ಗಣಿಗಾರಿಕೆ ಮಾಡಲು ಸರ್ಕಾರದ ಅನುಮತಿ ರದ್ದುಪಡಿಸಲು ಆಗ್ರಹ

Ravi Talawar
ಗಣಿಗಾರಿಕೆ ಮಾಡಲು ಸರ್ಕಾರದ ಅನುಮತಿ ರದ್ದುಪಡಿಸಲು ಆಗ್ರಹ
WhatsApp Group Join Now
Telegram Group Join Now
ಬಳ್ಳಾರಿ, ಅ.27: ಸಂಡೂರು ತಾಲೂಕಿನ ನರಸಿಂಗಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದೇವದಾರಿ ಗಣಿಗಾರಿಕೆ ಯೋಜನೆ ವಿರುದ್ಧ ಸ್ಥಳೀಯರ ಧ್ವನಿ ಗಟ್ಟಿಯಾಗಿ ಮೊಳಗಿದೆ. ಸುಮಾರು 484 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಸರ್ಕಾರದಿಂದ ನೀಡಿರುವ ಅನುಮೋದನೆಯನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಗಣಬಾದಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿಯ ರಾಜ್ಯಸಮಿತಿ ಸದಸ್ಯ ಉಗ್ರ ನರಸಿಂಹ ಗೌಡ್ರು ಆಗ್ರಹಿಸಿದ್ದಾರೆ.
 ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೊಸ ಅರಣ್ಯ ಪ್ರದೇಶವನ್ನು ಕಡಿದು ಗಣಿಗಾರಿಕೆ ಆರಂಭಿಸುವ ಕ್ರಮ ಪರಿಸರ ವಿರೋಧಿ ಮತ್ತು ಸ್ಥಳೀಯರ ಹಿತಾಸಕ್ತಿಗೆ ಧಕ್ಕೆಯಾಗಿದೆ, ಗ್ರಾಮಸ್ಥರ ಪ್ರಕಾರ, ಈಗಾಗಲೇ ಸಂಡೂರು ಪ್ರದೇಶದಲ್ಲಿ ಗಣಿಗಾರಿಕೆಯ ಪರಿಣಾಮವಾಗಿ ಪರಿಸರದ ಹಾನಿ ಗಂಭೀರ ಮಟ್ಟಕ್ಕೆ ತಲುಪಿದೆ. ಗಣಿಧೂಳು, ಬ್ಲಾಸ್ಟಿಂಗ್, ಲಾರಿಗಳ ಸಂಚಾರದಿAದ ಸ್ಥಳೀಯರು ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಇನ್ನೂ ಹೊಸ ಅರಣ್ಯವನ್ನು ಕಡಿದು ಗಣಿಗಾರಿಕೆ ಮಾಡಿದರೆ ಜೀವಜಗತ್ತೇ ನಾಶವಾಗುತ್ತದೆ,” ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ ಎಂದರು.
ಮನವಿಯಲ್ಲಿ ಏಒಇಖಅ ಮತ್ತು ಅಇಅ ಸಂಸ್ಥೆಗಳು ಗಣಿಕಂಪನಿಗಳ ಪರವಾಗಿ ಕೆಲಸ ಮಾಡುತ್ತಿವೆ ಎಂಬ ಆರೋಪ ಮಾಡಲಾಗಿದ್ದು, ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ನಿಯಂತ್ರಿತ ಗಣಿಗಾರಿಕೆ ನಡೆಯುತ್ತಿದ್ದರೂ ಹೊಸ ಬ್ಲಾಕ್‌ಗಳಿಗೆ ಅನುಮತಿ ನೀಡುವುದು ಪರಿಸರ ಕಾನೂನುಗಳ ಉಲ್ಲಂಘನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ ಎಂದು ತಿಳಿಸಿದರು. ಗ್ರಾಮ ಸಭೆಯಲ್ಲಿ ಕೈಗೊಂಡ ನಿರ್ಣಯದ ಪ್ರಕಾರ, ದೇವದಾರಿ ಗಣಿಗಾರಿಕೆಗೆ ಯಾವುದೇ ರೀತಿಯ ಸಾರ್ವಜನಿಕ ಬೆಂಬಲ ನೀಡದಿರಲು ಮತ್ತು ಅರಣ್ಯ ಪ್ರದೇಶ ಪ್ರವೇಶಕ್ಕೂ ತಡೆ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಅಇPಒIZ ಯೋಜನೆಯಡಿ ಸ್ಥಳೀಯ ಅಭಿವೃದ್ಧಿ, ಉದ್ಯೋಗ ಖಾತರಿ ಮತ್ತು ಶಿಕ್ಷಣ ಯೋಜನೆಗಳನ್ನು ಜಾರಿಗೆ ತರಬೇಕೆಂದು ಗ್ರಾಮಸ್ಥರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಗ್ರಾಮಸ್ಥರ ಹೋರಾಟಕ್ಕೆ ವಿವಿಧ ಪರಿಸರ ಮತ್ತು ಸಾಮಾಜಿಕ ಸಂಘಟನೆಗಳ ಬೆಂಬಲ ದೊರೆತಿದ್ದು, “ಅರಣ್ಯ ಉಳಿಸಿ ಜೀವನ ಉಳಿಸಿ” ಎಂಬ ಘೋಷಣೆಗಳೊಂದಿಗೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಇದೆ ಉಗ್ರ ನರಸಿಂಹಗೌಡ್ರು ಆಗ್ರಹಿಸಿದರು.
ಗ್ರಾಮಸ್ಥರ ಪರವಾಗಿ ರಚಿಸಲಾದ ಸಮಿತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಳ್ಳಾರಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಗಣಬಾದಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿಯ ಶ್ರೀನಿವಾಸ್ ರೆಡ್ಡಿ, ಕುಮಾರ್, ದಿವಾಕರ್, ಒಓಏ ನಾಯ್ಡು, ಲೇಪಾಕ್ಷಿ, ನಾಗಲಕ್ಷ್ಮಿ, ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article