ಚ. ಕಿತ್ತೂರು.ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಕುಲವಳ್ಳಿ, ಕತ್ರಿದಡ್ಡಿ ಸೇರಿದಂತೆ 9 ಹಳ್ಳಿಗಳ ರೈತರ ಬಹು ದಿನಗಳ ಬೇಡಿಕೆಯನ್ನು ಸರ್ಕಾರ ಹಾಗೂ ನಮ್ಮ ಹೆಮ್ಮೆಯ ಮುಖ್ಯ ಮಂತ್ರಿಗಳಾದ ಸಿದ್ರಾಮಯ್ಯ ಅವರ 3000 ರೈತರಿಗೆ ಸುಮಾರು 11000 ಎಕರೆ ಭೂಮಿಯನ್ನು ರೈತರಿಗೆ ಒದಗಿಸಿ ಅವರ ಬಾಳಿಗೆ ಬೆಳಕಾಗಬೇಕು. 18 ನೇ ಶತಮಾನದಲ್ಲಿ ಕಿತ್ತೂರು ಚನ್ನಮ್ಮನನ್ನು ಜೈಲಿಗೆ ಹಾಕಿದ ಮೇಲೆ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ನಾಡಿನ ಅನೇಕ ಹೋರಾಟಗಾರರು ಬ್ರಿಟಿಷರ ವಿರುದ್ಧ ಸಂಗ್ರಾಮ ಮಾಡಿ ಮರಳಿ ಕಿತ್ತೂರು ರಾಜ್ಯದ ಸ್ಥಾಪನೆ ಹೋರಾಟ ಮಾಡಿತ್ತಿರುವ ಸಂದರ್ಭದಲ್ಲಿ ಒಳಸಂಚಿನಿಂದ ರಾಯಣ್ಣನನ್ನು ಬಂದಿಸಲು ಬ್ರಿಟಿಷರಿಗೆ ಸಹಾಯ ಮಾಡಿದ್ದ ಸಲುವಾಗಿ 11000 ಎಕರೆ ಭೂಮಿಯನ್ನು ಧಾನವಾಗಿ ಕೊದಾನಪೂರ ಇನಾಮಧಾರರಿಗೆ ನೀಡಿದ್ದರು.ತದನಂತರ ಈ ಭೂಮಿಯ ಹಕ್ಕನ್ನು ಹಾಗೂ ಬೆಲೆಯನ್ನು ಬೆಳೆಯುತ್ತ ಬಂದಿದ್ದು, ಸದರಿ ಭೂಮಿಯ ಕುರಿತು 2016-17 ನೇ ಸಾಲಿನಲ್ಲಿ ಅಂದಿನ ಕಂದಾಯ ಮಂತ್ರಿಗಳಾದ ಕಾಗೋಡು ತಿಮ್ಮಪ್ಪ ಅವರ ಗಮನಕ್ಕೆ ತಂದಾಗ ಸದರಿ ಭೂಮಿ ಸಾಗುವಳಿ ಮಾಡುತ್ತಿರುವ ಪ್ರತ್ಯಕ್ಷ ಸಾಗುವಳಿದಾರರಿಗೆ ಪಿ ಟಿ ಸೀಟ್ ಮಾಡಿಸಿ ಸರ್ವೇ ಮಾಡಿಸಲು ಆದೇಶ ನೀಡಿದ್ದರು. ಅದಕ್ಕಾಗಿ ನಮ್ಮ ಘನ ಸರ್ಕಾರ ಪಿ ಟಿ ಸರ್ವೇ ಮಾಡಿಸಿ ದಿಂಡಲಕೊಪ್ಪ, ಕತ್ರಿದಡ್ಡಿ ಭಾಗದ 9 ಹಳ್ಳಿಗಳ ಪಿಟಿ ಸರ್ವೇ ಮಾಡಿಸಿ ಸಾಗುವಳಿ ಮಾಡುತ್ತಿರುವ 3000 ರೈತರಿಗೆ ಭೂಮಿಯನ್ನು ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯ ಅವರಲ್ಲಿ ಅಧ್ಯಕ್ಷತೆ ಭಾಷಣದಲ್ಲಿ ಮನವಿ ಮಾಡಿದರು. ಇದ್ದಕ್ಕೂ ಮೊದಲು 9 ಹಳ್ಳಿಗಳ ರೈತರು ಶಾಸಕ ಬಾಬಾಸಾಹೇಬ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿದ್ದರು.

ಅವರು 201 ನೇ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಕಿತ್ತೂರು ಪಟ್ಟಣದ ಮುಖ್ಯ ವೇದಿಕೆಯಲ್ಲಿ ಮಾತನಾಡಿದರು.
ಮಲಪ್ರಭಾ ಶುಗರ ಪುನಸಚೇತನಕ್ಕೆ ಶಾಸಕರ ಮನವಿ :ಅನೇಕ ವರ್ಷಗಳ ಈ ಭಾಗದ ರೈತರ ಒಡನಾಡಿ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಈಗ ತೀವ್ರ ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದು ಆ ಸಕ್ಕರೆ ಕಾರ್ಖಾನೆಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಮಟ್ಟದ ಆರ್ಥಿಕ ನೆರವು ನೀಡಿ ಪುನಸಚೇತನ ಮಾಡಿ ಈ ಭಾಗದ ರೈತರ ಹಾಗೂ 700 ಜನ ಕಾರ್ಮಿಕರ ಕುಟುಂಬ ರಕ್ಷಣೆ ಮಾಡಬೇಕೆಂದು ಸಿ ಎಮ್ ಸಿದ್ರಾಮಯ್ಯ ಅವರಲ್ಲಿ ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಕಿಕ್ಕಿರಿದು ತುಂಬಿದ ಕಿತ್ತೂರು ಉತ್ಸವ ಸಮಾರೋಪ ಸಭೆಯಲ್ಲಿ ಮನವಿ ಮಾಡಿದರು.


