಮ ಕ್ಷೇತ್ರದ ಕೋಶಾಧಿಕಾರಿಗಳಾದಂತಹ ಫಾದರ್ ಐವನ್ ಪಿಂಟೊ ರವರು, ಚಂಗಾರೆಡ್ಡಿ ಬುದ್ಧಿಮಾಂದ್ಯ ಮಕ್ಕಳು ವಸತಿಯುತ ಶಾಲೆಯ ಆಡಳಿತ ಅಧಿಕಾರಿಗಳಾದ ಗುರುಮೂರ್ತಿಯವರು, ಅನುಗ್ರಹ ವಿಕಲಚೇತನ ಮಕ್ಕಳ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಪ್ರಜ್ಞಾ ರವರು, ಅನುಗ್ರಹ ಶಾಲೆಯ ಹಿರಿಯ ಶಿಕ್ಷಕಿಯಾದ ಸಿಸ್ಟರ್ ಮರ್ಲಿನ್ ರವರು ಹಾಗೂ ಪಾಲಕರ ಪರವಾಗಿ ಶಿವರಾಮ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ಬಂದಂತಹ ಅತಿಥಿಗಣ್ಯರಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗಳಾದಂತಹ ಎಚ್ ಗೋವಿಂದಪ್ಪನವರು ಹೃದಯಪೂರ್ವಕ ಸ್ವಾಗತವನ್ನು ಕೋರಿದರು.ಅತಿಥಿ ಗಣ್ಯರೆಲ್ಲರೂ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
 ನ್ಯಾಯಾಧೀಶರು ರಾಜೇಶ್ ಹೊಸಮನಿ ಯವರು ಕಾರ್ಯಕ್ರಮದಲ್ಲಿ ಆಸಿನರಾಗಿದ್ದ ಎಲ್ಲಾ ಆರೈಕೆದಾರರಿಗೆ ಶುಭವನ್ನು ತಿಳಿಸಿ, ಅನುಗ್ರಹ ಶಾಲೆಯು ಒಂದು ಉತ್ತಮವಾದ ವಾತಾವರಣ ಹೊಂದಿದೆ, ಶಾಲ ಹೆಸರಿನಲ್ಲಿ ಅನುಗ್ರಹ ಎಂಬ ಪದವಿದೆ ಅಂದರೆ ದೇವರ ಶಕ್ತಿ ಇದೆ ಎಂದರ್ಥ, ಆ ದೇವರ ಶಕ್ತಿಯಿಂದ ಇವತ್ತು ಇಲ್ಲಿ ನಿಮ್ಮ ಮಕ್ಕಳು ಕಲಿಕೆಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತಿದ್ದಾರೆ, ಇಲ್ಲಿನ ಸ್ವಚ್ಛತೆ ಶಾಲೆಯ ವಾತಾವರಣ ಅವರು ಕಲಿಸುವಂತಹ ವಿಧಾನಗಳು ತರಗತಿ ಕೊಠಡಿಗಳು ವಿಶೇಷ ಚೇತನ ಮಕ್ಕಳಿಗೆ ಕಲಿಯುವ ಆಸಕ್ತಿಯನ್ನು ಮೂಡುತ್ತದೆ ಅಂತಹ ಸುಂದರ ವಾತಾವರಣವನ್ನು ಇಲ್ಲಿನ ಸಿಬ್ಬಂದಿ ವರ್ಗ ಸೃಷ್ಟಿಸಿದ್ದಾರೆ. ಅದೇ ರೀತಿ ಅವರ ಕಲಿಕಾ ಅಭಿವೃದ್ಧಿಯಲ್ಲಿ ನಿಮ್ಮ ಸಹಕಾರವು ಅತಿ ಮುಖ್ಯವಾಗಿರುತ್ತದೆ ಎಂದು ಪಾಲಕರಿಗೆ ಕೆಲವೊಂದು ಉತ್ತಮವಾದ ಸಲಹೆಗಳನ್ನು ತಿಳಿಸಿದರು.
ಮಕ್ಕಳ ಸರ್ವತೋಮುಖ ಕಲಿಕಾಭಿವೃದ್ದಿಗಾಗಿ ಶಾಲಾ ಸಿಬ್ಬಂದಿಯವರೊಟ್ಟಿಗೆ ಪಾಲಕ ಪೋಷಕರ ಉತ್ತಮ ಬಾಂಧವ್ಯವಿದ್ದರೆ ಯಾವ ಕಲಿಕೆಯು ಕಠಿಣವಾಗದು ಹಾಗೂ ಇಂತಹ ವಿಶೇಷ ಚೇತನರ ಶಾಲೆಗಾಗಿ ಭೂಮಿಯನ್ನು ನೀಡಿ, ಶಾಲಾ ಕಟ್ಟಡವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದ ವೈ.ಎಂ. ಸತೀಶ್ ಅವರ ಕುಟುಂಬದವರಿಗೆ ಎಲ್ಲರ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿ, ತ್ಯಾಗದ ಜೀವನ ದೇವರಿಗೆ ಪ್ರಿಯವಾಗುವುದು ಎಂದು ತಿಳಿಸುತ್ತಾ, ಹಾರೈಕೆದಾರರು ತಮ್ಮ ಶ್ರದ್ಧಾ ಭಕ್ತಿಯಿಂದ ನಿಮ್ಮ ಮಕ್ಕಳನ್ನು ನೋಡಿಕೊಂಡರೆ ಅವರ ಅಭಿವೃದ್ಧಿ ಉತ್ತಮವಾಗುತ್ತದೆ ಎಂದು ಫಾದರ್ ಐವನ್ ಪಿಂಟೊ ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
 ಈ ಸೃಷ್ಟಿಯಲ್ಲಿ ತಾಯಿ ಇಲ್ಲದೆ ಯಾವ ಜೀವವು ಉದಯವಾಗದು. ನಮ್ಮ ಬೆಳವಣಿಗೆಯಲ್ಲಿ ಆರೈಕೆದಾರರಿಲ್ಲದೆ ಯಾರ ಏಳಿಗೆಯೂ ಸಾಧ್ಯವಿಲ್ಲ.ಪ್ರತಿ ಬೆಳವಣಿಗೆ ಹಂತದಲ್ಲಿ ಸಹಕಾರದ ಮನೋಭಾವ ಇದ್ದರೆ ಯಾವ ಅಭಿವೃದ್ಧಿಯು ನಿಲ್ಲುವುದಿಲ್ಲ. ಆರೈಕೆದಾರರು ಬಾಳಿನ ಆಶಾಕಿರಣವಿದ್ದಂತೆ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಿಶೇಷ ಚೇತನರ ಆರೈಕೆದಾರರಿಗೆ ಘನ ಸರ್ಕಾರವು ಅನೇಕ ಸೌಲಭ್ಯಗಳನ್ನು ನೀಡುತ್ತಿದೆ ಅವುಗಳನ್ನು ತಾವು ಪಡೆದುಕೊಳ್ಳಬೇಕು ಮತ್ತು ಮಕ್ಕಳಿಗೆ ಬೇಕಾದಂತಹ ಸೌಲಭ್ಯಗಳನ್ನು ಒದಗಿಸಿಕೊಟ್ಟು ಅವರ ಜೀವನದ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮವನ್ನು ಅನುಗ್ರಹ ಶಾಲೆಯಲ್ಲಿ ಆಯೋಜಿಸಲು ತಿಳಿಸಿ, ಒಂದು ಉತ್ತಮ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟಂತಹ ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಮಾನ್ಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಶ್ರೀಯುತ ಗೋವಿಂದಪ್ಪ ರವರಿಗೆ ನಮ್ಮ ಶಾಲಾ ಸಿಬ್ಬಂದಿ ವರ್ಗ ಮತ್ತು ಎಲ್ಲಾ ಆರೈಕೆದಾರರು ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದ ನಿರೂಪಣೆ ಶಿಕ್ಷಕರಾದ ವಸಂತಕುಮಾರ ರವರು ನಡೆಸಿಕೊಟ್ಟರು.ಶಾಲಾ ಪ್ರಾಂಶುಪಾಲರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
WhatsApp Group Join Now
Telegram Group Join Now
Share This Article