ಜನಪ್ರಿಯ ನಟ ರಿತ್ವಿಕ್ ಮಠದ್ ನಾಯಕನಾಗಿ ನಟಿಸಿರುವ
‘ಮಾರ್ನಮಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನವೆಂಬರ್ 21ಕ್ಕೆ ಈ ಚಿತ್ರ ರಾಜ್ಯಾದ್ಯಂತ ತೆರೆಗೆ ಎಂಟ್ರಿ ಕೊಡಲಿದೆ.
ಕಿರುತೆರೆಯಲ್ಲಿ ಅನುರೂಪ, ಗಿಣಿರಾಮ, ನಿನಗಾಗಿ ಮುಂತಾದ ಧಾರಾವಾಹಿಗಳ ಮೂಲಕ ಜನಮೆಚ್ಚುಗೆ ಗಳಿಸಿರುವ ರಿತ್ವಿಕ್ ಗೆ ನಾಯಕಿಯಾಗಿ ಚೈತ್ರಾ ಜೆ. ಆಚಾರ್ ಸಾಥ್ ಕೊಟ್ಟಿದ್ದಾರೆ.
ಕರಾವಳಿ ಭಾಗದ ಪ್ರೇಮಕಹಾನಿ ಹೊಂದಿರುವ ‘ಮಾರ್ನಮಿ’ ಕರಾವಳಿ ಭಾಗದ ಹುಲಿವೇಷ ಹಿನ್ನೆಲೆಯ ಕಥೆ 1990ರ ದಶಕ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುವ ಸ್ಟೋರಿ. ಈ ಚಿತ್ರದ ಮೂಲಕ ನಿರ್ದೇಶಕ ರಿಷಿತ್ ಶೆಟ್ಟಿ ಹುಲಿ ವೇಷ ಸಂಸ್ಕೃತಿಯನ್ನು ಇಡೀ ಪ್ರಪಂಚಕ್ಕೆ ತೋರಿಸಲು ಹೊರಟಿದ್ದಾರೆ. ಸದ್ಯ ಚಿತ್ರೀಕರಣ ಮುಗಿದಿದ್ದು ಪೋಸ್ಟ್. ಪ್ರೊಡಕ್ಷನ್ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಚಿತ್ರದ ಕಥೆ ಸುಧಿ ಆರ್ಯನ್ ಅವರು ಬರೆದಿದ್ದಾರೆ, ಸುಮನ್ ತಲ್ವಾರ್, ಸೋನು ಗೌಡ, ಪ್ರಕಾಶ್ ತುಮಿನಾಡು, ಜ್ಯೋತೀಶ್ ಶೆಟ್ಟಿ, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್, ಚೈತ್ರಾ ಶೆಟ್ಟಿ ಮುಂತಾದ ಕಲಾವಿದರು ನಟಿಸಿದ್ದಾರೆ.
ಚರಣ್ ರಾಜ್ ಸಂಗೀತ ನಿರ್ದೇಶನ, ಶಿವಸೇನ ಕ್ಯಾಮೆರಾ ವರ್ಕ್, ಪ್ರತೀಕ್ ಶೆಟ್ಟಿ ಸಂಕಲನ,ವರದರಾಜ್ ಕಾಮತ್ ಕಲಾ ನಿರ್ದೇಶನ ಮಾಡಿದ್ದಾರೆ. ವರ್ಷಾ ಆಚಾರ್ಯ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಗುಣಾಧ್ಯ ಪ್ರೊಡಕ್ಷನ್ಸ್ ಮೂಲಕ ಶಿಲ್ಪಾ ನಿಶಾಂತ್ ಹಾಗೂ ನಿಶಾಂತ್ ಅವರು ‘ಮಾರ್ನಮಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.


