ಅಕ್ಟೋಬರ್ 24, 25 ಕ್ಕೆ ಜೆಸ್ಕಾಂ ಆನ್‌ಲೈನ್‌ ಸೇವೆ ಅಲಭ್ಯ

Ravi Talawar
ಅಕ್ಟೋಬರ್ 24, 25 ಕ್ಕೆ ಜೆಸ್ಕಾಂ ಆನ್‌ಲೈನ್‌ ಸೇವೆ ಅಲಭ್ಯ
WhatsApp Group Join Now
Telegram Group Join Now
*ಬಳ್ಳಾರಿ, ಅ.23. ಜೆಸ್ಕಾಂ ವಿದ್ಯುತ್‌ ಸರಬರಾಜು ಕಂಪನಿಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ತುರ್ತು ನಿರ್ವಹಣೆ ಕಾರ್ಯ ಹಿನ್ನೆಲೆಯಲ್ಲಿ ಆನ್‌ಲೈನ್‌ ಸೇವೆಗಳು ಅಕ್ಟೋಬರ್ 24, 25 ರಂದು ಲಭ್ಯ ಇರುವುದಿಲ್ಲ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಿಸ್ಟಂ ಡೌನ್‌ ಟೈಮ್ ಅಕ್ಟೋಬರ್ 24ರ ರಾತ್ರಿ 8ರಿಂದ ಆರಂಭವಾಗಿ 25ರ ಮಧ್ಯಾಹ್ನ 1 ಗಂಟೆಗೆ ಕೊನೆಗೊಳ್ಳುತ್ತದೆ. ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಗ್ರಾಹಕರಿಗೆ, www.gescomglb.org ಪೋರ್ಟಲ್‌ ಮೂಲಕ ಮಾಡುವ ಆನ್‌ಲೈನ್‌  ಸೇವೆಗಳಾದ ಬಿಲ್ ಪಾವತಿ, ಹೊಸ ಸಂಪರ್ಕ ಲಭ್ಯವಿರುವುದಿಲ್ಲ, ಹಾಗೆಯೇ ವಿದ್ಯುತ್ ಬಿಲ್ ಪಾವತಿಗಾಗಿ ಬಳಸುವ ಜೆಸ್ಕಾಂ ಸ್ನೇಹಿ ಆ್ಯಪ್, ಕರ್ನಾಟಕ ಒನ್‌ ಸೇರಿದಂತೆ ಮೊದಲಾದ ಥರ್ಡ್ ಪಾರ್ಟಿ ಪಾವತಿ ವಿಧಾನಗಳಲ್ಲಿ ಆನ್‌ಲೈನ್‌ ಸೇವೆ ಅಲಭ್ಯ. ಅಡಚಣೆಗಾಗಿ ಗ್ರಾಹಕರು ಸಹಕಾರ ನೀಡಬೇಕೆಂದು ಜೆಸ್ಕಾಂ ಕೋರಿದೆ.
*ಜೆಸ್ಕಾಂನ ಆನ್‌ಲೈನ್‌ ಸೇವೆಗಳು ಲಭ್ಯವಿರದ ನಗರಗಳು*
ಗುಲ್ಬರ್ಗಾ, ಮಾನವಿ, ಸಿಂಧನೂರು, ಬೀದರ್, ಗಂಗಾವತಿ, ಸೇಡಂ, ಬಸವಕಲ್ಯಾಣ, ವಾಡಿ, ಆಳಂದ, ಭಾಲ್ಕಿ, ಶಹಾಬಾದ್, ಶಹಾಪುರ, ಶೋರಾಪುರ, ಸಿರಗುಪ್ಪಾ, ಕಂಪ್ಲಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಹುಮ್ನಾಬಾದ್ ಹಾಗೂ ಹೊಸಪೇಟೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article