ಬೆಳಗಾವಿ: ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾದಿನ ಪಡಿಸಿ ಕೊಂಡ ಜಮೀನು ಗೆ ಪರಿಹಾರ ದ ಚೆಕ್ ನೀಡಲು 1ಲಕ್ಷ್ಮ ಲಂಚ ಕೇಳಿದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರ ಬಂಧನ
ರಾಯಬಾಗ ತಾಲೂಕಾ ಖೇಮಲಾಪುರ ಗ್ರಾಮದ ಯಾಸಿನ್ ಪೇಂಢಾರಿ ಯವರ 14 ಗುಂಟೆ ಜಮೀನನು ಮುಗಲಖೊಡ್ ಮತ್ತು ಹಾರೂಗೇರಿ ಪಟ್ಟಣ ಗಳಿಗೆ ಅಮೃತ ಯೋಜನೆ ಅಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾದಿನ ಪಡಿಕೊಳ್ಳವ ಸಲುವಾಗಿ ಸರಕಾರ ದಿಂದ ಮಂಜೂರಾದ ರೂ 18 ಲಕ್ಷ್ಮ ಅನುದಾನದ ಚೆಕ್ ನ್ನು ಮಂಜೂರಿಸಿ ಕೊಡಲು ರೂ 1ಲಕ್ಷ ಲಂಚ ಕ್ಕೆ ಬೇಡಿಕೆ ಇಟ್ಟ ಆಪಾದಿತ್ ಅಧಿಕಾರಿಯಾ ದ ಶ್ರೀ ಅಶೋಕ್ ಶಿರೂರ EE ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಳಗಾವಿ ವಿಭಾಗ ಬೆಳಗಾವಿ ರವರ ವಿರುದ್ಧ ಕರ್ನಾಟಕ ಲೋಕಾಯುಕ್ತ ಠಾಣೆ ಬೆಳಗಾವಿ ಯಲ್ಲಿ ದಿನಾಂಕ 17-10-2025 ರಂದು ಪ್ರಕರಣ ಸಂಖ್ಯೆ 16/2025 ಕಲಂ 7(a) ಭ್ರಷ್ಟಾಚಾರ ಕಾಯ್ದೆ ಅಡಿ PI ನಿರಂಜನ ಪಾಟೀಲ್ ರವರು ದೂರು ದಾಖಲಿಸಿ ಕೊಂಡು ತನಿಖೆ ಕೈಕೊಂಡಿದ್ದರು
ಈ ಬಗ್ಗೆ ಮಾನ್ಯ ಶ್ರೀ ಹಣಮಂತರಾಯ sp ಕ ಲೋ ಬೆಳಗಾವಿ ರವರ ಮಾರ್ಗದರ್ಶನ ದಲ್ಲಿ ಅಪಾದಿತ್ ಅಧಿಕಾರ ಶ್ರೀ ಅಶೋಕ್ ಶಿರೂರು EE ರವರನ್ನು
ಇಂದು ದಿನಾಂಕ 27-10-2025 ರಂದು ಅವರ ಕಚೇರಿ ಯಲ್ಲಿ ತನಿಖಾಧಿಕಾರಿಯಾದ ಶ್ರೀ ನಿರಂಜನ್ ಪಾಟೀಲ್ ಮತ್ತು ಸಿಬ್ಬಂದಿಗಳು ಬಂಧಿಸಿ ತನಿಖೆ ಕೈಕೊಂಡಿರುತ್ತರೆ
ಈ ತನಿಖೆ ಕಾಲಕ್ಕೆ ಸಹಾಯ ಕರಾಗಿ ಶ್ರೀ ಗೋವಿಂದಗೌಡ ಪಾಟೀಲ್ PI ಮತ್ತು ಸಿಬ್ಬಂದಿಗಳು ಆದ ರವಿ ಮಾವರ್ಕರ್, ಗಿರೀಶ್, ಶಶಿಧರ್, ಸುರೇಶ ಮತ್ತು ಮಲ್ಲಿಕಾರ್ಜುನ ಥೈಕಾರ್ ಅವರೂ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ


