ಅಥಣಿ: ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಬಳಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಆಡಳಿತ ಮಂಡಳಿ ಚುನಾವಣೆ ೨೦೨೫ ಸುಸುತ್ರವಾಗಿ ನಡೆದಿದೆ. ಅಥಣಿ ಶಾಸಕ ಲಕ್ಷö್ಮಣ ಸವದಿ ಹಾಗೂ ಕಾಗವಾಡ ಶಾಸಕ ರಾಜೂ ಕಾಗೆ ಅವರ ಬೆಂಬಲಿತ ರೈತ ಸಹಕಾರ ಪೆನಲ್ ಹಾಗೂ ಮಾಜಿ ಶಾಸಕ ಮಹೇಶ ಕುಮಟಳ್ಳಿ ಅವರ ಸ್ವಾಭಿಮಾನಿ ರೈತ ಪೆನಲ್ ಮದ್ಯ ಜಿದ್ದಾಜಿದ್ದಿನ ಚುನಾವಣೆ ಎರ್ಪಟ್ಟಿತ್ತು. ರವಿವಾರ ಬೆಳಗ್ಗೆ ೮ ಗಂಟೆಗೆ ಮತದಾನ ಪ್ರಾರಂಭವಾಗಿ ಸಂಜೆ ೪ ಗಂಟೆಗೆ ಮುಕ್ತಾಯಗೊಂಡು ೭೯.೪೧ ಪ್ರತಿಶತ ಮತದಾನ ಚಲಾವಣೆಗೊಂಡಿದೆ. ಒಟ್ಟು ೧೧೩೦೦ ಮತಗಳಲ್ಲಿ ೮೯೭೫ ಮತಗಳು ಚಲಾವಣೆಗೊಂಡಿವೆ. ರವಿವಾರ ೫ ಗಂಟೆಯುAದಲೆ ಮತ ಎನಿಕೆ ಪ್ರಾರಂಭಗೊAಡಿದೆ.
ಎರಡು ಗುಂಪುಗಳ ಮದ್ಯ ಘರ್ಷಣೆ: ಮತದಾನದ ವೇಳೆ ನಕಲಿ ಮತದಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದಾಗ ಕೆಲ ಕಾಲ ಘರ್ಷನೆ ನಡೆದು ನಕಲಿ ಮತದಾನ ಮಾಡಲು ಬಂದ ವ್ಯಕ್ತಿಗೆ ಧರ್ಮದೇಟು ನೀಡಿ ಮತದಾನ ಕೇಂದ್ರದಿAದ ಹೋರ ಹಾಕಿದರು. ಇನ್ನು ಶಾಸಕ ಲಕ್ಷö್ಮಣ ಸವದಿ ಅವರ ಸುಪುತ್ರ ಹಾಗೂ ರಮೇಶ ಜಾರಕಿಹೊಳಿ ಬೆಂಬಲಿಗ ಸತ್ಯಪ್ಪ ಭಾಗೇಣ್ಣವರ ಮದ್ಯ ಮಾತಿನ ಚಕಮಕಿ ನಡೆದು ಕೆಲ ಕಾಲ ತ್ಯೇಷಮಯ ವಾತಾವರಣ ನಿರ್ಮಾಣವಾಗಿತ್ತು ಪೊಲೀಸ್ರ ಸಮಯ ಪ್ರಜ್ಷೆಯಿಂದ ಪರಸ್ಥಿತಿಯನ್ನು ತಿಳಿಗೊಳಿಸಿದರು
ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಚುನಾವಣೆ ಸುಸುತ್ರ


