ಚ. ಕಿತ್ತೂರು. ನಾನು ಅತ್ಯಂತ ಸಂತೋಷದಿಂದ ಕಿತ್ತೂರು ಚನ್ನಮ್ಮ ಉತ್ಸವದಲ್ಲಿ ಭಾಗಿ ಆಗಿದ್ದೇನೆ. ಕಳೆದ ಉತ್ಸವದಲ್ಲಿ ಬಂದಿದೆ. ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಸಂಗಡಿಗರು ಕಿತ್ತೂರು ಉತ್ಸವ ಸಂಭ್ರಮದ ಕಿತ್ತೂರು ಉತ್ಸವ ಆಚರಿಸುತ್ತಿದ್ದಾರೆ. 1824 ಅಕ್ಟೋಬರ್ 23 ಕಿತ್ತೂರು ರಾಣಿ ಚನ್ನಮ್ಮ ಅವರು ಬ್ರಿಟಿಷರನ್ನು ಸೋಲಿಸುತ್ತಾರೆ. ಚನ್ನಮ್ಮ ಒಬ್ಬ ಸ್ವಾಭಿಮಾನಿ ದತ್ತು ವಿರುದ್ಧವಾಗಿ 1857 ನೇ ಇಸ್ವಿಯಲ್ಲಿ ಈ ಸ್ವಾಭಿಮಾನದ ಕಿಚ್ಚು ಚನ್ನಮ್ಮನಲ್ಲಿ ಇತ್ತು.ಬ್ರಿಟಿಷ್ ಅವರಿಗೆ ಚನ್ನಮ್ಮ ಶರಣಾಗತಿ ಆಗಬೇಕಿತ್ತು. ತಾಯಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರ್ ಬಾಳಪ್ಪ ಇವರ ಪರಾಕ್ರಮ ಬಹಳ ಇದೆ. ತ್ಯಾಕರೆ ಸಾಯಿಸಿ ಪರಾಕ್ರಮ ಮೆರೆದು ಎರಡನೇ ಭಾರಿ ಸೋಲುತ್ತಾರೆ ಚನ್ನಮ್ಮ . ನಮ್ಮವರೇ ಬ್ರಿಟಿಷನವರಿಗೆ ಸಹಾಯ ಮಾಡಿ ಚನ್ನಮ್ಮನನ್ನು ಬಂಧಿಸಿದ್ದರು. ಕಿತ್ತೂರು ರಾಣಿ ಚನ್ನಮ್ಮ ಅವರನ್ನು ರಾಣಿ ಮಾಡಬೇಕು ಎಂದು ಸಂಗೊಳ್ಳಿ ರಾಯಣ್ಣ ಹೋರಾಟ ಮಾಡುತ್ತಾನೆ. 2017 ರಲ್ಲಿ ಅಧಿಕೃತವಾಗಿ ನಮ್ಮ ಸರ್ಕಾರ ಕಿತ್ತೂರು ಉತ್ಸವಕ್ಕೆ ಆದೇಶ ನೀಡಿತ್ತು. ಬ್ರಿಟಿಷರು ವಿರುದ್ಧ ಅವರಿಗೆ ಸೊಪ್ಪು ಹಾಕದೆ ಯುದ್ಧ ಮಾಡಿದ ಭಾರತದ ಪ್ರಥಮ ಮಹಿಳೆ ಆಗಿದ್ದಾರೆ. ಅದಕ್ಕಾಗಿ ಶಾಸಕ ಬಾಬಾಸಾಹೇಬ ಪಾಟೀಲ ಅವರಿಗೆ ಬೇಕಾದ ಅನುಧಾನವನ್ನು ಕೊಟ್ಟಿದ್ದೇನೆ. ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪು ಸುಲ್ತಾನ್ ಹೋರಾಟ ಮಾಡಿದ್ದಾನೆ ಅದನ್ನು ಹೇಳಿದರೆ ವಿರೋಧಿ ಪಕ್ಷದವರು ಸಿದ್ರಾಮಯ್ಯ ಮುಸ್ಲಿಂ ಪರ ಮಾತಾಡ್ತಾನೆ ಅಂತಾರೆ. ಟಿಪ್ಪು ಒಬ್ಬ ಸ್ವಂತಂತ್ರ್ಯ ಹೊರಟ ಮಾಡಿ ಸಾವನ್ನು ಅಪ್ಪುತ್ತಾನೆ. ಅಂಬೇಡ್ಕರ್ ಹೇಳತ್ತಾರೆ ಭಾರತ ದೇಶದ ಇತಿಹಾಸ ಗೊತ್ತಿಲ್ಲದವರು ಮುಂದೆ ಬರಲ್ಲ. ಎಲ್ಲ ಧರ್ಮಗಳಲ್ಲಿ ಹಿಂಸೆ ಇಲ್ಲ ಆದರೆ ಬಿಜೆಪಿ ಅವರು ರಾಜಕೀಯ ಮಾಡತಾರೆ, ಅದಕ್ಕಾಗಿ ಜಾತಿ ಹೆಸರಲ್ಲಿ ರಾಜಕೀಯ ಮಾಡಬಾರದು. ಕುತಂತ್ರಿಗಳು ಆಗಲು ಇದ್ದರು, ಈಗಲೂ ಇದ್ದಾರೆ , ಕೇವಲ ಸ್ವಾರ್ಥ್ ಹಿತಶಕ್ತಿಗೆ ಜಾತಿ ಬಳಸ್ತಾರೆ. ಇಂತಹ ಉತ್ಸವಗಳಿಂದ ಚನ್ನಮ್ಮ ತಾಯಿಯ ಇತಿಹಾಸ ದೇಶಕ್ಕೆ ತಿಳಿಸುವ ಯೋಜನೆ ಆಗಿದೆ. ನೇಸರಗಿ ಭಾಗದ ಶ್ರೀ ಚನ್ನವೃಷಬೇಂದ್ರ ಯಾತ ನೀರಾವರಿ ಯೋಜನೆಗೆ 540 ಕೋಟಿ ರೂ ಗಳ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ., ಬೈಲಹೊಂಗಲ ಚನ್ನಮ್ಮ ಸಮಾಧಿಗೆ ರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಕೇಂದ್ರಕ್ಕೆ ಸಿಫಾರಸ್ಸು ಮಾಡಲಾಗಿದೆ. ಬೆಳಗಾವಿ ಏರರ್ಪೋರ್ಟ್ ಗೆ ಕಿತ್ತೂರು ರಾಣಿ ಚನ್ನಮ್ಮ ಹೆಸರು ಇಡಲು ಕೇಂದ್ರಕ್ಕೆ ಪತ್ರ ಬರೆದಿದ್ದೇನೆ.ಎಲ್ಲ ಜಾತಿಗಳ ಸಹಬಾಳ್ವೆ ಬದುಕುವದು ನಮ್ಮ ಆಶಯ ಎಂದರು.
ಬಿಜೆಪಿ ಜನರ ಮಧ್ಯೆ ಜಾತಿಯ ವಿಷಬೀಜ ಬಿತ್ತುತ್ತಿದೆ: ಸಿಎಂ ಸಿದ್ದರಾಮಯ್ಯ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಕಳೆದ ವರ್ಷ ತಾಯಿ ಚನ್ನಮ್ಮಾಜಿಯ ಉತ್ಸವ 200 ವರ್ಷ ಆಗಿದ್ದರಿಂದ ಅದ್ದೂರಿಯಾಗಿ ಆಚರಿಸಿದ್ದೇವೆ. ಚನ್ನಮ್ಮ ಸ್ಮಾರಕ ನಿರ್ಮಾಣಕ್ಕೆ ಅನುಧಾನ ನೀಡಲು ಸಿ ಎಮ್ ಸಿದ್ರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ. ಪಟ್ಟಣದ ಸೌಂದರಿಕರಣಕ್ಕೆ ಸಚಿವ ಸತೀಶ ಜಾರಕಿಹೊಳಿ ಅನುಧಾನ ನೀಡಿದ್ದಾರೆ. ರೈತರ ಬೆಳವಣಿಗೆಗೆ ಒಳ್ಳೆಯ ತೀರ್ಮಾನ, ಮಲಪ್ರಭಾ ಸಕ್ಕರೆ ಕಾರ್ಖಾನೆ ಪುನಃಸಚೇತನ ನೀಡಬೇಕು.ಸಿ ಎಮ್ ಅವರು ಕಿತ್ತೂರು ಪ್ರಾಧಿಕಾರಕ್ಕೆ ಅನುಧಾನ ನೀಡಿದ್ದಾರೆ, ಮುಂದೆಯೂ ನೀಡುತ್ತಾರೆ. ಎರಡು ತಿಂಗಳಲ್ಲಿ ತೀಮ್ಸ್ ಪಾರ್ಕ್ ನಿರ್ಮಾಣ ಕಾಮಗಾರಿ ಚಾಲನೆ ಆಗಲಿದೆ ಎಂದರು.
ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ಕಿತ್ತೂರು ಉತ್ಸವ ಅಧಿಕೃತ ಘೋಷಣೆ ಮಾಡಿದ್ದು ಸಿ ಎಮ್ ಸಿದ್ರಾಮಯ್ಯ, ಸರ್ಕಾರಿ ಕಚೇರಿಗಳಲ್ಲಿ ಅಣ್ಣ ಬಸವಣ್ಣ ಅವರ ಫೋಟೋ ಹಾಕಲು ಅದೇಶಿಸಿದ್ದು ಸಿದ್ರಾಮಯ್ಯ ಅವರು, ಕಿತ್ತೂರು ಉತ್ಸವಕ್ಕೆ ಹೆಚ್ಚಿನ ಅನುಧಾನ ನೀಡಿದವರು ಸಿ ಎಮ್ ಅವರು ಈಗ ಬೈಲಹೊಂಗಲ ತಾಯಿ ಚನ್ನಮ್ಮ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಮಾಡಲು ಕೇಂದ್ರಕ್ಕೆ ಸಿಫಾರಸ್ಸು ಮಾಡಿದ್ದಾರೆ ಎಂದರು.
ಸಾನಿಧ್ಯ ಕಿತ್ತೂರು ಕಲ್ಮಟದ ಮಡಿವಾಳ ಶ್ರೀ ರಾಜಯೋಗಿಂದ್ರ ಶಿವಯೋಗಿ ಮಹಾಸ್ವಾಮಿಗಳು, ಕಾದರವೋಳ್ಳಿಯ ಡಾ. ಪಾಲಾಕ್ಷ ಶಿವಯೋಗಿಶ್ವರರು, ನಿಚ್ಚನಕಿಯ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಬಾಸಾಹೇಬ ಪಾಟೀಲ, ಅಶೋಕ ಪಟ್ಟಣ, ಮಹಾಂತೇಶ್ ಕೌಜಲಗಿ, ಎಚ್ ಎನ್ ಕೋಣರೆಡ್ಡಿ, ರಾಜು ಸೆಟ್,ವಿಶ್ವಾಸ ವೈದ್ಯ,ಎಮ್ ಎಲ್ ಸಿ ಚನ್ನರಾಜ್ ಹಟ್ಟಿಹೊಳಿ, ಸಲೀಮ್ ಅಹಮದ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಭೀಮಾಶಂಕರ ಗುಳ್ಳೆದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮೃತ ಶಿಂದೆ,ಅಜಿಮ್ ಖಾದ್ರಿ, ಲಕ್ಷ್ಮಣರಾವ ಚಿಂಗಳೆ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ವಿನಯ ನವಲಗಟ್ಟಿ,ಬೆಳಗಾವಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ಕಾರ್ಯದರ್ಶಿಗಳಾದ ಶ್ರೀಮತಿ ವಿದ್ಯಾವತಿ ಭಜಂತ್ರಿ, ಉಪವಿಭಾಧಿಕಾರಿ ಪ್ರವೀಣ ಜೈನ, ಡಾ. ವಿಜಯ ವಕ್ಕುಂದ ಆರ್ ಸಿ ಯು ನ ಕುಲಪತಿ ಸಿ ಎಮ್ ತ್ಯಾಗರಾಜ ಉಪಸ್ಥಿತರಿದ್ದರು.

