ಫತೇಪುರ, ಅಕ್ಟೋಬರ್ 20: ಉತ್ತರ ಪ್ರದೇಶದ ಪಟಾಕಿ ಮಾರುಕಟ್ಟೆಯಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 65 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಫತೇಪುರದಲ್ಲಿ ಪಟಾಕಿ ಮಾರುಕಟ್ಟೆ ಸುಟ್ಟು ಭಸ್ಮವಾಗಿದೆ. ಈ ವೇಳೆ 3 ಕೋಟಿ ರೂಪಾಯಿ ಮೌಲ್ಯದ ಪಟಾಕಿಗಳು ಸುಟ್ಟು ಹೋಗಿವೆ. ಬೆಂಕಿ ಹೊತ್ತಿಕೊಂಡು ಪಟಾಕಿಗಳು ಸಿಡಿಯತೊಡಗಿದಂತೆ 2 ಕಿಲೋಮೀಟರ್ ವರೆಗೆ ಶಬ್ದ ಕೇಳಿಬಂದಿದೆ. 50ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ. ಆದರೆ, ಸ್ಥಳದಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.