ಬೈಲಹೊಂಗಲ. ನಾಡಿನ ಪ್ರತಿಷ್ಠಿತ ತುರಮರಿ ಮನೆತನದ ಅಕ್ಷರ ದಾಸೋಹಿ ನಿವೃತ್ತ ಪ್ರಧಾನ ಗುರುಗಳು, ಬೈಲಹೊಂಗಲ ನಾಡಿನಲ್ಲಿ ಪಂಚಮಸಾಲಿ ಸಮಾಜ ಸಂಘಟನೆಯ ರೂವಾರಿಗಳು ಗುರುಪುತ್ರಪ್ಪ ಬಸವಪ್ರಭು ತುರಮರಿ(84) ಅವರು ಇಂದು ಲಿಂಗೈಕ್ಯರಾದರು ಎಂದು ತಿಳಿಸಲು ವಿಷಾದಿಸುತ್ತೇವೆ,
ಮೃತರ ಅಂತಿಮ ಇಚ್ಛೆಯಂತೆ ಅವರ ದೇಹವನ್ನು ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟಿಗೆ ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮೃತರ ಅಂತಿಮ ದರ್ಶನವನ್ನು ಇಂದು ರಾತ್ರಿ 8.30 ಗಂಟೆವರೆಗೆ ಅವರ ನಿವಾಸದಲ್ಲಿ ಏರ್ಪಡಿಸಲಾಗಿದೆ.
ಮೃತರು ಪತ್ನಿ,ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


