ರಾಯಬಾಗ: ಬೆಳಗಾವಿ ಡಿಸಿಸಿ ಬ್ಯಾಂಕ ನಿರ್ದೇಶಕರಾಗಿ 5ನೇ ಬಾರಿ ಚುನಾಯಿತರಾದ ಅಪ್ಪಾಸಾಹೇಬ ಕುಲಗುಡೆ ಅವರನ್ನು ಪಟ್ಟಣದ ನಾಗರಿಕರು, ಅಭಿಮಾನಿಗಳು ಸೋಮವಾರ ಅದ್ದೂರಿಯಿಂದ ಸ್ವಾಗತಿಸಿ, ಸತ್ಕರಿಸಿದರು.
ಬಿಡಿಸಿಸಿ ಬ್ಯಾಂಕನ ತಾಲೂಕಾ ನಿಯಂತ್ರಣಾಧಿಕಾರಿ ಎಸ್.ಬಿ.ಪಾಟೀಲ, ರಾಮಚಂದ್ರ ನಿಶಾನದಾರ, ಅಣ್ಣಾಸಾಹೇಬ ಕುಲಗುಡೆ, ಪಾರೀಶ ಉಗಾರೆ, ಆರ್.ಎಸ್.ಶಿರಗಾಂವೆ, ಜ್ಯೋತಿ ಕೆಂಪಟ್ಟಿ, ದೀಲಿಪ ಜಮಾದಾರ, ಅಜ್ಜಪ್ಪ ಕುಲಗುಡೆ, ಗೋವಿಂದ ಕುಲಗುಡೆ, ನಾರಾಯಣ ಮೇತ್ರಿ, ಶ್ರೀಧರ ಕುಡಚೆ, ನಾಮದೇವ ಕಾಂಬಳೆ, ಶಿವಪ್ಪ ಕುಲಗುಡೆ, ಕೃಷ್ಣಾ ಕೋಟಿವಾಲೆ, ಶ್ರವಣಕುಮಾರ ಕಾಂಬಳೆ ಹಾಗೂ ಪಿಕೆಪಿಎಸ್ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ರಾಯಬಾಗ ಬಿಡಿಸಿಸಿ ಬ್ಯಾಂಕನ ಸಿಬ್ಬಂದಿ ಇದ್ದರು.