ಅಥಣಿ,: ಕಳೆದ 20 ವರ್ಷಗಳಿಂದ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಬಲಿಷ್ಠ ಗೊಳಿಸಲು ಹಾಗೂ ಅಭಿವೃದ್ಧಿ ಗಾಗಿ ಶಾಸಕ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದ್ದು ಈ ಬಾರಿ ಆಡಳಿತ ಮಂಡಳಿಯ ಚುನಾವಣೆಯಲ್ಲಿ ರೈತ ಸಹಕಾರ ಪ್ಯಾನೆಲ್ ಬೆಂಬಲಿಸುವಂತೆ ಅಥಣಿ ಪಟ್ಟಣದ ಶೇರುದಾರ ಮತದಾರರಲ್ಲಿ ಮತ ಯಾಚನೆ ನಡೆಸಿ ಇನ್ನೊಂದು ಬಾರಿ ಅವಕಾಶ ನೀಡುವಂತೆ ಮಲ್ಲೇಶ್ ಸವದಿ ಮನವಿ ಮಾಡಿದರು
ಅಥಣಿ ಪಟ್ಟಣದಲ್ಲಿ ಶುಕ್ರವಾರ ನಡೆದ ಮತಯಾಚನೆ ಪಾದಯಾತ್ರೆ, ನೇತೃತ್ವ ವಹಿಸಿದ್ದ ಮಲ್ಲೇಶ್ ಸವದಿ ಹಾಗೂ ಶಿವಕುಮಾರ್ ಸವದಿ ಅವರ ಸಮ್ಮುಖದಲ್ಲಿ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಮತದಾರರಲ್ಲಿ ರೈತ ಸಹಕಾರ ಪ್ಯಾನಲ್ಗೆ ಬೆಂಬಲಿಸುವಂತೆ ಮತದಾರರಲ್ಲಿ ಮತಯಾಚನೆ ಮಾಡಿದರು
ಈ ವೇಳೆ ಮಾತನಾಡಿದ ಮುಖಂಡ ಶಿವಕುಮಾರ್ ಸವದಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ, ಕಳೆದ 20 ವರ್ಷಗಳಲ್ಲಿ ವಿವಿಧ ಹಂತಗಳಲ್ಲಿ ಅಭಿವೃದ್ಧಿಯನ್ನು ಕಂಡಿದೆ ಮುಂಬರುವ ದಿನಗಳಲ್ಲಿ ಸಕ್ಕರೆ ಕಾರ್ಖಾನೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ರೈತ ಸಹಕಾರಿ ಪ್ಯಾನಲ್ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಅಲ್ಲದೆ ಕಾರ್ಖಾನೆ ವಿವಿಧ ವಿಭಾಗಗಳಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಗಳಿಸಿ ರೈತರ ವಿಶ್ವಾಸಕ್ಕೆ ಪಾತ್ರವಾಗಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಬೆಲೆಯನ್ನು ರೈತರ ಕಬ್ಬಿಗೆ ನೀಡಿದ ಹೆಗ್ಗಳಿಕೆ ನಮ್ಮ ಆಡಳಿತ ಮಂಡಳಿಗೆ ಇದೆ. ಸದ್ಯ ನಡೆಯುತ್ತಿರುವ ಆಡಳಿತ ಮಂಡಳಿಯ ಚುನಾವಣೆಯಲ್ಲಿ ರೈತ ಸಹಕಾರ ಪ್ಯಾನಲ್ಗೆ ಅದ್ಭುತ ಬೆಂಬಲವನ್ನು ನೀಡಿ ಸಹಕರಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು
ಈ ವೇಳೆ ಪುರಸಭೆ ಸ್ಥಾಯಿ ಸಮಿತಿ ಅದ್ಯಕ್ಷ ದತ್ತಾ ವಾಸ್ಟರ್, ಸದಸ್ಯರಾದ ಸಂತೋಷ ಸಾವಡಕರ, ರಾಜೂ ಗುಡೋಡಗಿ,ಸೈಯದ್ ಅಮೀನ ಗದಯಾಳ, ವಿಲೀನರಾಜ ಯಳಮಲ್ಲೆ, ಮಲ್ಲು ಹುದ್ದಾರ, ಮುಸ್ತಾಕ ಮುಲ್ಲಾ, ಬಸು ನಾಯಿಕ, ಬಸವರಾಜ ಪಾಟೀಲ, ಮುಖಂಡರಾದ ಮಹಾಂತೇಶ ಬಾಡಗಿ, ರವಿ ಬಡಕಂಬಿ, ಸುಂದರ ಸೌದಾಗರ, ಹರೀಶ ವರಲ್ಯಾಣಿ, ಅಬ್ದುಲ್ ಮುಲ್ಲಾ, ವಿಕಾಸ ರಾಠೋಡ, ರಮೇಶ ಪಟ್ಟಣ, ಆಸೀಪ್ ತಾಂಬೋಳಿ, ರಾಜೂ ಬುಲಬುಲೆ, ಶ್ರೀ ಶೈಲ ನಾಯಿಕ,ಶ್ರೀ ಶೈಲ ಹಳದಮಾಳ ಸೇರಿದಂತಡ ಹಲವು ಮುಖಂಡರು ಉಪಸ್ಥಿತರಿದ್ದರು


