ಯರಗಟ್ಟಿ: ಯರಗಟ್ಟಿ ಸಮೀಪದ ತೆನಿಕೊಳ್ಳ ಗ್ರಾಮದಲ್ಲಿ ಸ್ಥಾಪಿತವಾದ ನೂತನ ಕೆಎಲ್‌ಇ ಕೃಷಿ ಕಾಲೇಜಿನಲ್ಲಿ ದೀಕ್ಷಾರಂಭ ಕಾರ್ಯಕ್ರಮ ಏರ್ಪಡಿಸಲಾಗಿತ್ತು.  ಕಾರ್ಯಕ್ರಮ ಉದ್ಘಾಟಿಸಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರು ಕೃಷಿ ಪದವಿ ಪಡೆದ ಯುವಜನಾಂಗ ತಮ್ಮ ಗ್ರಾಮಗಳಿಗೆ ತೆರಳಿ ವೈಜ್ಞಾನಿಕ ಕೃಷಿಯಲ್ಲಿ ತೊಡಗಿಕೊಳ್ಳಲು ಕರೆ ನೀಡಿದರು.  ಕೃಷಿ ಈಗ ಆಧುನಿಕತೆಯಿಂದ ಕೂಡಿದ್ದು, ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಇಳುವರಿ ಹೆಚ್ಚಿಸಿ ಲಾಭದಾಯಕ ಮಾಡಬೇಕೆಂದು ಹಾಗೂ ಗ್ರಾಮೀಣ ಮಟ್ಟದಲ್ಲಿ ಕೃಷಿ ನವೋದ್ಯಮಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದರು.  ಕೆಎಲ್‌ಇ ಸಂಸ್ಥೆಯು ಯುವಕ ಯುವತಿಯರಿಗೆ ತಾಂತ್ರಿಕ ಬೆಂಬಲ ನೀಡಲು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನೆ ಮತ್ತು ತರಬೇತಿ ಶಾಲೆ ಮತ್ತು ನೂತನವಾಗಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯವನ್ನು ಸ್ಥಾಪಿಸಿದೆ ಅಲ್ಲದೇ ಉತ್ತಮ ಶೈಕ್ಷಣಿಕ ಅರ್ಹತೆಯುಳ್ಳ ಸಿಬ್ಬಂದಿಯವರನ್ನು ನೇಮಿಸಿಕೊಂಡಿದೆ ಎಂದರು.  ನೂತನ ಕೃಷಿ ಮಹಾವಿದ್ಯಾಲಯದಲ್ಲಿ ಆಧುನಿಕ ಉಪಕರಣಗಳನ್ನು ಒಳಗೊಂಡ ೧೩ ಪ್ರಯೋಗಾಲಯಗಳನ್ನು ಸ್ಥಾಪಿಸಿದೆ ಅಲ್ಲದೆ ೬೦ ಎಕರೆ ಪ್ರಾಯೋಗಿಕ ಕ್ಷೇತ್ರವನ್ನು ಹೊಂದಿದೆ ಎಂದರು.  ಕೃಷಿ ಕಾಲೇಜು ಸ್ಥಾಪನೆ ನನ್ನ ಕನಸಾಗಿದ್ದು ನನ್ನ ಹೃದಯಕ್ಕೆ ಹತ್ತಿರವಾದ ಸಂಸ್ಥೆ ಎಂದರಲ್ಲದೆ ರೈತ ಮತ್ತು ರೈತಮಹಿಳೆಯರ ಮಕ್ಕಳಿಗೆ ಮಾತ್ರ ಈ ಕೃಷಿ ಮಹಾವಿದ್ಯಾಲಯದಲ್ಲಿ ಪ್ರವೇಶ ನೀಡಲಾಗಿದ್ದು, ಈ ಸಂಸ್ಥೆಗೆ ಎಲ್ಲಾ ಸಕಾಲೀಕ ನೆರವನ್ನು ಒದಗಿಸಿ ಉತ್ತಮ ಕೃಷಿ ಸಂಸ್ಥೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಕರ್ನಾಟಕ ಸರ್ಕಾರದ ಕೃಷಿ ಸಚಿವರ ವಿಶೇ? ಕರ್ತವ್ಯ ಅಧಿಕಾರಿಗಳಾದ ಡಾ. ಎ. ಬಿ. ಪಾಟೀಲ ಇವರು ಮಾತನಾಡಿ, ಸರ್ಕಾರದಿಂದ ಉತ್ತರ ಕರ್ನಾಟಕದ ಭಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಆರಂಭಗೊಂಡ ಮೊದಲ ಕೃಷಿ ಮಹಾವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಸಂಸ್ಥೆ ಉತ್ತಮವಾಗಿ ಅಭಿವೃದ್ಧಿಯಾಗುತ್ತಿದೆ ಎಂದರು.  ಆರಂಭದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಪ್ರಾರಂಭೋತ್ಸವ ದೀಕ್ಷಾರಂಭದ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.  ಕೆಎಲ್‌ಇಯಂತಹ ಹೆಸರಾಂತ ಶೈಕ್ಷಣಿಕ ಸಂಸ್ಥೆಗೆ ಕೃಷಿ ಕಾಲೇಜು ದೊರಕಿರುವುದು ಈ ಭಾಗದ ಯುವಜನತೆಗೆ ಕೃಷಿ ಅಧ್ಯಯನ ಕೈಗೊಳ್ಳಲು ಸಹಕಾರಿಯಾಗಿದೆ ಎಂದರಲ್ಲದೆ ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ವಿನಂತಿಸಿದರು.  ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ಎಮ್. ವ್ಹಿ. ಮಂಜುನಾಥ ಹಾಗೂ ಜಂಟಿ ಕೃಷಿ ನಿರ್ದೇಶಕ ಶ್ರೀ ಹೆಚ್. ಡಿ. ಕೊಳೇಕರ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದು ಮಾತನಾಡಿದರು. ಕೆಎಲ್‌ಇ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಬಿ. ಎಸ್. ತಟವಟಿ, ನಿರ್ದೇಶಕರಾದ ಡಾ. ವ್ಹಿ. ಎಸ್. ಸಾಧುನವರ, ಶ್ರೀ ಎಸ್. ಸಿ. ಮೆಟಗುಡ್ಡ, ಶ್ರೀ ಬಸವರಾಜ ಪಾಟೀಲ, ಜಂಟಿ ಕಾರ್ಯದರ್ಶಿ ಡಾ. ಸುನೀಲ ಎಸ್. ಜಲಾಲಪುರೆ, ಕೆವಿಕೆ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ, ಕ್ಷೇತ್ರ ವ್ಯವಸ್ಥಾಪಕ ಶಂಕರಗೌಡ ಪಾಟೀಲ, ವಿಜ್ಞಾನಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಕೆಎಲ್‌ಇ ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಿಯಂಕಾ ಬೋಳೆತ್ತಿನ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.  ನೂತನವಾಗಿ ಕಾಲೇಜಿಗೆ ಪ್ರವೇಶ ಪಡೆದ ೧೧೭ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಅವರ ಪೋ?ಕರು ಹಾಗೂ ಹಿತೈಷಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ ಡಾ. ಪಿ. ಎಸ್. ಹೂಗಾರ ಇವರು ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಉದ್ದೇಶ ವಿವರಿಸಿ ಸ್ವಾಗತಿಸಿದರು, ಡಾ. ಬಾಳೇಶ ಗೌಡಪ್ಪನವರ ನಿರೂಪಿಸಿದರು ಹಾಗೂ ಡಾ. ಸೌರಭ ಮುನವಳ್ಳಿ ವಂದಿಸಿದರು.

 
		 
		 
		
