ಬಳ್ಳಾರಿ27., ಲೊಹಶಾಸ್ತ್ರ ವಿಭಾಗದ ಹಳೇ ವಿದ್ಯಾರ್ಥಿಗಳ ಪುನರ್ಮಿಲನ ಹಾಗೂ ಸುವರ್ಣ ಸಂಭ್ರಮ ಕಾರ್ಯಕ್ರಮ ಹಬ್ಬದ ವಾತಾವರಣ ದಂತೆ ಸಂತಸ ತಂದಿದೆ ಎಂದು ನಿವೃತ್ತ ಪ್ರಾಚಾರ್ಯರಾದ ಸುರೇಶ್ ಪತ್ತಿಗಿ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡಿದರು. ಸರಕಾರಿ ಪಾಲಟೆಕ್ನಿಕ್ ಕಾಲೇಜಿನಲ್ಲಿ ಲೊಹಶಾಸ್ತ್ರ (ಮೆಟಲರ್ಜಿಕಲ್ ಇಂಜನೀಯರಿಂಗ್)ವಿಭಾಗದಿಂದ ಹಮ್ಮಿಕೊಂಡ ಪುನರ್ಮೀಲನ, ಸುವರ್ಣ ಸಂಭ್ರಮ2025ರ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಇವತ್ತು ತ್ರಿವೇಣಿ ಸಂಗಮ ವಂತೆ ಹಳೇ ವಿದ್ಯಾರ್ಥಿಗಳು,ಹಾಗಿನ ಉಪನ್ಯಾಸಕರು, ಇಂದಿನ ವಿದ್ಯಾರ್ಥಿಗಳು..ನಾವೆಲ್ಲರೂ ಒಂದೇ ಕಡೆ ಸೇರಿ ಆಚರಿಸುತ್ತಿರುವುದು ಅಭಿನಂದನೀಯ ವೆಂದರು. ನಿವೃತ್ತ ಉಪನ್ಯಾಸಕರಾದ ಶೇಷಗಿರಿ ರಾವ್, ಪೀರಾಸಾಬ್, ಅನಂತ್ ಆಚಾರ್, ಬಾಲಕೃಷ್ಣ , ತಮ್ಮ ನುಡಿಗಳನ್ನು ಹಂಚಿಕೊಂಡರು.ತಮಗೆ ವಿದ್ಯೆ ಕಲಿಯಲು ದಾರಿ ದೀಪವಾದ ಹಂದಿನ ಉಪನ್ಯಾಸಕರು, ವಿದ್ಯಾಲಯವನ್ನು ಎಂದಿಗೂ ಮರೆಯಲಾರೆ ಎಂದು ಹಳೆ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ತೆಳಸಿದರು. ಹಳೆಯ ನೆನಪುಗಳನ್ನು ಸ್ಮರಿಸಿಕೊಂಡರು.ನಂತರ ತಮಗೆ ವಿದ್ಯಾ ಬೋಧನೆ ಮಾಡಿದ ಉಪನ್ಯಾಸಕರನ್ನು ಸನ್ಮಾನಿಸಿದರು. ಸ್ಟೇಟ್ ರಾಂಕ್ ಪಡದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು…ಈ ಕಾರ್ಯಕ್ರಮದ ರೂವಾರಿ ವಿಭಾಗದ ಮುಖ್ಯಸ್ಥರು ಕಲಂಧರ್ ಆಜಾದ್ ಅವರನ್ನು ಸನ್ಮಾನಿಸಿದರು. ಎಲ್ಲಾ ವಿದ್ಯಾರ್ಥಿ ಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮ ದಲ್ಲಿ ಹಾಳೆ ವಿದ್ಯಾರ್ಥಿ ಗಳಾದ ನಗರಪಾಲಿಕೆ ಸದಸ್ಯರು ಮೋತ್ಕುರ್ ಶ್ರೀನಿವಾಸ್, ಪತ್ರಕರ್ತ ನಾಗಭೂಷಣ್,ಗುರುರಾಜ್, ಅಣ್ಣಪ್ಪ, ವಿದ್ಯಾ, ಉಷಾ, ವರ್ದೀನಿ, ಮಹೇಶ್ ಬಾಬು, ಸತೀಶ್, ಅಮರೇಶಪ್ಪ, ರಘು, ಯೋಗೀಶ್, ರಜನೀಕಾಂತ್, ಶಿವರಾಜ್, ಶಿವಾನಂದ್, ಶಿವಕುಮಾರ್, ಹಸೆನ್, ಲಕ್ಷ್ಮಣ್, ವಂಶಿ, ಈಗಿನ ಉಪನ್ಯಾಸಕರು, ಸಿಬ್ಬಂದಿ ಮುಂತಾದವರು ಇದ್ದರು.


