ಸಮಾಜ ತಿದ್ದುವಂತಹ ಕಥೆಗಳು ಅಗತ್ಯವಿದೆ: ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ

Ravi Talawar
ಸಮಾಜ ತಿದ್ದುವಂತಹ ಕಥೆಗಳು ಅಗತ್ಯವಿದೆ: ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ
WhatsApp Group Join Now
Telegram Group Join Now

ಲೇಖಕಿಯರ ಸಂಘದಿಂದ  ದತ್ತಿನಿಧಿ ಕಾರ್ಯಕ್ರಮ

ಬೆಳಗಾವಿ: ಆಧುನಿಕ ಮತ್ತು ಸಮಕಾಲೀನ ಕಥೆಗಳು ಕುರಿತು ಮಹಿಳಾ ಸಂವೇದನೆಯುಳ್ಳ, ಸಮಾಜ ತಿದ್ದುವಂತಹ ಸೃಜನಶೀಲ ಕಥೆಗಳು ಮನಮುಟ್ಟುವಂತೆ ಮೂಡಿ ಬರಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ  ಸದಸ್ಯರಾದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು  ಹೇಳಿದರು.

ಬೆಳಗಾವಿಯಲ್ಲಿ ಶನಿವಾರ ಜಿಲ್ಲಾ ಲೇಖಕಿಯರ ಸಂಘದಿಂದ  ಲಿಂ,  ಯಶೋದಾಬಾಯಿ ಕಾಗತಿ ದತ್ತಿ, ದಿ. ಎಚ್  ಬಿ  ಕುಲಕರ್ಣಿ ದತ್ತಿ ದಿ. ಕಂಪಾ ಸೋಮಶೇಖರರಾವ್ ಇವರುಗಳ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

ಬದಲಾದ  ಕಾಲಘಟ್ಟದಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಒಳ್ಳೆಯ ಮತ್ತು ಸಮಗ್ರ ಕಥೆಗಳ ಅಗತ್ಯವಿದೆ. ಇವುಗಳು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು, ಜನರ ಆಲೋಚನೆಗಳನ್ನು ಬದಲಿಸಲು ಮತ್ತು ಸುಸ್ಥಿರ ಬದಲಾವಣೆಗಾಗಿ ಸಾರ್ವಜನಿಕರನ್ನು ಸಕ್ರಿಯವಾಗಿ ಭಾಗವಹಿಸಲು ಪ್ರೇರೇಪಿಸುತ್ತವೆ. ಉತ್ತಮ ಲೇಖನಗಳು ಬಡವರು ಮತ್ತು ಶೋಷಿತರ ಪರ ದನಿ ಎತ್ತಿ, ಬದಲಾವಣೆಯನ್ನು ತರಲು ಪತ್ರಿಕೆಗಳ ಪಾತ್ರವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಲೇಖಕಿಯರ ಸಂಘದ ಉಪಾಧ್ಯಕ್ಷರಾದ ವಾಸಂತಿ ಮೇಳೆದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಲೇಖಕಿಯರ ಸಂಘದ ಉತ್ತಮ ಕಾರ್ಯಕ್ರಮಗಳಿಂದ ನಮ್ಮ ಬೆಳಗಾವಿ ಲೇಖಕಿಯರು ರಾಜ್ಯ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ. ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ದತ್ತಿ ದಾನಿಗಳಾದ ಲೇಖಕರ ಸಂಘದ  ಮಾಜಿ ಅಧ್ಯಕ್ಷರು ದೀಪಿಕಾ ಚಾಟೆ  ಮಾತನಾಡಿ, ಮಹಿಳಾ ಸಂಘಟನೆಗಳು ಗಟ್ಟಿಯಾಗಿ ನೆಲೆಯೂರಿದಾಗ ಮಾತ್ರ ಸಮಾಜದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಲೂ ಸಾಧ್ಯ. ಅದೇ ರೀತಿ ಲೇಖಕಿಯರ ಸಂಘ ಕಷ್ಟಗಳ ದಾರಿಯನ್ನು ತುಳಿದು ಯಶಸ್ಸಿನ  ಮೆಟ್ಟಿಲೇರಿದೆ.
ಅವರ,  ತಂದೆ ತಾಯಿಯನ್ನು ಕೃತಜ್ಞಾ ಭಾವದಿಂದ ನೆನೆದರು. ಅಂದು  ಸಂಘದ ಸ್ಥಿತಿ ಗತಿ  ನೆನೆದು,  ಸಹಕಾರ ನೀಡಿದ ಹಲವಾರು ಲೇಖಕಿಯರನ್ನು ಸ್ಮರಿಸಿದರು.

ದತ್ತಿ ದಾನಿಗಳಾದ  ಕೀರ್ತಿ ಕಾಸರಗೋಡು ಅವರು ಮಾತನಾಡಿ, ಸಮಾಜ ಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಲೇಖಕಿಯರ ಸಂಘದ ಕಾರ್ಯಚಟುವಟಿಕೆಗಳು ಹೊರ  ಪ್ರಪಂಚಕ್ಕೆ ತಿಳಿಯುವಂತೆ ಆಗಬೇಕು ಎಂದು ಹೇಳಿದರು.

ಕೆಂಪೇಗೌಡ ಉತ್ಸವದಲ್ಲಿ ಸಾಧಕರಿಗೆ ಸನ್ಮಾನ ಹಣದ ರೂಪದ ಅವಾರ್ಡ್ ನೀಡುವಂತೆ ,ಚನ್ನಮ್ಮನ ಉತ್ಸವದಲ್ಲಿ ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಡೆಯಬೇಕು ಮತ್ತು ಬೆಳಗಾವಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲೇಖಕಿಯರ  ಸಂಘದವರನ್ನು ಸನ್ಮಾನಿಸಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ  ರಾಜನಂದಾ ಗಾರ್ಗಿ ಅವರ ಮಾತನಾಡಿ, ಅಜ್ಜಿಯ ದಿಟ್ಟತನವನ್ನು ನೆನೆದು ಅವರ ಪ್ರೇರಣೆಯಿಂದ ನಾನು ಉಪನ್ಯಾಸಕಿಯಾದೆ ಕಾರಣ ಅವರ ಹೆಸರಲ್ಲಿ ದತ್ತಿದಾನ ಇಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜೇಶ್ವರಿ ಹೆಗಡೆ ನಾಡಗೀತೆ ಹಾಡಿದರು, ಡಾ. ಅನ್ನಪೂರ್ಣ ಹಿರೇಮಠ ಅವರು ಸ್ವಾಗತಿಸಿದರು. ಸುನಿತಾ ನಂದೆನ್ನವರ ಉತ್ತಮವಾಗಿ ನಿರೂಪಿಸಿದರು. ಸುಪ್ರೀಯಾ ದೇಶಪಾಂಡೆ ಅವರು  ವಂದಿಸಿದರು.

WhatsApp Group Join Now
Telegram Group Join Now
Share This Article