ರಾಷ್ಟ್ರಪತಿ ಮುರ್ಮು ಅವರು ಇಂದಿನಿಂದ ನಾಲ್ಕು ದಿನಗಳ ಕಾಲ ಕೇರಳ ಪ್ರವಾಸ

Ravi Talawar
 ರಾಷ್ಟ್ರಪತಿ ಮುರ್ಮು ಅವರು ಇಂದಿನಿಂದ ನಾಲ್ಕು ದಿನಗಳ ಕಾಲ ಕೇರಳ ಪ್ರವಾಸ
WhatsApp Group Join Now
Telegram Group Join Now

ತಿರುವನಂತಪುರಂ (ಕೇರಳ): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದಿನಿಂದ ನಾಲ್ಕು ದಿನಗಳ ಕಾಲ ಕೇರಳ ಪ್ರವಾಸ ಕೈಗೊಳ್ಳಲಿದ್ದಾರೆ. ಬುಧವಾರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ರಾಷ್ಟ್ರಪತಿ ಭೇಟಿ ನೀಡುತ್ತಿದ್ದು, ಸಕಲ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

ಮಂಗಳವಾರ ಸಂಜೆ ವೇಳೆಗೆ ಅವರು ಕೇರಳಕ್ಕೆ ಆಗಮಿಸಲಿದ್ದಾರೆ. ವಿಮಾನ ನಿಲ್ದಾಣದಿಂದ ರಾಷ್ಟ್ರಪತಿಗಳು ಹೋಗುವ ಮಾರ್ಗದಲ್ಲಿ ಮಧ್ಯಾಹ್ನ 3 ಗಂಟೆಯಿಂದ ನಗರದಾದ್ಯಂತ ಸಂಚಾರ ನಿರ್ಬಂಧಗಳು ಮತ್ತು ನಿಯಮಗಳು ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಪತ್ತನಂತಿಟ್ಟುವಿನಲ್ಲಿರುವ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲಿದ್ದಾರೆ. ಜೊತೆಗೆ ಆರತಿ ಸೇವೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಪಿಐಬಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಬರಿಮಲೆಯಲ್ಲಿ ಸಕಲ ಸಿದ್ಧತೆ: ರಾಷ್ಟ್ರಪತಿ ದ್ರೌಪದಿ ಮುರ್ಮು ನಾಳೆ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡುವ ಹಿನ್ನೆಲೆ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಡಿಬಿ) ತಿಳಿಸಿದೆ.

ಮುರ್ಮು ಅವರ ವಾಹನದ ಜೊತೆಗೆ ಬೆಂಗಾವಲು ವಾಹನ ಪಡೆ ಹಾಗೂ ಆಂಬ್ಯುಲೆನ್ಸ್​ ಕೂಡ ಇರಲಿದೆ. ಅಯ್ಯಪ್ಪ ಸ್ವಾಮಿ ದೇಗುಲ ಸಾಗುವ ರಸ್ತೆ ಮತ್ತು ಸಾಂಪ್ರದಾಯಿಕ ಚಾರಣ ಮಾರ್ಗದ ಮೂಲಕ ಅವರು ಸನ್ನಿಧಾನಂ ತಲುಪಲಿದ್ದಾರೆ. ಭದ್ರತಾ ವ್ಯವಸ್ಥೆಗಳನ್ನು ಈಗಾಗಲೇ ಬಲಪಡಿಸಲಾಗಿದ್ದು, ಇತ್ತೀಚೆಗೆ ಬೆಂಗಾವಲು ಪಡೆ ಚಲನೆಯ ಪೂರ್ವಾಭ್ಯಾಸ ನಡೆಸಲಾಗಿದೆ ಎಂದು ಟಿಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Share This Article