ನೇಸರಗಿ. ನಾವು ದಿನನಿತ್ಯ ಸಾವಯವ ಆಹಾರ ಪದಾರ್ಥಗಳನ್ನು ಬಳಕೆ ಮಾಡಿದರೆ ನಮ್ಮ ಅರೋಗ್ಯ ಸದೃಢವಾಗಿರುತ್ತೆ. ಹಾಗೆಯೇ ದಿನನಿತ್ಯ ಸರಳ ಯೋಗಾಸನಗಳನ್ನು ಮಾಡುವದರ ಮೂಲಕ ಶರೀರ ಗಟ್ಟಿ ಮಾಡಿಕೊಳ್ಳಿ ಎಂದು ವಿನಾಯಕ ಕಂಪ್ಯೂಟರ್ ವಿದ್ಯಾಲಯದ ಮುಖ್ಯಸ್ಥರಾದ ಬಸವರಾಜ ಹಿರೇಮಠ ಹೇಳಿದರು.
ಅವರು ಸೋಮವಾರದಂದು ಇಲ್ಲಿನ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಮಠದಲ್ಲಿ ಆಯೋಜಿಸಲಾಗಿದ್ದ ವರದಶ್ರೀ ಪೌಂಡೇಷನ ವತಿಯಿಂದ ಸಿದ್ದ ಹನಿ ರಸ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವರದಶ್ರೀ ಪೌಂಡೇಶನ ಸೇವಾ ಪ್ರತಿನಿಧಿ ಚಿದು ಚಿಟ್ರೆ ಈ ಸಿದ್ದಿ ಹನಿಯ ಉಪಯೋಗ, ಬಳಕೆ, ಆಗುವ ಅನುಕೂಲಗಳ ಕುರಿತು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಮಲ್ಲಿಕಾರ್ಜುನ ಮದನಭಾವಿ, ಅಶೋಕ ಅಗಸಿಮನಿ, ಬಸಪ್ಪ ಚಿಕ್ಕೋಪ್ಪ,ವರದಶ್ರೀ ಪೌಡೇಶನ್ ಸೇವಾ ಪ್ರತಿನಿಧಿಗಳು, ಜಿಲ್ಲೆಯ ಅನೇಕ ಪಲಾನುಭವಿಗಳು, ನೇಸರಗಿ ಹಾಗೂ ಸುತ್ತಮುತ್ತಲಿನ ಜನತೆ ಭಾಗವಹಿಸಿದ್ದರು.


