ಗಣವೇಷಧಾರಿಗಳ ಆಕರ್ಷಕ ಪಥಸಂಚಲನ: ಹೂಮಳೆ ಸುರಿಸಿ ಸಂಭ್ರಮ

Ravi Talawar
ಗಣವೇಷಧಾರಿಗಳ ಆಕರ್ಷಕ ಪಥಸಂಚಲನ: ಹೂಮಳೆ ಸುರಿಸಿ ಸಂಭ್ರಮ
WhatsApp Group Join Now
Telegram Group Join Now

ಸವದತ್ತಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನೆಯ ಶತಮಾನೋತ್ಸವ ಹಾಗೂ ವಿಜಯದಶಮಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಭಾನುವಾರ ಜರುಗಿದ ಗಣವೇಷಧಾರಿ ಗಳ ಆಕರ್ಷಕ ಪಥಸಂಚಲನಕ್ಕೆ ಸ್ಥಳೀಯರು ಜೆಸಿಬಿ ಮೂಲಕ ಹೂಮಳೆ ಸುರಿಸಿ ಸಂಭ್ರಮಿಸಿದರು.

ಎಪಿಎಂಸಿ ಆವರಣದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ ನಂತರ ಆರ್‌ಎಸ್‌ಎಸ್ ಪ್ರಮುಖ ನರಸಿಂಹ ಕುಲಕರ್ಣಿ ನೇತೃತ್ವದಲ್ಲಿ ಆರಂಭವಾದ ವಿಜಯದಶಮಿ ಪಥ ಸಂಚಲನ ಹೊಸಪೇಟಿ ಓಣಿ, ಕಟಕೋಳ ಬ್ಯಾಂಕ ವೃತ್ತ, ಆನಿ ಅಗಸಿ, ಬಜಾರ ಮಾರ್ಗವಾಗಿ -ಎ???ಲ್‌ಎಒಕ್ರಾಸ್ ಮೂಲಕ ತಾಲ್ಲೂಕು ಕ್ರೀಡಾಂಗಣ ತಲುಪಿತು.

ಸ್ಥಳೀಯ ಮತ್ತು ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ ಸುಮಾರು ೫೦೦ಕ್ಕೂ ಅಧಿಕ ಗಣವೇಶಧಾರಿಗಳ ಪಥ ಸಂಚಲನ ನೋಡುಗರನ್ನು ಸೆಳೆಯಿತು. ತೆರೆದ ವಾಹನದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಡೆವಾರ್, ಮಾಧವರಾವ್ ಸದಾಶಿವರಾವ್ ಗೋಲವಾಲ್ಕರ್ ಅವರ ಚಿತ್ರವಿರಿಸಿಮೆರವಣಿಗೆ ನಡೆಸಲಾಯಿತು.

ತಾಲ್ಲೂಕು ಕ್ರೀಡಾಂಗಣದಲ್ಲಿ ಸಂಜೆ ಸಭೆ ಜರುಗಿತು. ಸ್ಥಳೀಯ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ವಿರುಪಾಕ್ಷ ಮಾಮನಿ ಗಣವೇಶಧಾರಿಯಾಗಿ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದು ಯುವಕ ರಲ್ಲಿ ಉತ್ಸಾಹ ಹೆಚ್ಚಿಸಿತು.

ಉಮೇಶ ಶಿಗ್ಲಿ, ಜಿ.ವಾಯ್. ಕರಮಲ್ಲನವರ, ಶಿವಾನಂದ ಸರದಾರ, ಶಂಕರ ವಣ್ಣೂರ, ಹೇಮಂತ ಭಸ್ಮ, ಈಶ್ವರ ಮೇಲಗಿರಿ ಇದ್ದರು. ಸವದತ್ತಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯದಶಮಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಗಣವೇಷಧಾರಿಗಳು ಪಥ ಸಂಚಲನ ನಡೆಸಿದರು

WhatsApp Group Join Now
Telegram Group Join Now
Share This Article